ಜಯನಗರದಲ್ಲಿ ಆರೆಸ್ಸೆಸ್‌ ಯಶಸ್ವಿ ಪಥ ಸಂಚಲನ

KannadaprabhaNewsNetwork |  
Published : Oct 26, 2026, 03:00 AM IST
ಸುರಂಗದೊಳಗೆ ನೀರು ಸೋರಿಕೆಯಾಗಿ ಗುಂಡಿಗಳು ಬಿದ್ದಿರುವುದು. | Kannada Prabha

ಸಾರಾಂಶ

ಮಾಜಿ ಪ್ರಧಾನಿಗಳಾದ ಜವಹರಲಾಲ್‌ ನೆಹರೂ, ಇಂದಿರಾಗಾಂಧಿ ಕೂಡ ಹೇರದಂಥ ನಿರ್ಬಂಧಗಳನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ಆರ್‌ಎಸ್‌ಎಸ್‌ ಪಥ ಸಂಚಲನದ ಮೇಲೆ ಹೇರಿದೆ. ಆದರೂ ಎಲ್ಲ ಕಡೆ ಯಶಸ್ವಿಯಾಗಿ ಪಥ ಸಂಚಲನ ನಡೆದಿದೆ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾಜಿ ಪ್ರಧಾನಿಗಳಾದ ಜವಹರಲಾಲ್‌ ನೆಹರೂ, ಇಂದಿರಾಗಾಂಧಿ ಕೂಡ ಹೇರದಂಥ ನಿರ್ಬಂಧಗಳನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ಆರ್‌ಎಸ್‌ಎಸ್‌ ಪಥ ಸಂಚಲನದ ಮೇಲೆ ಹೇರಿದೆ. ಆದರೂ ಎಲ್ಲ ಕಡೆ ಯಶಸ್ವಿಯಾಗಿ ಪಥ ಸಂಚಲನ ನಡೆದಿದೆ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್ ಹೇಳಿದರು.

ವಿಜಯದಶಮಿ ಪ್ರಯುಕ್ತ ಜಯನಗರದಲ್ಲಿ ಭಾನುವಾರ ಆಯೋಜಿಸಿದ್ದ ಪಥ ಸಂಚಲನದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಆರ್‌ಎಸ್‌ಎಸ್‌ ಪಥ ಸಂಚಲನದ ಮೇಲೆ ಕಾಂಗ್ರೆಸ್ ಸರ್ಕಾರ ಈ ಬಾರಿ ಅನೇಕ ನಿರ್ಬಂಧಗಳನ್ನು ಹೇರಿದೆ. ಕೊನೆಯ ಸಮಯದವರೆಗೂ ಅನುಮತಿ ನೀಡಲು ಸತಾಯಿಸಿದೆ. ಸರ್ಕಾರದ ಕಿರುಕುಳದ ನಡುವೆಯೂ ಆರ್‌ಎಸ್‌ಎಸ್‌ನಿಂದ ವಿಜೃಂಭಣೆಯಿಂದ ಶಾಂತಿಯುತ ಪಥ ಸಂಚಲನ ನಡೆಸಲಾಗಿದೆ ಎಂದರು.

ಕಾಂಗ್ರೆಸ್‌ಗೆ ಹಣ ಎಲ್ಲಿಂದ ಬರುತ್ತಿದೆ:

ಆರ್‌ಎಸ್‌ಎಸ್‌ಗೆ ಬರುವ ಅನುದಾನದ ಬಗ್ಗೆ ಆರೋಪಿಸುವವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಎಲ್ಲಿಂದ ಹಣ ಬರುತ್ತಿದೆ ಎಂದು ಕೇಳಬೇಕಾಗುತ್ತದೆ. ಕಾಂಗ್ರೆಸ್‌ಗೆ ಪಾಕಿಸ್ತಾನದಿಂದ, ಬಾಂಗ್ಲಾದೇಶದಿಂದ, ಅಮೆರಿಕದಿಂದ ಸಹಾಯಧನ ಬರುತ್ತಿದೆಯೇ? ಆರ್‌ಎಸ್‌ಎಸ್‌ ವಿದೇಶದಿಂದ ಹಣ ಕೇಳುವುದಿಲ್ಲ. ಕಾಕ್ರೋಚ್‌ ಜನತಾ ಪಾರ್ಟಿಯೊಂದಿಗೆ ಶಾಮೀಲಾದ ಕಾಂಗ್ರೆಸ್‌ ಪಕ್ಷ ಹೊರದೇಶಗಳಿಂದ ಹಣ ಬರುವಂತೆ ಮಾಡಿ ಆ ಹಣವನ್ನು ತಾನೇ ಪಡೆದುಕೊಂಡಿದೆ. ಆ ರೀತಿ ಸಂಘ ಎಂದಿಗೂ ಮಾಡುವುದಿಲ್ಲ ಎಂದು ಹೇಳಿದರು.

