ಚಿಕ್ಕಗಿರಿ ರಂಗನಾಥ ಸ್ವಾಮಿ ಟ್ರಸ್ಟ್ ಅಧ್ಯಕ್ಷರಾಗಿ ಸುಧಾಕರ್ ಆಯ್ಕೆ

KannadaprabhaNewsNetwork |  
Published : Sep 17, 2024, 12:54 AM IST
ಚಿಕ್ಕಗಿರಿ ರಂಗನಾಥ ಸ್ವಾಮಿ ದೇವಾಲಯದ ಶ್ರೀ ಚಿಕ್ಕಗಿರಿರಂಗನಾಥ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ಆರ್ ಸುಧಾಕರ್ ಅವಿರೋಧವಾಗಿ ಆಯ್ಕೆಗೊಂಡ  ನಂತರ ಮಾತನಾಡಿದರು, | Kannada Prabha

ಸಾರಾಂಶ

ಬಸವಘಟ್ಟ ತಿರುಪತಿ ಹಳ್ಳಿ ಸಮೀಪ ಇರುವ ಚಿಕ್ಕಗಿರಿ ರಂಗನಾಥ ಸ್ವಾಮಿ ದೇವಾಲಯದ ಶ್ರೀ ಚಿಕ್ಕಗಿರಿರಂಗನಾಥ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ಆರ್‌ ಸುಧಾಕರ್‌ ಅವಿರೋಧವಾಗಿ ಆಯ್ಕೆಗೊಂಡರು.ಗೌರವ ಅಧ್ಯಕ್ಷರಾಗಿ ಬಿಎ ರಂಗಸ್ವಾಮಿ, ಉಪಾಧ್ಯಕ್ಷರುಗಳಾಗಿ ಬಿಎಸ್ ಪ್ರಕಾಶ್ ಮತ್ತು ಟಿ ಆರ್‌ ನಾಗರಾಜ್, ಕಾರ್ಯದರ್ಶಿ ಅಶೋಕ್ ನಾಡಿಗ್, ಖಜಾಂಚಿಯಾಗಿ ಬಿ.ಎ ರಾಮಚಂದ್ರ ಆಯ್ಕೆಗೊಂಡರು. ಕಾರ್ಯದರ್ಶಿ ಅಶೋಕ್ ಪ್ರತಿ ಮಾಹಿತಿಯನ್ನು ಆಡಳಿತ ಮಂಡಳಿಗೆ ನೀಡಲಾಗುತ್ತದೆ ಮತ್ತು ವಿಷಯಗಳನ್ನು ಹಂಚಿಕೊಂಡು ಈ ಕಾರ್ಯಕ್ರಮ ಯಶಸ್ಸಿಗೆ ಸಾಧ್ಯವಾಗುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಬಸವಘಟ್ಟ ತಿರುಪತಿ ಹಳ್ಳಿ ಸಮೀಪ ಇರುವ ಚಿಕ್ಕಗಿರಿ ರಂಗನಾಥ ಸ್ವಾಮಿ ದೇವಾಲಯದ ಶ್ರೀ ಚಿಕ್ಕಗಿರಿರಂಗನಾಥ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ಆರ್‌ ಸುಧಾಕರ್‌ ಅವಿರೋಧವಾಗಿ ಆಯ್ಕೆಗೊಂಡರು.

