23 ರವರೆಗೆ ರಿಯಾಯತಿ ದರದಲ್ಲಿ ಸಕ್ಕರೆ ವಿತರಣೆ

KannadaprabhaNewsNetwork |  
Published : Jul 10, 2025, 01:46 AM IST
ಧನಲಕ್ಷ್ಮೀ ಸಕ್ಕರೆ ಕಾರ್ಖಾನೆಯಲ್ಲಿ ಷೇರುದಾರರಿಗೆ ರಿಯಾಯತಿ ದರದಲ್ಲಿ ಸಕ್ಕರೆ ವಿತರಣೆಗೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಶ್ರೀ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ದೇಶದಲ್ಲಿ ಮಾದರಿ ಸಕ್ಕರೆ ಕಾರ್ಖಾನೆಯಾಗಿದ್ದು, ಇದು ಷೇರುದಾರರೇ ಮಾಲೀಕರಾಗಿರುವ ಕಾರ್ಖಾನೆಯಾಗಿದೆ. ಷೇರುದಾರರ ಹಿತ ಕಾಪಾಡುವುದು ನಮ್ಮ ಧ್ಯೇಯವಾಗಿದೆ. ಷೇರುದಾರರು ಹಿಂದಿನಂತೆ ಬರುವ ದಿನಗಳಲ್ಲಿ ಕೂಡಾ ಸಹಕಾರ ನೀಡಬೇಕು ಎಂದು ಶ್ರೀಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಶ್ರೀ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ದೇಶದಲ್ಲಿ ಮಾದರಿ ಸಕ್ಕರೆ ಕಾರ್ಖಾನೆಯಾಗಿದ್ದು, ಇದು ಷೇರುದಾರರೇ ಮಾಲೀಕರಾಗಿರುವ ಕಾರ್ಖಾನೆಯಾಗಿದೆ. ಷೇರುದಾರರ ಹಿತ ಕಾಪಾಡುವುದು ನಮ್ಮ ಧ್ಯೇಯವಾಗಿದೆ. ಷೇರುದಾರರು ಹಿಂದಿನಂತೆ ಬರುವ ದಿನಗಳಲ್ಲಿ ಕೂಡಾ ಸಹಕಾರ ನೀಡಬೇಕು ಎಂದು ಶ್ರೀಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಹೇಳಿದರು.

ಕಾರ್ಖಾನೆಯ ಆವರಣದಲ್ಲಿ ಷೇರುದಾರರಿಗೆ ರಿಯಾಯತಿ ದರದಲ್ಲಿ ಸಕ್ಕರೆ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ 13 ವರ್ಷಗಳಿಂದ ಕಾರ್ಖಾನೆ ಆರಂಭಕ್ಕೆ ಷೇರು ನೀಡುವ ಮೂಲಕ ಸಹಕಾರ ನೀಡಿರುವ ಷೇರುದಾರರಿಗೆ ಪಂಚಮಿ ಹಬ್ಬದ ನಿಮಿತ್ತ ರಿಯಾಯತಿ ದರದಲ್ಲಿ ಸಕ್ಕರೆ ನೀಡುತ್ತಿದ್ದೇವೆ. ಸಂಕಷ್ಟದಲ್ಲಿ ಷೇರು ಹಣ ನೀಡುವ ಮೂಲಕ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆಗೆ ಶ್ರಮಿಸಿರುವ ರೈತರು ಬದುಕಲ್ಲಿ ಸಿಹಿ ಕಾಣುವಂತಾಗಲಿ ಎನ್ನುವುದೇ ಆಡಳಿತ ಮಂಡಳಿಯ ಉದ್ದೇಶವಾಗಿದೆ ಎಂದರು.

