ಕನ್ನಡಪ್ರಭ ವಾರ್ತೆ ಹಾಸನ
ನಗರದ ಮಂಜುನಾಥ ಆಸ್ಪತ್ರೆಯಲ್ಲಿ ಇಂತಹದೊಂದು ವಿಚಿತ್ರವಾದ ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡ ನರಶಸ್ತ್ರಚಿಕಿತ್ಸಕರಾದ ಡಾ.ಅಮೋಘ್ ಗೌಡ ಹಾಗೂ ಅವರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಕುರಿತಂತೆ ಮಂಗಳವಾರ ತಮ್ಮ ಆಸ್ಪತ್ರೆಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
10 ತಿಂಗಳ ಮಗುವಿನ ಬೆನ್ನಿನಲ್ಲಿ ಕೂದಲು: ಹಾಸನದವರೇ ಆದ ದಂಪತಿಗೆ ಈಗ್ಗೆ ಹತ್ತು ತಿಂಗಳ ಹಿಂದೆ ಗಂಡು ಮಗು ಜನಿಸಿತ್ತು. ಗಂಡು ಸಂತಾನದಿಂದ ಕುಟುಂಬದವರೆಲ್ಲಾ ಸಂತೋಷದಿಂದಲೇ ಇದ್ದರು. ಆದರೆ, ಮಗು ಬೆಳೆಯುತ್ತಾ ಬೆಳೆಯುತ್ತಾ ಅದರ ಬೆನ್ನಿನ ಸೊಂಟದ ಭಾಗದಲ್ಲಿ ಜುಟ್ಟಿನ ರೀತಿಯಲ್ಲಿ ಒಂದಷ್ಟು ಕೂದಲು ಬೆಳೆಯತೊಡಗಿತ್ತು. ಈ ಕೂದಲು ನೋಡನೋಡುತ್ತಿದ್ದಂತೆ ಉದ್ದವಾಗಿ ಬೆಳೆಯುತ್ತಿತ್ತು. ಇದನ್ನು ಗಮನಿಸಿದ ಮಗುವಿನ ಪೋಷಕರು ಕಳೆದ ಜುಲೈ 30ರಂದು ಮಂಜುನಾಥ ಆಸ್ಪತ್ರೆಯ ಹೊರರೋಗಿ ವಿಭಾಗಕ್ಕೆ ಕರೆತಂದಿದ್ದಾರೆ. ಮಗುವನ್ನು ತಪಾಸಣೆ ಮಾಡಿದ ವೈದ್ಯರು ಮಗುವಿನ ಬೆನ್ನಿನ ಮೂಳೆಯಲ್ಲಿ ಸಮಸ್ಯೆ ಇರಬಹುದೆಂದು ಶಂಕಿಸಿ ಮಕ್ಕಳ ತಜ್ಞರಾದ ಡಾ. ಪ್ರೀತಂ ರವರ ಸಲಹೆ ಪಡೆದು ಎಂಆರ್‌ಐ ಸ್ಕ್ಯಾನ್ ಮಾಡಿದ್ದಾರೆ. ಈ ಸ್ಕ್ಯಾನ್ ಮಾಡಿದ ನಂತರ ಮಗುವಿನ ಬೆನ್ನಿನ ಮೂಳೆಯಲ್ಲಿ ದೋಷ ಪತ್ತೆಯಾಗಿದೆ. ಅದೇನೆಂದರೆ, ಸಾಮಾನ್ಯವಾಗಿ ಬೆನ್ನಿನ ಮೂಳೆ ಕುತ್ತಿಗೆಯ ಭಾಗದಿಂದ ಸೊಂಟದಿಂದ ಕೆಳಭಾಗದವರೆಗೂ ಒಂದೇ ಎಳೆಯಲ್ಲಿ ಇರುತ್ತದೆ. ಆದರೆ, ಈ ಮಗುವಿನ ಬೆನ್ನು ಮೂಳೆ ಒಂದು ಹಂತದಲ್ಲಿ ಸೀಳಿದಂತೆ ಎರಡು ಎಳೆಯಾಗಿತ್ತು (ಸ್ಪ್ಲಿಟ್ ಕಾರ್ಡ್ ಮಲ್ಪಿಫಾರ್‍ಮೇಶನ್). ಈ ಎರಡು ಬೆನ್ನು ಮೂಳೆಗಳ ನಡುವೆ ಕೆಲ ನರಗಳು ಸೇರಿಕೊಂಡಿದ್ದವು.ಇದರಿಂದ ಮುಂದೆ ಏನಾಗಬಹುದು?
