ಸೂಲಿಬೆಲೆ: ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಿವಶಂಕರ್ ಹಾಗೂ ಜಿಪಂ ಸಿಇಒ ಅನುರಾಧ ಅವರ ನೇತೃತ್ವದಲ್ಲಿ ಹೋಬಳಿ ವ್ಯಾಪ್ತಿಯ ಬರಪೀಡಿತ ಸಾದಪ್ಪನಹಳ್ಳಿ-ಎತ್ತಿನೊಡೆಯಪುರ ಹಾಗೂ ಯನಗುಂಟೆ ಗ್ರಾಮಗಳಲ್ಲಿ ರಾಗಿ ಬೆಳೆದಿರುವ ಹೊಲಗಳಿಗೆ ಭೇಟಿ ನೀಡಿ ವಾಸ್ತವ ಸಮೀಕ್ಷೆ ನಡೆಸಿದರು. ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡ ಆ.8ರಂದು ಭಾನುವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಬರ ಸಮೀಕ್ಷೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೂರ್ವಬಾವಿಯಾಗಿ ಹೋಬಳಿಯ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಸೂಲಿಬೆಲೆ: ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಿವಶಂಕರ್ ಹಾಗೂ ಜಿಪಂ ಸಿಇಒ ಅನುರಾಧ ಅವರ ನೇತೃತ್ವದಲ್ಲಿ ಹೋಬಳಿ ವ್ಯಾಪ್ತಿಯ ಬರಪೀಡಿತ ಸಾದಪ್ಪನಹಳ್ಳಿ-ಎತ್ತಿನೊಡೆಯಪುರ ಹಾಗೂ ಯನಗುಂಟೆ ಗ್ರಾಮಗಳಲ್ಲಿ ರಾಗಿ ಬೆಳೆದಿರುವ ಹೊಲಗಳಿಗೆ ಭೇಟಿ ನೀಡಿ ವಾಸ್ತವ ಸಮೀಕ್ಷೆ ನಡೆಸಿದರು. ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡ ಆ.8ರಂದು ಭಾನುವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಬರ ಸಮೀಕ್ಷೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೂರ್ವಬಾವಿಯಾಗಿ ಹೋಬಳಿಯ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಸೂಲಿಬೆಲೆ ನಾಡಕಚೇರಿ ಉಪ ತಹಸೀಲ್ದಾರ್ ಚೈತ್ರ ಮಾತನಾಡಿ, ಕೃಷಿ ಇಲಾಖೆಯ ಅಧಿಕಾರಿಗಳು ಸಮೀಕ್ಷೆ ಅಧರಿಸಿ ಎತ್ತಿನೊಡೆಯಪುರದಲ್ಲಿ 23 ಎಕರೆ, ಯನಗುಂಟೆ ಗ್ರಾಮದ ಸುಮಾರು 2 ಎಕರೆ ಪ್ರದೇಶಗಳನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮೀಕ್ಷೆ ನಡೆಸಿ ವರದಿ ಮಾಡಲಾಗಿದೆ ಎಂದು ಹೇಳಿದರು. ಗ್ರಾಪಂ ಅಧ್ಯಕ್ಷೆ ಮಂಜುಳಾತಿಮ್ಮರಾಯಪ್ಪ, ಸದಸ್ಯರಾದ ಜಗದೀಶ್, ಶಿವಣ್ಣ, ತಾಲೂಕು ದಂಡಾಧಿಕಾರಿ ವಿಜಯಕುಮಾರ್, ತಾಪಂ ಇಒ ಚಂದ್ರಶೇಖರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರೇಣುಕಾಪ್ರಸನ್ನ, ಜಂಟಿ ನಿರ್ದೇಶಕ ಲಲಿತಾರೆಡ್ಡಿ, ಉಪನಿರ್ದೇಶಕಿ ವಿನುತಾ, ರಾಜಸ್ವ ನಿರೀಕ್ಷಕ ನ್ಯಾನಮೂರ್ತಿ, ಇನ್ಸ್‌ಪೆಕ್ಟರ್ ರವಿ, ಗ್ರಾಮ ಲೆಕ್ಕಿಗರು ರಫೀಕ್, ಅನುಪಮಾ, ಚಕ್ರವರ್ತಿ, ಜ್ಞಾನೇಶ್, ಕೀರ್ತನಾ, ಕಂದಾಯ, ಕೃಷಿ ಇಲಾಖೆ, ಗ್ರಾಪಂ ಅಧಿಕಾರಿಗಳು ಹಾಜರಿದ್ದರು. ಚಿತ್ರ; ೦೫ ಸೂಲಿಬೆಲೆ ೧ ಜೆಪಿಜೆ ನಲ್ಲಿದೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಿವಶಂಕರ್ ಹಾಗೂ ಜಿಪಂ ಸಿಇಒ ಅನುರಾಧ ಅವರ ನೇತೃತ್ವದಲ್ಲಿ ಸೂಲಿಬೆಲೆ ಹೋಬಳಿ ವ್ಯಾಪ್ತಿಯ ಬರಪೀಡಿತ ಸಮೀಕ್ಷೆ ನಡೆಸಲಾಯಿತು. ನಾಡಕಚೇರಿ ಉಪ ತಹಸೀಲ್ದಾರ್ ಚೈತ್ರ, ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.