ಗಣತಿಯ ಜಾತಿ ಕಾಲಂನಲ್ಲಿ ಲಂಬಾಣಿ, ಬಂಜಾರ ಎಂದೇ ನಮೂದಿಸಲು ಸಲಹೆ

KannadaprabhaNewsNetwork |  
Published : May 08, 2025, 12:38 AM IST
6ಕೆಕೆಡಿಯು2. | Kannada Prabha

ಸಾರಾಂಶ

ಕಡೂರುಬಂಜಾರ ಸಮುದಾಯದ ಕುಟುಂಬಗಳು ಜಾತಿಗಣತಿ ಸಮಯದಲ್ಲಿ ಜಾತಿ ಕಾಲಂನಲ್ಲಿ ಲಂಬಾಣಿ ಅಥವಾ ಬಂಜಾರ ಎಂದು ಸ್ಪಷ್ಟವಾಗಿ ನಮೂದಿಸಬೇಕು ಎಂದು ಬಂಜಾರ ಸಂಘದ ಜಿಲ್ಲಾಧ್ಯಕ್ಷ ಟಿ.ಎಲ್. ಲಕ್ಷ್ಮಣ್ ನಾಯ್ಕ ಸಮಾಜದವರಿಗೆ ಕರೆ ನೀಡಿದರು.

ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಟಿ.ಎಲ್. ಲಕ್ಷ್ಮಣ್ ನಾಯ್ಕ

ಕನ್ನಡಪ್ರಭ ವಾರ್ತೆ, ಕಡೂರು

ಬಂಜಾರ ಸಮುದಾಯದ ಕುಟುಂಬಗಳು ಜಾತಿಗಣತಿ ಸಮಯದಲ್ಲಿ ಜಾತಿ ಕಾಲಂನಲ್ಲಿ ಲಂಬಾಣಿ ಅಥವಾ ಬಂಜಾರ ಎಂದು ಸ್ಪಷ್ಟವಾಗಿ ನಮೂದಿಸಬೇಕು ಎಂದು ಬಂಜಾರ ಸಂಘದ ಜಿಲ್ಲಾಧ್ಯಕ್ಷ ಟಿ.ಎಲ್. ಲಕ್ಷ್ಮಣ್ ನಾಯ್ಕ ಸಮಾಜದವರಿಗೆ ಕರೆ ನೀಡಿದರು.ಕಡೂರಿನ ಶ್ರೀ ವೆಂಕಟೇಶ್ವರ ದೇವಸ್ಥಾನದ ಮುಂದೆ ಪ್ರಚಾರ ವಾಹನಕ್ಕೆ ಚಾಲನೆ ನೀಡಿ‌ ಮಾತನಾಡಿದರು. ಬಂಜಾರ ಸಮುದಾಯಕ್ಕೆ ಪ್ರಾದೇಶಿಕವಾಗಿ ವಿವಿಧ ಹೆಸರುಗಳಿವೆ. ಆದರೆ ಸ್ಥಳೀಯ ಹೆಸರುಗಳನ್ನು ನಮೂದಿಸುವುದರಿಂದ ಬಹಳಷ್ಟು ತೊಂದರೆ ಎದುರಾಗುತ್ತದೆ. ಬಂಜಾರ ಸಮುದಾಯದ ಜಾತಿವಾರು ಸಂಖ್ಯೆ ನಿಖರವಾಗಿ ದೊರೆತು ಒಳಮೀಸಲಾತಿ ಪ್ರಯೋಜನ ದೊರೆಯಬೇಕಾದರೆ ಜಾತಿ ಗಣತಿಯಲ್ಲಿ ನಮ್ಮ ಸಮುದಾಯದ ಹೆಸರು ನಿಖರವಾಗಿ ಇರಬೇಕು.

ಆದ್ದರಿಂದ ಒಳಮೀಸಲಾತಿ ವರ್ಗೀಕರಣಕ್ಕಾಗಿ ಜಾತಿ ಗಣತಿ ನಡೆಸಲು ಪರಿಶಿಷ್ಠ ಜಾತಿ ಪಂಗಡಗಳ ಸಮೀಕ್ಷೆ ನಡೆಯಲಿದೆ. ಗಣತಿಗೆ ಬಂದಾಗ ಕಡ್ಡಾಯವಾಗಿ ಲಂಬಾಣಿ ಅಥವಾ ಬಂಜಾರ ಎಂದೇ ನಮೂದಿಸಬೇಕೆಂದು ಕೋರಿದರು.ಸಂಘದ ಜಿಲ್ಲಾ ಗೌರವಾಧ್ಯಕ್ಷ ಬಿ.ಟಿ.ಗಂಗಾಧರ ನಾಯ್ಕ ಮಾತನಾಡಿ, ಈ ಕುರಿತು ಸಮಾಜದಲ್ಲಿ ಅರಿವು ಮೂಡಿಸಲು ಬಂಜಾರ ಸಮುದಾಯದವರು ಇರುವ ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಅರಿವು ಮೂಡಿಸಲು ಪ್ರಚಾರ ವಾಹನ ಗಳನ್ನು ನಿಯೋಜಿಸಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಟಿ.ಶ್ರೀನಿವಾಸ್, ಮುಖಂಡ ಆರ್.ರಾಜಾನಾಯ್ಕ ಮತ್ತಿತರರು ಇದ್ದರು.

6ಕೆಕೆಡಿಯು2.

ಕಡೂರಿನ ಶ್ರೀ ವೆಂಕಟೇಶ್ವರ ದೇವಸ್ಥಾನದ ಮುಂದೆ ಬಂಜಾರ ಸಮುದಾಯದ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಯಿತು. ಬಂಜಾರ ಸಮುದಾಯದ ಮುಖಂಡರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!