ತಮ್ಮ ಚತುರ್ಥ ಶ್ರೀ ಕೃಷ್ಣ ಪೂಜಾ ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರನ್ನು ಪಣಿಯಾಡಿ ಅನಂತ ಪದ್ಮನಾಭ ಸನ್ನಿಧಾನದಲ್ಲಿ ಭಕ್ತಾಭಿಮಾನಿಗಳ ವತಿಯಿಂದ ವೈಭವದ ಅಭಿನಂದಿಸಲಾಯಿತು.
ಉಡುಪಿ: ತಮ್ಮ ಚತುರ್ಥ ಶ್ರೀ ಕೃಷ್ಣ ಪೂಜಾ ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರನ್ನು ಪಣಿಯಾಡಿ ಅನಂತ ಪದ್ಮನಾಭ ಸನ್ನಿಧಾನದಲ್ಲಿ ಭಕ್ತಾಭಿಮಾನಿಗಳ ವತಿಯಿಂದ ವೈಭವದ ಅಭಿನಂದಿಸಲಾಯಿತು.
ಇದಕ್ಕೂ ಮುನ್ನ ಸಾಲಂಕೃತ ತೆರೆದ ವಾಹನದಲ್ಲಿ ಯತಿದ್ವಯರನ್ನು ಮೆರವಣಿಗೆ ಮೂಲಕ ಭಕ್ತಿ ಗೌರವಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಬಳಿಕ ಅನಂತ ವಿಪ್ರ ಬಳಗ ಮತ್ತು ಭಕ್ತ ವೃಂದದವರು ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿದ ಶ್ರೀಗಳು, ಪರ್ಯಾಯದ ಎಲ್ಲಾ ಕಾರ್ಯಕರ್ಮ ಗಳ ಯಶಸ್ಸಿನ ಹಿಂದೆ ಪಣಿಯಾಡಿ ಮಂದಿಯ ಶ್ರಮವನ್ನು ಸ್ಮರಿಸಿ, ಸಮಸ್ತ ಭಕ್ತರಿಗೆ ಶ್ರೇಯಸ್ಸಾಗಲಿ ಎಂದು ಹಾರೈಸಿದರು.ದೇವಳದ ಹಯವದನ ತಂತ್ರಿ ,ಅರ್ಚಕರಾದ ರಾಘವೇಂದ್ರ ಭಟ್ , ಪ್ರಮುಖರಾದ ವಿಜಯರಾಘವ ರಾವ್, ವಿಶ್ವನಾಥ ಭಟ್, ಗುರುರಾಜಾಚಾರ್ಯ, ಗೋಪಾಲ ಕೃಷ್ಣ ಜೋಯಿಸರು, ರಾಜೇಶ್ ಭಟ್, ನಾಗರಾಜ್ ಭಟ್, ಚಂದ್ರಶೇಖರ ಶೆಟ್ಟಿ, ನಾರಾಯಣ ಮಡಿ, ಎಲ್. ಎನ್. ಹೆಗ್ಡೆ, ಭಾರತೀ ಕೃಷ್ಣಮೂರ್ತಿ, ಮಠದ ದಿವಾನರಾದ ನಾಗರಾಜಾಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ, ಆಪ್ತ ಕಾರ್ಯದರ್ಶಿ ರತೀಶ ತಂತ್ರಿ ಮತ್ತಿತರರು ಹಾಜರಿದ್ದರು.
ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ರಾಘವೇಂದ್ರ ಭಟ್ ನಿರ್ವಹಿಸಿದರು. ನಂತರ ಉಭಯ ಶ್ರೀಪಾದರು ಶ್ರೀಪುತಿಗೆ ಮೂಲಮಠಕ್ಕೆ ತೆರಳಿ ಶ್ರೀ ಲಕ್ಷ್ಮಿನರಸಿಂಹ ದೇವರ ದರ್ಶನ ಪಡೆದುಕೊಂಡರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.