ಮಾಜಿ ಶಾಸಕ ಮಹಾದೇವಪ್ಪ ಯಾದವಡ ಮಾತನಾಡಿ, 2015 ರಿಂದ ನಮ್ಮ ಗುಂಪು ಆಡಳಿತದಲ್ಲಿದ್ದು, ಷೇರುದಾರರಿಗೆ ರಿಯಾಯತಿ ದರದಲ್ಲಿ ಸುಮಾರು ₹50 ಕೋಟಿಗೂ ಅಧಿಕ ಲಾಭಾಂಶವನ್ನು ಆಡಳಿತ ಮಂಡಳಿ ನೀಡಿದೆ. ಇದಕ್ಕೆಲ್ಲ ಷೇರುದಾರರ ಸಹಕಾರ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ನಮ್ಮ ಗುಂಪಿಗೆ ಶ್ರೀಗಳು ಸೇರಿದಂತೆ ಎಲ್ಲರೂ ಆಶೀರ್ವಾದ ಮಾಡಬೇಕು ಎಂದು ಕೋರಿದರು.ಕಿಲ್ಲಾತೊರಗಲ್‌ದ ಚನ್ನಮಲ್ಲ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ಕಾರ್ಖಾನೆ ಆರಂಭಕ್ಕೆ ಶ್ರಮಿಸಿರುವ ಹಿರಿಯರನ್ನು ಸ್ಮರಿಸಿಕೊಳ್ಳುವ ಕೆಲಸವಾಗಬೇಕಿದೆ. ಸಂಸ್ಥಾಪಕರ ಶ್ರಮದಿಂದ ಕಾರ್ಖಾನೆ ಆರಂಭವಾಗಿದ್ದು, ಮುಂದೆ ಕೂಡಾ ಎಲ್ಲೂ ಸಹಕಾರದಿಂದ ಕಾರ್ಖಾನೆ ಮುನ್ನೇಡಸಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕಿ ಶಾಹೀನ್ ಅಖ್ತರ್‌, ಪ್ಯಾರಿ ಶುಗರ್‌ನ ವ್ಯವಸ್ಥಾಪಕ ಶಿವಸುಬ್ರಮಣ್ಯ, ನಿರ್ದೇಶಕರಾದ ಬಸವರಾಜ ತುಪ್ಪದ, ದುಂಡಪ್ಪ ದೇವರಡ್ಡಿ, ನೀಲಪ್ಪ ಚಾಕಲಬ್ಬಿ, ಶಶಿಕಲಾ ಸೋಮಗೊಂಡ, ಐ.ಎಸ್.ಹರನಟ್ಟಿ, ಎಂ.ಎಂ.ಆತಾರ ಸೇರಿದಂತೆ ಹಲವರಿದ್ದರು. ಉಪಾಧ್ಯಕ್ಷ ಬಸನಗೌಡ ದ್ಯಾಮನಗೌಡ್ರ ಸ್ವಾತಿಸಿದರು. ನಿರ್ದೇಶಕ ಎ.ಸಿ.ಸುರಗ ವಂದಿಸಿದರು.ನವೆಂಬರ್‌ ತಿಂಗಳಲ್ಲಿ ನಡೆಯುವ ಆಡಳಿತ ಮಂಡಳಿ ಚುನಾವಣೆಯಲ್ಲಿ ಕಾರ್ಖಾನೆಯ ಷೇರುದಾರರು ಮತ್ತೊಮ್ಮೆ ಆಡಳಿತ ಮಂಡಳಿಗೆ ಆಶೀರ್ವಾದ ಮಾಡುವ ಮೂಲಕ ದೇಶದಲ್ಲಿ ಮಾದರಿ ಕಾರ್ಖಾನೆಯನ್ನಾಗಿ ಮಾಡಲು ಅವಕಾಶ ನೀಡಬೇಕು. ಯಾವುದೇ ವದಂತಿಗಳಿಗೆ ಕಿವಿಗೊಡದೇ ಸ್ವಚ್ಛ ಆಡಳಿತ ನೀಡಲು ಸಹಕಾರ ನೀಡಬೇಕು. ಜು.23 ರವರೆಗೆ ಸಕ್ಕರೆ ವಿತರಣೆ ನಡೆಯಲಿದ್ದು, ಎಲ್ಲ ಷೇರುದಾರರು ಸಕ್ಕರೆ ಪಡೆಯಬೇಕು.

-ಮಲ್ಲಣ್ಣ ಯಾದವಾಡ,

ಶ್ರೀಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷರು.

PREV