ಕನ್ನಡಪ್ರಭ ವಾರ್ತೆ ಮುಧೋಳ
ಹಸಿರು ಸೇನೆ ಹಾಗು ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ ಮಾತನಾಡಿ, ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಹಲವು ವಿಷಯಗಳ ಕುರಿತು ಚರ್ಚೆಗಳಾಗಿವೆ. ಆದರೆ ಪರಿಹಾರದ ಕ್ರಮಕ್ಕಾಗಿ ಎರಡು ದಿನಗಳ ಕಾಲ ಸಮಯ ಕೇಳಿದ್ದು, ಶಾಶ್ವತ ಪರಿಹಾರ ಕಲ್ಪಿಸಲು ಸಾಧ್ಯವಾಗುತ್ತಿಲ್ಲ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಚರ್ಚಿಸಿ ಕಬ್ಬು ಬೆಳೆಗಾರರ ಹಿತ ಕಾಪಾಡಬೇಕಾಗಿದೆಂದರು ಹೇಳಿದ ಅವರು, ಕಳೆದ ವರ್ಷದಲ್ಲಿ ಎರಡನೇ ಕಂತಿನ ₹300 ಹಣ ಪಾವತಿಯಾಗುವರಿಗೂ ಕಾರ್ಖಾನೆ ಆರಂಭಿಸಲು ಬಿಡುವುದಿಲ್ಲ ಎಂದರು.
ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ದುಂಡಪ್ಪ ಯರಗಟ್ಟಿ, ಈರಪ್ಪ ಹಂಚಿನಾಳ ಮಾತನಾಡಿ, ಕಬ್ಬು ಹಂಗಾಮುದಲ್ಲಿ ಮೊದಲು ಸಕ್ಕರೆ ಕಾರ್ಖಾನೆಗಳು ದರ ಘೋಷಣೆ ಮಾಡಬೇಕು. ರೈತರಿಗೆ ಅನ್ಯಾಯವಾಗದಂತೆ ಸರ್ಕಾರ ಮುತುವರ್ಜಿ ತೆಗೆದುಕೊಳ್ಳಬೇಕೆಂದರು.ಜಿಪಂ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೊಮಾರ, ಮಂಜುನಾಥ ಅರಕೇರಿ, ಮಂಜುನಾಥ ಲಕ್ಕಂ, ಸುರೇಶ ಚಿಂಚಲಿ, ಗೋವಿಂದಪ್ಪ ಮೆಟಗುಡ್ಡ ಇತರರು ಇದ್ದರು.
ತಾಲೂಕಿನ ಶಿರೋಳ ಬಳಿ ಮಂಗಳವಾರ ಸಂಜೆ ರೈತರು ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಿಂದಾಗಿ ಮುಧೋಳ ಮಾರ್ಗವಾಗಿ ಸಂಚರಿಸಬೇಕಾಗಿದ್ದ ಸಹಸ್ರಾರು ವಾಹನಗಳು ರಸ್ತೆಯಲ್ಲೇ ನಿಲ್ಲುವಂತಾಯಿತು. ಶಾಲಾ-ಕಾಲೇಜ್ ವಿದ್ಯಾರ್ಥಿಗಳು, ನೌಕರರಸ್ಥರು ಪರದಾಡಿದ ಪ್ರಸಂಗ ಕಂಡು ಬಂತು.