ಬೇಲೂರು: ಆಕಸ್ಮಿಕ ಬೆಂಕಿಗೆ ಕಬ್ಬಿನ ಹೊಲ, ಲಕ್ಷಾಂತರ ಮೌಲ್ಯದ ಪಂಪ್‌ಗಳು ಮತ್ತು ತೆಂಗಿನಮರಗಳು ಸುಟ್ಟುಬೂದಿಯಾದ ಘಟನೆ ತಾಲೂಕಿನ ಹೆಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ದೊಡ್ಡಬ್ಯಾಡಿಗೆರೆ ಗ್ರಾಮದಲ್ಲಿ ನಡೆದಿದೆ. ರೈತೆ ಚಂದ್ರಮ್ಮ ಕೊಂ ನಂಜುಂಡಪ್ಪ ರವರ ಸರ್ವೆ ನಂ ೧೫೭ ರಲ್ಲಿನ ೨ ಎಕ್ಕರೆ ಮತ್ತು ಧರ್ಮಪ್ಪ ಬಿನ್ ಚನ್ನೇಗೌಡ ಸರ್ವೆ ನಂ ೧೫೯ ರ ೨ ಎಕರೆ ೧೪ ಗುಂಟೆ ಭೂಮಿಯಲ್ಲಿ ಮಳೆ ಅಭಾವದ ನಡುವೆ ಕಷ್ಟಪಟ್ಟು ಬೆಳೆದ ಕಬ್ಬು ಬೆಂಕಿ ಜ್ವಾಲೆಯಿಂದ ಇಡೀ ಕಬ್ಬಿನ ಹೊಲ ಸುಟ್ಟಿದೆ. ಅಲ್ಲದೆ ಕೊಳವೆಬಾವಿ ನೀರಾವರಿಗೆ ಬಳಕೆ ಮಾಡುವ ಲಕ್ಷಾಂತರ ಮೌಲ್ಯದ ಪಂಪ್‌ಗಳು ಮತ್ತು ಫಸಲಿಗೆ ಬಂದ ತೆಂಗಿನ ಮರಗಳು ಕೂಡ ಬೆಂಕಿಗಾಹಿತಿಯಾಗಿದ್ದು, ಬೆಂಕಿಯನ್ನು ನಂದಿಸಲು ಅಕ್ಕ-ಪಕ್ಕದ ರೈತರು ಎಷ್ಟೇ ಹರ ಸಾಹಸ ಮಾಡಿದರೂ ಕೂಡ ರಣ ರಣ ಬಿಸಿಲಿನಿಂದ ಇಡೀ ಹೊಲವೇ ಸುಟ್ಟಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಆಗ್ನಿ ಶಾಮಕದಳ ಇರುವ ಅಲ್ಪ-ಸ್ವಲ್ಪ ಬೆಂಕಿ ಮತ್ತು ಬೇರೆ ಕಡೆ ಜ್ವಾಲೆ ಹರಿಯದಂತೆ ನಂದಿಸಲು ಕ್ರಮ ವಹಿಸಿದ್ದಾರೆ. ಯಾರಿಗೂ ಕೂಡ ಪ್ರಾಣ ಹಾನಿಯಾಗಿಲ್ಲ, ಕಬ್ಬಿನ ಪೈರು ಬಹಳ ಸಮೃದ್ಧಿಯಾಗಿಯೇ ಬೆಳೆಸಲಾಗಿತ್ತು. ಆದರೆ ಏಕಾಏಕಿ ಬೆಂಕಿ ಬಿದ್ದ ತೀವ್ರ ನಷ್ಟವಾಗಿದೆ. ಬೆಳೆಗೆ ಕೈಸಾಲ ಸೇರಿದಂತೆ ಬ್ಯಾಂಕಿನಲ್ಲಿ ಸಾಲ ಮಾಡಲಾಗಿದೆ. ಈ ಬೆಳೆಯಿಂದಲೇ ನಮ್ಮ ಕುಟುಂಬದ ಅರ್ಥಿಕ ಪರಿಸ್ಥಿತಿ ಸುಧಾರಿಸಬೇಕಿತ್ತು ನಮಗೆ ದಿಕ್ಕು ಕಾಣದ ಸ್ಥಿತಿ ನಿರ್ಮಾಣವಾಗಿದೆ ಎಂದು ಕೃಷಿಕರು ಪತ್ರಿಕೆಯೊಂದಿಗೆ ತಮ್ಮ ಆಳಲು ಹೇಳಿಕೊಂಡರು. ವಿಷಯ ತಿಳಿದ ಸ್ಥಳಕ್ಕೆ ಶಾಸಕ ಎಚ್ ಕೆ ಸುರೇಶ್ ತಾಲೂಕು ದಂಡಾಧಿಕಾರಿ ಮಮತಾ.ಎಂ. ಕೃಷಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು