ಚವಡಾಪುರ: ಅಫಜಲಪುರ ಕಲಬುರಗಿ ರಾಹೆ ಅತನೂರ ಗ್ರಾಮದ ಆದರ್ಶ ಆಂಗ್ಲ ಮಾಧ್ಯಮ ಶಾಲೆಯ ಬಳಿ ಕಬ್ಬು ತುಂಬಿದ ಟ್ರ್ಯಾಕ್ಟರ್ ಮುಗುಚಿ ಬಿದ್ದ ಪರಿಣಾಮ ಕಬ್ಬು ಹೆದ್ದಾರಿ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.ಕಬ್ಬಿನ ಟ್ರ್ಯಾಕ್ಟರ್ ಹಿಂಬದಿಯ ಗಾಲಿಯ ಮುರಿದ ಪರಿಣಾಮ ಟ್ರ್ಯಾಕ್ಟರ್ ಮುಗುಚಿ, ಕಬ್ಬು ಹೆದ್ದಾರಿ ಮೇಲೆ ಚೆಲ್ಲಾಪಿಲ್ಲಿಯಾಗಿದೆ. ವಿಷಯ ತಿಳಿದ ರೈತ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಕಬ್ಬು ಹಾಳಾಗಿದೆ ಎನ್ನಲಾಗಿದೆ. ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಮೇಶ ಹೂಗಾರ ಮಾತನಾಡಿ,ವಾಹನಗಳ ಗುಣಮಟ್ಟ ಪರೀಕ್ಷಿಸದೆ ಮಾಡುವ ಚಾಲನೆಯಿಂದಾಗಿ ಇಂತಹ ಅವಗಢಗಳು ಸಂಭವಿಸಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾಡುತ್ತಿವೆ. ಚಾಲಕರು ರೈತರ ಕಬ್ಬು ಎಂದುಕೊಳ್ಳುವ ಬದಲಾಗಿ ತಮ್ಮದೇ ಗದ್ದೆಯ ಕಬ್ಬು ಎಂದುಕೊಂಡು ಜೋಪಾನವಾಗಿ ಕಾರ್ಖಾನೆಗೆ ತಲುಪಿಸಿದರೆ ರೈತರ ನಿಟ್ಟುಸಿರಿನ ಸಮಾಧಾನ ನಿಮಗೆ ಆಶೀರ್ವಾದವಾಗಿದೆ ಎಂದು ಕಳವಳ ವ್ಯಕ್ತ ಪಡಿಸಿದರು.