ಪ್ರಿಯಾಂಕ್ ಖರ್ಗೆ ಹುಷಾರಾಗಿರಿ:

ದೇಶಪ್ರೇಮ ಬೆಳೆಸುವ ಕೆಲಸವನ್ನು ಮಾತ್ರ ಸಂಘ ಮಾಡುತ್ತದೆ. ಭಾರತಮಾತೆಗೆ ಜೈ ಎನ್ನುವ, ವಂದೇಮಾತರಂ ಎನ್ನುವ ಪ್ರೇರಣೆಯನ್ನು ಸಂಘ ನೀಡುತ್ತದೆ. ಆರ್‌ಎಸ್‌ಎಸ್‌ ಬಗ್ಗೆ ಮಾತಾಡುವಾಗ ಸಚಿವ ಪ್ರಿಯಾಂಕ್‌ ಖರ್ಗೆ ಹುಷಾರಾಗಿರಬೇಕು. ಇಲ್ಲವಾದರೆ ಬೀದಿಗಳಲ್ಲಿ ಓಡಿಸುತ್ತಾರೆ. ಇದೇ ಮಾತನ್ನು ಮುಖ್ಯಮಂತ್ರಿಗಳಿಂದ ಹೇಳಿಸಲಿ. ಎಲ್ಲದಕ್ಕೂ ಇವರೇ ಮಾತಾಡುತ್ತಾರೆ. ಮುಖ್ಯಮಂತ್ರಿ ಮೌನ ವ್ರತ ಮಾಡುತ್ತಿದ್ದಾರಾ ಎಂದು ಆರ್‌.ಅಶೋಕ್‌ ಪ್ರಶ್ನಿಸಿದರು.

ಕಳೆದ ನೂರು ವರ್ಷಗಳಿಂದ ಪ್ರತಿ ವಿಜಯಶಮಿಯ ಸಮಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಪಥ ಸಂಚಲನ ನಡೆಯುತ್ತಿದೆ. ಇದು ದೇಶಾದ್ಯಂತ ನಡೆಯುತ್ತಿದ್ದು, 50 ವರ್ಷಗಳಿಂದ ನಾನು ಸಂಘದ ಸ್ವಯಂಸೇವಕನಾಗಿ ಭಾಗವಹಿಸುತ್ತಿದ್ದೇನೆ. ಈ ಕುರಿತು ನನಗೆ ಬಹಳ ಹೆಮ್ಮೆ ಇದೆ ಎಂದು ಹೇಳಿದರು.

ಆರ್‌ಎಸ್‌ಎಸ್‌ ಎಂದರೆ ದೇಶಾಭಿಮಾನ ಬೆಳೆಸುವ ಹಾಗೂ ದೇಶಕ್ಕೆ ಸಂಕಷ್ಟ ಬಂದಾಗ ದೇಶದ ಜತೆ ನಿಲ್ಲುವ ಸಂಘಟನೆ. ಇದು ಸಾಮಾಜಿಕ ಸೇವಾ ಸಂಘಟನೆ. ಪ್ರಕೃತಿ ವಿಕೋಪಗಳಾದಾಗ, ಯುದ್ಧಗಳಾದಾಗ ದೇಶದ ಪರವಾಗಿ ನಿಲ್ಲುವ ಕೆಲಸವನ್ನು ಆರ್‌ಎಸ್‌ಎಸ್‌ ಮಾಡಿದೆ. 175 ದೇಶಗಳಲ್ಲಿ ಸಂಘ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಟಿಂಗ್‌ ಆಪರೇಷನ್‌ ಬಗ್ಗೆ ಹೈಕಮಾಂಡ್‌ಮಧ್ಯಪ್ರವೇಶ ಆಗ್ರಹ ಸರಿಯಲ್ಲ: ಪರಂ
ಉದ್ಘಾಟನ ಆದ 4 ತಿಂಗಳಲ್ಲೇ ಕೃಷ್ಣ ರಸ್ತೆ ಗುಂಡಿಮಯ