ನಗರದಲ್ಲಿ ನಡೆದ ಟ್ರಸ್ಟ್ ಸಭೆಯಲ್ಲಿ ಆಯ್ಕೆಗೊಂಡ ನಂತರ ಮಾತನಾಡಿದ ಅವರು, ನನ್ನ ಮೇಲೆ ವಿಶ್ವಾಸವಿಟ್ಟು ಎಲ್ಲರೂ ಆಯ್ಕೆ ಮಾಡಿದ್ದೀರಿ. ಪ್ರತಿ ಕಾರ್ಯಕ್ರಮ ಹಾಗೂ ಸಭೆಗಳಲ್ಲಿಯೂ ಸಹ ನಿಮ್ಮ ಸಹಕಾರ ಹೀಗೆ ಮುಂದುವರೆಯಲಿ ಎಂದರು. ನಮ್ಮ ಟ್ರಸ್ಟ್ ವತಿಯಿಂದ ದೇವಾಲಯದಲ್ಲಿ ನಡೆಸಿಕೊಂಡು ಬರುತ್ತಿರುವ ಶ್ರಾವಣ ಮಾಸದಲ್ಲಿನ ಕಾರ್ಯಕ್ರಮ ಹಾಗೂ ಧನುರ್ಮಾಸದಲ್ಲಿನ ಕಾರ್ಯಕ್ರಮಗಳನ್ನು ಎಂದಿನಂತೆ ನಡೆಸೋಣ ಎಂದರು. ಆ ಕಾರ್ಯಕ್ರಮಕ್ಕೆ ಬರುವ ಭಕ್ತಾದಿಗಳ ನಿರ್ವಹಣೆ, ಮತ್ತು ಧಾರ್ಮಿಕ ಪೂಜಾ ವಿಧಾನಗಳ ಇನ್ನೂ ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಲು ಎಲ್ಲರ ಸಹಕಾರವನ್ನು ಅವರು ಬಯಸಿದರು.

ಗೌರವ ಅಧ್ಯಕ್ಷರಾಗಿ ಬಿಎ ರಂಗಸ್ವಾಮಿ, ಉಪಾಧ್ಯಕ್ಷರುಗಳಾಗಿ ಬಿಎಸ್ ಪ್ರಕಾಶ್ ಮತ್ತು ಟಿ ಆರ್‌ ನಾಗರಾಜ್, ಕಾರ್ಯದರ್ಶಿ ಅಶೋಕ್ ನಾಡಿಗ್, ಖಜಾಂಚಿಯಾಗಿ ಬಿ.ಎ ರಾಮಚಂದ್ರ ಆಯ್ಕೆಗೊಂಡರು, ನಿರ್ದೇಶಕರುಗಳಾದ ಕೃಷ್ಣಮೂರ್ತಿ ಸುರೇಶ್ ಸುಬ್ರಹ್ಮಣ್ಯ ವಾಸು ಶ್ರೀಧರ್ ರಮೇಶ್ ಕುಮಾರ್, ಸುಬ್ರಹ್ಮಣ್ಯ, ಶ್ರೀನಿವಾಸಮೂರ್ತಿ, ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿ ಸಭೆಯನ್ನು ಪ್ರತಿ ತಿಂಗಳು ನಡೆಸಬೇಕು, ಸಭೆಗೆ ಪ್ರತಿಯೊಬ್ಬ ನಿರ್ದೇಶಗಳು ಕಡ್ಡಾಯವಾಗಿ ಹಾಜರಾಗುವ ಮೂಲಕ ಉತ್ತಮ ಸಲಹೆ ಸಹಕಾರವನ್ನು ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯದರ್ಶಿ ಅಶೋಕ್ ಪ್ರತಿ ಮಾಹಿತಿಯನ್ನು ಆಡಳಿತ ಮಂಡಳಿಗೆ ನೀಡಲಾಗುತ್ತದೆ ಮತ್ತು ವಿಷಯಗಳನ್ನು ಹಂಚಿಕೊಂಡು ಈ ಕಾರ್ಯಕ್ರಮ ಯಶಸ್ಸಿಗೆ ಸಾಧ್ಯವಾಗುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಬ್ಯಾಂಕ್ ಖಾತೆ ಬದಲಾವಣೆಗೆ ತುರ್ತಾಗಿ ಅಗತ್ಯ ಕ್ರಮ ಅನುಸರಿಸಲಾಗುವುದು, ಸದಸ್ಯರಿಗೆ ನೀಡಬೇಕಾದ ಮಾಹಿತಿಯನ್ನು ಸಕಾಲದಲ್ಲಿ ನೀಡಲಾಗುವುದು ಎಂದ ಅವರು, ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳೋಣ ಎಂದರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