ಕನ್ನಡಪ್ರಭ ವಾರ್ತೆ ಚಿಂತಾಮಣಿ
ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಮೋಹನ್ .ಎಸ್.ಅಗ್ರಹಾರ ಮಾತನಾಡಿ, ಹಲವು ವರ್ಷಗಳಿಂದ ಪ್ಲವರ್ ಡೆಕೋರೇಷನ್ ಕೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಕಟ್ಟಲು ಶ್ರಮಿಸಿದ್ದು, ಇದೀಗ ಆ ಕಾಲ ಕೂಡಿಬಂದಿದೆ. ನೀವು ಅಸಂಘಟಿತರಾಗಿದ್ದು ಸಂಘಟನೆಯ ಮೂಲಕ ಒಗ್ಗೂಡಿ ಸರ್ಕಾರದಿಂದ ಬರುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಹೊಂದುವಂತೆ ಕರೆಯಿತ್ತರು.
ಕೋಲಾರ ಬೆಸ್ಕಾಂ ವಿಭಾಗದ ಎಸ್‌ಸಿ, ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಕೆ.ರವಿಕುಮಾರ್ ಮಾತನಾಡಿ, ಯಾವುದೇ ಕಾರ್ಯಕ್ರಮಕ್ಕೆ ಮೆರುಗು ಕೊಡುವಂತಹ ಮಹತ್ತರ ಕಾರ್ಯವನ್ನು ನಿರ್ವಹಿಸುತ್ತಿರುವ ನಿಮಗೆ ಯಾವುದೇ ಸಮಸ್ಯೆ ಬಂದರೂ ಅದನ್ನು ಒಟ್ಟಾಗಿ ಚರ್ಚಿಸಿ, ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಹಾಗೂ ಹಣದ ವಿಚಾರವಾಗಿ ಮಾಲೀಕರು ಮತ್ತು ನಿಮ್ಮ ಮಧ್ಯೆ ತಲೆದೂರುವ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕೆಂದು ಸಲಹೆ ನೀಡಿದರು.ಟೈಲ್ಸ್ ಮತ್ತು ಗ್ರಾನೈಟ್ ಸಂಘದ ರಾಜ್ಯಾಧ್ಯಕ್ಷ ಎ.ನಾರಾಯಣಸ್ವಾಮಿ, ಆರ್.ಡಿ.ಮಂಜುನಾಥ್, ಗೌರವಾಧ್ಯಕ್ಷ ಬಿ.ರಘು, ಅಧ್ಯಕ್ಷ ವಿಶ್ವನಾಥ್ ಬಾಬು, ಉಪಾಧ್ಯಕ್ಷ ವಿ.ಮಂಜುನಾಥ, ಪ್ರಧಾನ ಕಾರ್ಯದರ್ಶಿ ಎಸ್.ನಾಗರಾಜು, ಕಾರ್ಯದರ್ಶಿ ವಿ. ಕೆಂಪರಾಜು, ಖಜಾಂಚಿ ಎಸ್.ರಘು, ನಿರ್ದೇಶಕರಾದ ನರಸಿಂಹಪ್ಪ, ಅಶೋಕ್, ಶ್ರೀನಿವಾಸ್, ಮುನಿರಾಜು, ನರಸಿಂಹಪ್ಪ ಇದ್ದರು, ಪರಿಸರ ಗೀತೆಯನ್ನು ಮುನಿರಾಜು ಮತ್ತು ಪ್ರಾರ್ಥನೆಯನ್ನು ಧರ್ಮನಾಥ್ ನಡೆಸಿಕೊಟ್ಟರು.