ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಸುಕೋ ಬ್ಯಾಂಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, 2014 ರಲ್ಲಿ ಯಾದಗಿರಿಯಲ್ಲಿ ಶಾಖೆ ಆರಂಭಿಸಲಾಯಿತು. ಅಂದಿನಿಂದ ಇಂದಿನವರೆಗೂ ಒಂದು ದಶಕಗಳ ಕಾಲ ಬ್ಯಾಂಕ್ ತನ್ನ ಸೇವೆಯನ್ನು ಮುಂದುವರೆಸಿಕೊಂಡು ಬಂದು ಎಲ್ಲ ವರ್ಗದ ಗ್ರಾಹಕರನ್ನು ತಲುಪಿದೆ. ಇದಕ್ಕೆ ಸಾರ್ವಜನಿಕರ ಸಹಕಾರ, ಬ್ಯಾಂಕ್ ಸಿಬ್ಬಂದಿ ಅವಿರತ ಶ್ರಮ ಕಾರಣ ಎಂದರು.
ಸುಕೋ ವಿವಿಧ ಬಗೆಯ ಸಾಲದ ಯೋಜನೆ ಪರಿಚಯಿಸಿದ್ದು, ಗ್ರಾಹಕರು ಲಾಭ ಪಡೆದುಕೊಳ್ಳಬೇಕು. ಬಂಗಾರದ ಆಭರಣಗಳ ಮೇಲೆ ಸಾಲ, ಮನೆ ನಿರ್ಮಾಣಕ್ಕಾಗಿ ಸಾಲ, ವಾಹನಗಳ ಖರೀದಿಗೆ ಸಾಲ, ಜಾಗ ಖರೀದಿ ಮಾಡಲು ಸಾಲ ಸೌಲಭ್ಯ ಲಭ್ಯವಿದೆ. ಜೊತೆಗೆ ಉಳಿತಾಯ ಖಾತೆಯ ಮೇಲೆ 7.5% ಹಾಗೂ ಸ್ಥಿರ ಠೇವಣಿಯ ಮೇಲೆ 9.5% ಬಡ್ಡಿದರ ಲಭ್ಯವಿದೆ. ಯಾದಗಿರಿ ಶಾಖೆಯಲ್ಲಿ ಅತಿ ಹೆಚ್ಚು ಸ್ಥಿತ ಠೇವಣಿ ಗ್ರಾಹಕರಿದ್ದಾರೆ. ಇದು ಹೆಮ್ಮೆಯ ಸಂಗತಿ ಎಂದರು. ನಗರದ ವಿವಿಧ ಗ್ರಾಹಕರು ಸಮಾರಂಭದಲ್ಲಿ ಭಾಗಿಯಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡು ಬ್ಯಾಂಕ್ ಗೆ ಶುಭಕೋರಿದರು.ನಿವೃತ್ತ ಸರ್ಕಾರಿ ನೌಕರರಾದ ರುದ್ರಪ್ಪ ಹಾಗೂ ವಿಜಯಕುಮಾರ ಮಾತನಾಡಿದರು. ಈ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿ ಪೂರ್ಣಿಮಾ, ಬಸವರಾಜ, ರವಿಕುಮಾರ, ಶಿವಲೀಲಾ ಹಾಗೂ ಶರಣಪ್ಪ ಇದ್ದರು.
------ಫೋಟೊ: ಯಾದಗಿರಿ ನಗರದ ಸುಕೋ ಬ್ಯಾಂಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
3ವೈಡಿಆರ್10