ಸುಜೀತ್ ನಾಯ್ಕರ ವಿನೂತನ ಕಲ್ಪನೆ ಮಾದರಿ: ಸುರೇಶ ನಾಯ್ಕ

KannadaprabhaNewsNetwork |  
Published : May 22, 2026, 02:30 AM IST
ಪೌರಾಣಿಕ ನಾಟಕ ಕಲಾ ಮಹೋತ್ಸವ ಕಾರ್ಯಕ್ರಮದಲ್ಲಿ ಕಲಾಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.  | Kannada Prabha

ಸಾರಾಂಶ

ಸುಮಾರು 15ಕ್ಕೂ ಹೆಚ್ಚು ನಾಟಕ ಕೃತಿಗಳನ್ನು ರಚಿಸಿ, ರಂಗಭೂಮಿಗೆ ವಿಶೇಷವಾದ ಕೊಡುಗೆ ನೀಡಿರುವ ಸುಜೀತ್ ನಾಯ್ಕ ಪೌರಾಣಿಕ ನಾಟಕವನ್ನು ರಚಿಸಿ ಯಶಸ್ವಿಯಾಗುವ ಮೂಲಕ ಕಲಾರಂಗಕ್ಕೆ ಹೊಸದೊಂದು ಮೈಲಿಗಲ್ಲು ರೂಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಅಂಕೋಲಾ

ಸುಮಾರು 15ಕ್ಕೂ ಹೆಚ್ಚು ನಾಟಕ ಕೃತಿಗಳನ್ನು ರಚಿಸಿ, ರಂಗಭೂಮಿಗೆ ವಿಶೇಷವಾದ ಕೊಡುಗೆ ನೀಡಿರುವ ಸುಜೀತ್ ನಾಯ್ಕ ಪೌರಾಣಿಕ ನಾಟಕವನ್ನು ರಚಿಸಿ ಯಶಸ್ವಿಯಾಗುವ ಮೂಲಕ ಕಲಾರಂಗಕ್ಕೆ ಹೊಸದೊಂದು ಮೈಲಿಗಲ್ಲು ರೂಪಿಸಿದ್ದಾರೆ ಎಂದು ಉದ್ಯಮಿ ಸುರೇಶ ನಾಯಕ ಅಲಗೇರಿ ಹೇಳಿದರು.

ಶ್ರೀ ಗುರು ರಾಘವೇಂದ್ರ ಸಾಂಸ್ಕೃತಿಕ ಕಲಾವೃಂದದ ಆಶ್ರಯದಲ್ಲಿ ಪೌರಾಣಿಕ ನಾಟಕ ಕಲಾ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹುಬ್ಬಳ್ಳಿಯ ಕಾನೂನು ಮತ್ತು ಮಾಪನ ಶಾಸ್ತ್ರ ಇಲಾಖೆಯ ಇನ್‌ಸ್ಪೆಕ್ಟರ್ ಸಂಜೀವ ಗುನಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ನಾಟಕ ರಂಗ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ವಿಶಿಷ್ಟ ಕಲ್ಪನೆಯೊಂದಿಗೆ, ಪೌರಾಣಿಕ ನಾಟಕವು ರಚನೆಯಾಗಿ ಪ್ರದರ್ಶನಗೊಳ್ಳುತ್ತಿರುವುದು ಮಾದರಿಯಾಗಿದೆ ಎಂದರು.

ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಜಗದೀಶ ನಾಯಕ. ಹೊಸ್ಕೇರಿ, ಕಾರವಾರದ ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ಸುಭಾಷ ಗುನಗಿ, ಕಾರವಾರದ ಕಸಾಪ ತಾಲೂಕಾಧ್ಯಕ್ಷ ರಾಮಾ ನಾಯ್ಕ, ಬೊಬ್ರವಾಡ ಗ್ರಾಪಂ ಪಿಡಿಒ ನಾಗೇಂದ್ರ ನಾಯ್ಕ, ಕಾರವಾರದ ರಂಗಭೂಮಿ ಕಲಾವಿದರ ವೇದಿಕೆಯ ತಾಲೂಕಾಧ್ಯಕ್ಷ ಸುರೇಶ ನಾಯ್ಕ, ಅಂಕೋಲಾ ರಂಗಭೂಮಿ ಕಲಾವಿದರ ವೇದಿಕೆಯ ತಾಲೂಕಾಧ್ಯಕ್ಷ ಜ್ಞಾನೇಶ್ವರ ನಾಯ್ಕ, ಉಕ ಜಿಲ್ಲಾ ನಾಗರಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಪ್ರಮೋದ ಮಾಣ್ಸೇಕರ, ನೌಕಾದಳದ ಅಗ್ನಿಶಾಮಕ ಠಾಣೆಯ ಸಾಯಿಕಿರಣ ನಾಗೇಕರ, ಕೈಗಾ ಎನ್.ಪಿ.ಸಿ.ಎಲ್.ನ ಕಿರಣ ನಾಯ್ಕ, ಪತ್ರಕರ್ತ ಅರುಣ ಶೆಟ್ಟಿ, ಬೇಲೆಕೇರಿಯ ಶ್ರೀ ಗುರು ರಾಘವೇಂದ್ರ ಸಾಂಸ್ಕೃತಿಕ ಯುವಕ ಸಂಘದ ಅಧ್ಯಕ್ಷ ಸುನೀಲ ನಾಯ್ಕ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ನಿವೃತ್ತ ಮುಖ್ಯಾಧ್ಯಾಪಕ ಬಾಲಚಂದ್ರ ನಾಯಕ ಸ್ವಾಗತಿಸಿ, ನಿರೂಪಿಸಿದರು. ಕಾರ್ಯಕ್ರಮ ಸಂಯೋಜಕ, ಲೇಖಕ ಸುಜೀತ್ ನಾಯ್ಕ ವಂದಿಸಿದರು.

ಈ ಸಂದರ್ಭ ಹಿರಿಯ ಕಲಾವಿದರಾದ ಸುರೇಶ ನಾಯ್ಕ ಅಮದಳ್ಳಿ, ದಿನೇಶ ನಾಯ್ಕ ಬೊಗ್ರಿಗದ್ದೆ, ಚಂದ್ರಶೇಖರ ನಾಯ್ಕ ಬೊಬ್ರವಾಡ, ಗಿರೀಶ ಗೌಡ, ರಾಜು ನಾಯಕ ಬೇಲೆಕೇರಿ, ಪತ್ರಕರ್ತ ರಾಘು ಕಾಕರಮಠ ಅವರನ್ನು ಗೌರವಿಸಲಾಯಿತು. ಸ್ವರ್ಣಯಾಗ ಪೌರಾಣಿಕ ನಾಟಕವು ಕಲಾರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ರಮ ಗೋಸಾಗಾಟ, ಗೋಹತ್ಯೆ ನಿಯಂತ್ರಣಕ್ಕೆ ಆಗ್ರಹ
ಜರ್ಮನಿಯಲ್ಲಿ ಹಳಿಯಾಳದ ಸೂತ್ರದ ಗೊಂಬೆಗಳ ವೈಭವ