ಮೂಲ್ಕಿ ಪೊಲೀಸ್ ಠಾಣೆಗೆ ಜಿಲ್ಲಾ ಹಿರಿಯ ನ್ಯಾಯಾಧೀಶರ ದಿಢೀರ್ ಭೇಟಿ: ಕಡತಗಳ ಪರಿಶೀಲನೆ

KannadaprabhaNewsNetwork |  
Published : Nov 14, 2024, 12:45 AM IST
ಮುಲ್ಕಿ ಪೊಲೀಸ್ ಠಾಣೆಗೆ ಜಿಲ್ಲಾ ಹಿರಿಯ ನ್ಯಾಯಾಧೀಶರ ದಿಢೀರ್ ಭೇಟಿ ಕಡತಗಳ ಪರಿಶೀಲನೆ | Kannada Prabha

ಸಾರಾಂಶ

ನ್ಯಾಯಾಧೀಶರು ಠಾಣೆಗೆ ದೂರು ನೀಡಲು ಬರುವವರಿಗೆ ಹೊರಗಡೆ ಕುಳಿತುಕೊಳ್ಳಿರಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಹಾಗೂ ಠಾಣೆಯ ಎದುರು ಭಾಗದಲ್ಲಿ ಸಮರ್ಪಕ ನಾಮಫಲಕ ಅಳವಡಿಸಲು ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ನ್ಯಾಯಾಧೀಶರಾದ ಶೋಭಾ ಬಿಜೆ ಅವರು ಮೂಲ್ಕಿ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿ ಪೊಲೀಸ್ ಠಾಣೆಯ ಸಿಬ್ಬಂದಿ ಕಾರ್ಯವೈಖರಿ ಹಾಗೂ ಕಡತಗಳ ಪರಿಶೀಲನೆ ನಡೆಸಿದರು.

ಈ ಸಂದರ್ಭ ನ್ಯಾಯಾಧೀಶರು ಠಾಣೆಗೆ ದೂರು ನೀಡಲು ಬರುವವರಿಗೆ ಹೊರಗಡೆ ಕುಳಿತುಕೊಳ್ಳಿರಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಹಾಗೂ ಠಾಣೆಯ ಎದುರು ಭಾಗದಲ್ಲಿ ಸಮರ್ಪಕ ನಾಮಫಲಕ ಅಳವಡಿಸಲು ಸೂಚನೆ ನೀಡಿದರು.

ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅತಿ ಸೂಕ್ಷ್ಮ ಪ್ರದೇಶವಾದ ಕೆಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ಪ್ರದೇಶದಲ್ಲಿ ಗಾಂಜಾ, ಡ್ರಗ್ಸ್ ಹಾಗೂ ಅಪರಾಧ ಪ್ರಕರಣಗಳು ವಿಪರೀತವಾಗುತ್ತಿದ್ದು ನಿಯಂತ್ರಿಸಬೇಕು. ಜನರಿಗೆ ಪೋಸ್ಕೋ ಕಾಯ್ದೆ ಬಗ್ಗೆ ಮಾಹಿತಿ ನೀಡಬೇಕು. ಅಪರಾಧಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಕೆ ಎಸ್ ರಾವ್‌ ನಗರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಾನೂನು ಮಾಹಿತಿ ಶೀಘ್ರ ನಡೆಸಬೇಕು ಎಂದು ಸೂಚನೆ ನೀಡಿದರು. ಈ ಸಂದರ್ಭ ಸ್ಥಳೀಯರು ಠಾಣೆಗೆ ನೂತನ ಗಸ್ತು ವಾಹನ ಹಾಗೂ ಮೂಲ್ಕಿ ತಾಲೂಕಿಗೆ ನೂತನ ನ್ಯಾಯಾಲಯ ಸ್ಥಾಪನೆಗೆ ನ್ಯಾಯಾಧೀಶರ ಬಳಿ ಮನವಿ ಮಾಡಿದರು. ಠಾಣಾ ಉಪ ನಿರೀಕ್ಷಕಿ ಅನಿತಾ, ಜಿಲ್ಲಾ ಕಾನೂನು ನೆರವು ಕೇಂದ್ರದ ಸಲಹೆಗಾರ ಮಂಜುನಾಥ ಆರ್ ಕೆ, ವಕೀಲರಾದ ಶಶಿಕುಮಾರ್ ಕೆ ಎಸ್ ರಾವ್ ನಗರ, ಮೂಲ್ಕಿ ಠಾಣೆಯ ಎ ಎಸ್ ಐ ಉಮೇಶ್, ಸಂಜೀವ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