ನಿಂಗಾಪೂರದಲ್ಲಿ ದಿಢೀರ ಭೂಕುಸಿತ: ಗ್ರಾಮಸ್ಥರಲ್ಲಿ ಆತಂಕ

KannadaprabhaNewsNetwork |  
Published : Jun 03, 2026, 02:45 AM IST
2ಕೆಎಂಎನ್ ಡಿ19 | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುಧೋಳಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ನಿಂಗಾಪೂರ ಗ್ರಾಮದ ರಂಗನಗೌಡ ಕಮಕೇರಿ ಎಂಬುವರ ಕಬ್ಬಿನ ಹೊಲದಲ್ಲಿ (ಭೂಮಿಯಲ್ಲಿ) ಕಳೆದ 15 ದಿನಗಳ ಹಿಂದೆ 20 ಅಡಿ ಆಳ, 10 ಅಡಿ ಅಗಲ ಅಳತೆಯ ದಿಢೀರ ಭೂಕುಸಿತ ಉಂಟಾಗಿದೆ.

ಕನ್ನಡಪ್ರಭ ವಾರ್ತೆ ಮುಧೋಳ

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ನಿಂಗಾಪೂರ ಗ್ರಾಮದ ರಂಗನಗೌಡ ಕಮಕೇರಿ ಎಂಬುವರ ಕಬ್ಬಿನ ಹೊಲದಲ್ಲಿ (ಭೂಮಿಯಲ್ಲಿ) ಕಳೆದ 15 ದಿನಗಳ ಹಿಂದೆ 20 ಅಡಿ ಆಳ, 10 ಅಡಿ ಅಗಲ ಅಳತೆಯ ದಿಢೀರ ಭೂಕುಸಿತ ಉಂಟಾಗಿದೆ. ಈ ಕುರಿತು ಮುಧೋಳ ತಹಸೀಲ್ದಾರರಿಗೆ ಹಾಗೂ ಭೂ ವಿಜ್ಞಾನಿಗಳ ಗಮನಕ್ಕೆ ತಂದಾಗ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಇದರಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.

ಈ ಸಂಬಂಧ ರಂಗನಗೌಡ ಕಮಕೇರಿ ಅವರು ಪತ್ರಿಕೆಗೆ ಪ್ರಕ್ರಿಯಿಸಿ, ನಿಂಗಾಪೂರ ಗ್ರಾಮದ ಪಕ್ಕದಲ್ಲಿರುವ ಸಿಮೆಂಟ್ ಕಂಪನಿಯವರು ಸ್ಟೋನ್ ಬ್ಲಾಸ್ಟಿಂಗ್ ಮಾಡುವುದರಿಂದ ಸಿಮೆಂಟ್ ಕಾರ್ಖಾನೆಯ ಸುತ್ತಮುತ್ತಲಿನ ಮನೆಗಳಿಗೆ ದಕ್ಕೆ ಉಂಟಾಗುತ್ತಿದೆ. ಅಲ್ಲದೇ, ಕೆಲ ಭಾಗಗಳಲ್ಲಿ ಭೂಕುಸಿತ ಉಂಟಾಗುತ್ತಿದೆ. ಇದರಿಂದ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದು, ತಕ್ಷಣ ಸ್ಟೊನ್ ಬ್ಲಾಸ್ಟಿಂಗ್ ನಿಲ್ಲಿಸಬೇಕು ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ವಿನಂತಿಸಲಾಗಿದೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರಿಗೆ ಆನ್‌ಲೈನ್‌ ಹಾಜರಾತಿ ಧರ್ಮಸಂಕಟ !
ಕ್ರೆಡಿಟ್‌ಗಾಗಿ ಕಾಂಗ್ರೆಸ್-ಬಿಜೆಪಿ ಮಧ್ಯೆ ಪ್ರಚಾರ ಜೋರು!