ಬಡ ಜನತೆಯ ಹಸಿವು ನೀಗಿಸುವುದು ಪುಣ್ಯದ ಕಾರ್ಯ

KannadaprabhaNewsNetwork |  
Published : Aug 28, 2024, 12:47 AM IST
ಪೊಟೋ-ಪಟ್ಟಣದಲ್ಲಿ ನೂತನ ಇಂದಿರಾ ಕ್ಯಾಂಟೀನ್‌ ನ ಭೂಮಿ ಪೂಜೆಯನ್ನು  ಪುರಸಭೆಯ ನೂತನ ಅಧ್ಯಕ್ಷ ಯಲ್ಲವ್ವ ದುರುಗಣ್ಣವರ ನೆರವೇರಿಸಿದರು. | Kannada Prabha

ಸಾರಾಂಶ

ಕಾಂಗ್ರೆಸ್ ಸರ್ಕಾರ ಬಡ ಜನರ ಹಸಿವು ನೀಗಿಸುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ ಆರಂಭಿಸಲಾಗುತ್ತಿದೆ, ₹5 ಗಳಲ್ಲಿ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನ ₹10 ಗಳಿಗೆ ಊಟ ನೀಡುವ ಮಹತ್ವಾಕಾಂಕ್ಷಿ ಯೋಜನೆ ಕಾಂಗ್ರೆಸ್ ಕೊಡುಗೆಯಾಗಿದೆ

ಲಕ್ಷ್ಮೇಶ್ವರ: ಬಡ ಜನತೆಯು ಹಸಿವಿನಿಂದ ಮಲಗಬಾರದು ಎಂಬುದು ನಮ್ಮ ಸರ್ಕಾರದ ಆಶಯವಾಗಿದೆ. ಹಸಿವು ಮುಕ್ತ ಸಮಾಜ ಕಾಂಗ್ರೆಸ್ ವಾಗ್ದಾನವಾಗಿದೆ ಎಂದು ಪುರಸಭೆ ಸದಸ್ಯ ರಾಜು ಕುಂಬಿ ಹೇಳಿದರು.

ಮಂಗಳವಾರ ಪಟ್ಟಣದ ಶಿಗ್ಲಿ ಕ್ರಾಸ್ ಬಳಿ ನೂತನ ಇಂದಿರಾ ಕ್ಯಾಂಟೀನ್ ಭೂಮಿ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದರು.

ಬಡ ಜನತೆಗೆ ಒಂದು ಹೊತ್ತಿನ ಊಟಕ್ಕೂ ಪರದಾಡುವಂತ ಸ್ಥಿತಿ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ.ಆದ್ದರಿಂದ ಕಾಂಗ್ರೆಸ್ ಸರ್ಕಾರ ಬಡ ಜನರ ಹಸಿವು ನೀಗಿಸುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ ಆರಂಭಿಸಲಾಗುತ್ತಿದೆ, ₹5 ಗಳಲ್ಲಿ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನ ₹10 ಗಳಿಗೆ ಊಟ ನೀಡುವ ಮಹತ್ವಾಕಾಂಕ್ಷಿ ಯೋಜನೆ ಕಾಂಗ್ರೆಸ್ ಕೊಡುಗೆಯಾಗಿದೆ. ಲಕ್ಷ್ಮೇಶ್ವರ ಪಟ್ಟಣದ ಹಾಗೂ ತಾಲೂಕಿನ ಕೂಲಿ ಕಾರ್ಮಿಕರು ಹಾಗೂ ಬಡ ಜನತೆಯು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ವೇಳೆ ಸಾಹೀಬ್ ಜಾನ್ ಹವಾಲ್ದಾರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆ ಇದಾಗಿದೆ, ಈಗಾಗಲೆ ರಾಜ್ಯದ ಹಲವು ಪ್ರಮುಖ ಪಟ್ಟಣದ ಮತ್ತು ನಗರ ಪ್ರದೇಶಗಳಲ್ಲಿ ಈ ಯೋಜನೆ ಯಶಸ್ವಿಯಾಗಿದೆ. ಬಡ ಜನತೆಯು ಹಸಿವಿನಿಂದ ಬಳಬಾರದು ಎನ್ನುವುದು ಕಾಂಗ್ರೆಸ್ ಧ್ಯೇಯವಾಗಿದೆ ಎಂದು ಹೇಳಿದರು.

ಈ ವೇಳೆ ಪುರಸಭೆಯ ನೂತನ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ ಭೂಮಿ ಪೂಜೆಗೆ ಚಾಲನೆ ನೀಡಿದರು. ಉಪಾಧ್ಯಕ್ಷ ಫಿರ್ದೋಶ್ ಆಡೂರ, ಬಸವರಾಜ ಓದುನವರ, ಮಂಜವ್ವ ನಂದೆಣ್ಣವರ, ಮುಸ್ತಾಕ್ ಅಹ್ಮದ್ ಶಿರಹಟ್ಟಿ, ಫಕ್ಕೀರೇಶ ನಂದೆಣ್ಣವರ, ನೀಲಪ್ಪ ಶೆರಸೂರಿ, ಸಿದ್ದು ದುರಗಣ್ಣವರ, ಸದಾನಂದ ನಂದೆಣ್ಣವರ, ಇಸ್ಮಾಯಿಲ್ ಆಡೂರ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!