ಸತತ 8 ಗಂಟೆಗಳ ಶಸ್ತ್ರಚಿಕಿತ್ಸೆ: ಜುಲೈ 30ಕ್ಕೆ ಮಗುವನ್ನು ಆಸ್ಪತ್ರೆಗೆ ಕರೆತರಲಾಯಿತು. ಮಗುವಿನ ಪರಿಸ್ಥಿತಿಯ ಗಂಭೀರತೆ ಅರಿತು ಜುಲೈ ೩೧ರಂದೇ ಶಸ್ತ್ರಚಿಕಿತ್ಸೆ ಮಾಡಲಾಯಿತು. ಅಂದು ಬೆಳಗ್ಗೆ ೬ ಗಂಟೆಯಿಂದ ಮಧ್ಯಾಹ್ನ ೨ ಗಂಟೆವರೆಗೂ ಸತತ ೮ ಗಂಟೆಗಳ ಕಾಲ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಯಿತು ಎಂದು ಹೇಳಿದರು.
ಶಸ್ತ್ರಚಿಕಿತ್ಸೆ ವೇಳೆ ಅರಿವಳಿಕೆ ತಜ್ಞರ ಪಾತ್ರ ಬಹಳ ಮುಖ್ಯದ್ದಾಗಿರುತ್ತದೆ. ಅದರಲ್ಲೂ ಹತ್ತು ತಿಂಗಳ ಮಗು ಎಂದರೆ ಬಹಳ ಸೂಕ್ಷ್ಮದ್ದಾಗಿರುತ್ತದೆ. ಮಗುವಿನ ತೂಕ ಮತ್ತು ದೈಹಿಕ ಸ್ಥಿತಿ ಆಧರಿಸಿ ಅರಿವಳಿಕೆ ನೀಡಬೇಕಾಗುತ್ತದೆ. ಅದರಲ್ಲೂ ಶಸ್ತ್ರಚಿಕಿತ್ಸೆ ವೇಳೆ ಚಿಕ್ಕ ಮಕ್ಕಳ ದೇಹದ ಉಷ್ಣತೆ ಇಳಿಮುಖವಾಗಿಬಿಡುತ್ತದೆ. ಹಾಗಾಗಿ ಮಗುವಿನ ಸುತ್ತಲೂ ಹತ್ತಿ ಇಟ್ಟು ಒಂದೇ ಸಮನಾದ ಉಷ್ಣತೆಯನ್ನು ಕಾಪಾಡುವ ಜತೆಗೆ ಮಗುವಿನ ದೇಹಸ್ಥಿತಿಗೆ ಅನುಗುಣವಾಗಿ ಅರಿವಳಿಕೆ ತಜ್ಞರಾದ ಡಾ.ಸುಹಾಸ್ ಕೂಡ ಅರಿವಳಿಕೆ ನೀಡಿ ಕ್ಷಣಕ್ಷಣದ ಮಾಹಿತಿಗನುಗುಣವಾಗಿ ಚಿಕಿತ್ಸೆ ನೀಡಿದ್ದರಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲು ಕಾರಣವಾಯಿತು ಎಂದು ತಿಳಿಸಿದರು.
ಈ ವೇಳೆ ಅರಿವಳಿಕೆ ತಜ್ಞರಾದ ಡಾ. ಬಿ.ಎಂ. ಸುಹಾಸ್, ಮಕ್ಕಳ ತಜ್ಞರಾದ ಡಾ. ಪ್ರೀತಂ ಹಾಗೂ ಯಶಸ್ವಿ ಶ್ಸಸ್ತ್ರಚಿಕಿತ್ಸೆ ಪಡೆದ ಮಗು ಹಾಗೂ ತಂದೆ ತಾಯಿ ಉಪಸ್ಥಿತರಿದ್ದರು.