ಜಿಲ್ಲೆಯ ಒಟ್ಟು ಮತದಾರರ ಸಂಖ್ಯೆ 36.35 ಲಕ್ಷ

KannadaprabhaNewsNetwork |  
Published : Oct 28, 2026, 02:45 AM IST
60 | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿಜಿಲ್ಲೆಯ 18 ವಿಧಾನಸಭಾ ಮತಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಮಂಗಳವಾರ ಪ್ರಕಟಿಸಲಾಗಿದ್ದು, ಕರಡು ಪಟ್ಟಿಗೆ ಹೋಲಿಸಿದರೆ 42,299 ಮತದಾರರು ಹೆಚ್ಚಳವಾಗಿದ್ದಾರೆ. ಜಿಲ್ಲೆಯ ಒಟ್ಟು ಮತದಾರರ ಸಂಖ್ಯೆ 36,35,860ಕ್ಕೆ ಏರಿಕೆಯಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಿಲ್ಲೆಯ 18 ವಿಧಾನಸಭಾ ಮತಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಮಂಗಳವಾರ ಪ್ರಕಟಿಸಲಾಗಿದ್ದು, ಕರಡು ಪಟ್ಟಿಗೆ ಹೋಲಿಸಿದರೆ 42,299 ಮತದಾರರು ಹೆಚ್ಚಳವಾಗಿದ್ದಾರೆ. ಜಿಲ್ಲೆಯ ಒಟ್ಟು ಮತದಾರರ ಸಂಖ್ಯೆ 36,35,860ಕ್ಕೆ ಏರಿಕೆಯಾಗಿದೆ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಿಸಿರುವ ವಿವರಗಳ ಪ್ರಕಾರ, ಜಿಲ್ಲೆಯಲ್ಲಿ 18,25,531 ಪುರುಷರು, 18,10,170 ಮಹಿಳೆಯರು ಹಾಗೂ 159 ತೃತೀಯ ಲಿಂಗದ ಮತದಾರರಿದ್ದಾರೆ. ವಿಶೇಷ ಸಮಗ್ರ ಪರಿಷ್ಕರಣೆ ಅವಧಿಯಲ್ಲಿ 46,986 ಹೊಸ ಮತದಾರರು ಸೇರ್ಪಡೆಯಾಗಿದ್ದು, 4,687 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಅಲ್ಲದೆ, 43,457 ಮತದಾರರ ವಿವರಗಳಲ್ಲಿ ತಿದ್ದುಪಡಿ ಮಾಡಲಾಗಿದೆ.

ಬೆಳಗಾವಿ ಉತ್ತರದಲ್ಲಿ ಹೆಚ್ಚು ಹೆಚ್ಚಳ:

ವಿಧಾನಸಭಾ ಕ್ಷೇತ್ರವಾರು ಗಮನಿಸಿದರೆ, ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಅತಿ ಹೆಚ್ಚು 6,221 ಮತದಾರರು ಹೆಚ್ಚಳವಾಗಿದ್ದಾರೆ. ಬೆಳಗಾವಿ ದಕ್ಷಿಣದಲ್ಲಿ 4,528, ಬೆಳಗಾವಿ ಗ್ರಾಮೀಣದಲ್ಲಿ 2,996, ನಿಪ್ಪಾಣಿಯಲ್ಲಿ 3,294, ಅರಭಾವಿಯಲ್ಲಿ 2,989, ಚಿಕ್ಕೋಡಿ-ಸದಲಗಾದಲ್ಲಿ 2,624 ಹಾಗೂ ಕಿತ್ತೂರು ಕ್ಷೇತ್ರದಲ್ಲಿ 2,615 ಮತದಾರರು ಹೆಚ್ಚಳವಾಗಿದ್ದಾರೆ.

ಕಾಗವಾಡ ಕ್ಷೇತ್ರದಲ್ಲಿ 1,136, ಕುಡಚಿಯಲ್ಲಿ 983, ರಾಯಬಾಗದಲ್ಲಿ 1,364, ಹುಕ್ಕೇರಿಯಲ್ಲಿ 1,429, ಗೋಕಾಕದಲ್ಲಿ 2,131, ಯಮಕನಮರಡಿಯಲ್ಲಿ 1,240, ಖಾನಾಪುರದಲ್ಲಿ 2,327, ಬೈಲಹೊಂಗಲದಲ್ಲಿ 1,576, ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ 1,146 ಹಾಗೂ ರಾಮದುರ್ಗದಲ್ಲಿ 1,813 ಮತದಾರರು ಹೆಚ್ಚಳವಾಗಿದ್ದಾರೆ.

ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 4,644 ಮತಗಟ್ಟೆಗಳಿದ್ದು, ಈ ಪೈಕಿ 1,302 ನಗರ ಪ್ರದೇಶಗಳಲ್ಲಿ ಹಾಗೂ 3,342 ಗ್ರಾಮೀಣ ಪ್ರದೇಶಗಳಲ್ಲಿವೆ. ಖಾನಾಪುರ ಕ್ಷೇತ್ರದಲ್ಲಿ ಅತಿ ಹೆಚ್ಚು 319 ಮತಗಟ್ಟೆಗಳಿದ್ದರೆ, ಗೋಕಾಕದಲ್ಲಿ 297, ಬೆಳಗಾವಿ ಗ್ರಾಮೀಣದಲ್ಲಿ 299 ಹಾಗೂ ಅರಭಾವಿಯಲ್ಲಿ 290 ಮತಗಟ್ಟೆಗಳಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುರುಸ್ಮೃತಿ: 200 ಸಸಿ ನೆಟ್ಟು ಗುರುಗಳಿಗೆ ಗೌರವ ಸಲ್ಲಿಸಿದ 2008ರ ಬ್ಯಾಚ್
ರೈತರ ಶ್ರಮಕ್ಕೆ ಬೆಲೆ ನೀಡದ ಸರ್ಕಾರಗಳು