ಸುಳ್ಯದ ಯುವಕನಿಗೆ ಒಲಿದ ಅಮೆರಿಕಾ ಯುವತಿ !

KannadaprabhaNewsNetwork |  
Published : Jul 17, 2026, 02:30 AM IST
ನವ ದಂಪತಿ | Kannada Prabha

ಸಾರಾಂಶ

ಅವರಿಬ್ಬರೂ ಕೃಷ್ಣ ಭಕ್ತರು. ಯುವಕ ಭಾರತೀಯ. ಯುವತಿ ಅಮೆರಿಕಾದವರು ಪಶ್ಚಿಮ ಬಂಗಾಲದ ಮಾಯಾಪುರದಲ್ಲಿದ್ದ ಇವರಿಬ್ಬರ ನಡುವೆ ಪ್ರೀತಿ ಅಂಕುರಿಸಿತು.‌‌ ಈಗ ಮದುವೆಯೂ ಆಯಿತು. ಇದಾಗಿರುವುದು ಸುಳ್ಯದ ಸಂಪಾಜೆಯಲ್ಲಿ.

ಸುಳ್ಯ: ಅವರಿಬ್ಬರೂ ಕೃಷ್ಣ ಭಕ್ತರು. ಯುವಕ ಭಾರತೀಯ. ಯುವತಿ ಅಮೆರಿಕಾದವರು ಪಶ್ಚಿಮ ಬಂಗಾಲದ ಮಾಯಾಪುರದಲ್ಲಿದ್ದ ಇವರಿಬ್ಬರ ನಡುವೆ ಪ್ರೀತಿ ಅಂಕುರಿಸಿತು.‌‌ ಈಗ ಮದುವೆಯೂ ಆಯಿತು. ಇದಾಗಿರುವುದು ಸುಳ್ಯದ ಸಂಪಾಜೆಯಲ್ಲಿ.ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕ ಬೀಜದಕಟ್ಟೆಯ ಬಿ.ಕೆ.ಕೇಶವ ಅವರ ಪುತ್ರ ಸಾಯಿ ಸಂಕೇತ್‌ ವಿವಾಹ ಅಮೇರಿಕಾದ ಚಿಕಾಗೋ ನಗರದ ಡಾ.‌ಚಾರ್ಲ್ಸ್ ಅವರ ಪುತ್ರಿ ಶಾನೋನ್ ಎಂಬ ಯುವತಿಯೊಂದಿಗೆ ಸಂಪಾಜೆಯ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ನೆರವೇರಿತು. ಸಾಯಿ ಸಂಕೇತ್‌ ಮಡಿಕೇರಿ, ಮೈಸೂರಿನಲ್ಲಿ ವಿದ್ಯಾಭ್ಯಾಸ ಪಡೆದು ಚೆನ್ನೈಯಲ್ಲಿ ಐಐಟಿ ಅಧ್ಯಯನ ನಡೆಸಿದ್ದರು. ಬಳಿಕ ಎರಡು ವರ್ಷ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಿ ಬಳಿಕ ಪಶ್ಚಿಮ ಬಂಗಾಲದ ಮಾಯಾಪುರ ದಲ್ಲಿ ಅಗರಬತ್ತಿ ತಯಾರಿಕೆ ಮತ್ತು ರಫ್ತು ಉದ್ಯಮ ನಿರ್ವಹಿಸುತ್ತಿದ್ದರು. ಶಾನೋನ್ ಅಮೆರಿಕಾದಲ್ಲಿ ಶಿಕ್ಷಣ ಪೂರೈಸಿ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮವನ್ನು ಮೆಚ್ಚಿ ಇಲ್ಲಿಗೆ ಬಂದು ಆನ್‌ಲೈನ್‌ ವೃತ್ತಿ ನಿರ್ವಹಿಸುತ್ತಿದ್ದರು.

"

ಸಂಕೇತ್‌ ಉದ್ಯಮ ಮಳಿಗೆಗೆ ಶಾರೋನ್ ಭೇಟಿ ನೀಡುತ್ತಿದ್ದಾಗ ಪರಸ್ಪರ ಪರಿಚಯವಾಯಿತು. ಪರಿಚಯ ಪ್ರೀತಿಯಾಗಿ ಅಂಕುರಿಸಿತು. ಆದ್ಯಾತ್ಮಿಕ ಆಸಕ್ತಿ ಮತ್ತು ಕೃಷ್ಣ ಭಕ್ತಿ ಇಬ್ಬರನ್ನೂ ಒಂದುಗೂಡಿಸಿತು. ಎರಡು ವರ್ಷದ ಬಳಿಕ ಮದುವೆಯಾಗುವ ನಿರ್ಧಾರಕ್ಕೆ ಬಂದರು. ಇಬ್ಬರ ಮನೆಯವರಿಂದಲೂ ಅಡ್ಡಿ ಬಾರಲಿಲ್ಲ. ಆಷಾಢ ಮಾಸ ಬರುತ್ತಿರುವುದರಿಂದ ಶೀಘ್ರ ಮದುವೆ ಆಗುವ ನಿರ್ಧಾರಕ್ಕೆ ಬಂದ ಹಿನ್ನಲೆಯಲ್ಲಿ ಶಾನೋನ್ ಮನೆಯವರಿಗೆ ವಿವಾಹದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಸಂಪಾಜೆ ದೇವಸ್ಥಾನದಲ್ಲಿ ಕುಟುಂಬ ಬಂಧುಗಳ ಉಪಸ್ಥಿತಿಯಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ನೆರವೇರಿತು. ಶಾನೋನ್ ಅವರಿಗೆ ಅಲ್ಪಸ್ವಲ್ಪ ಕನ್ನಡ ಬರುತ್ತದೆ. ಇಲ್ಲಿಯ ಆಹಾರ ಪದ್ಧತಿ ಅವರಿಗೆ ತುಂಬ ಇಷ್ಟವಂತೆ.

ಭಾರತೀಯನನ್ನು ವಿವಾಹವಾಗಿರುವುದರಲ್ಲಿ ಹೆಮ್ಮೆ , ಸಂತೋಷ ಇದೆ. ಇಲ್ಲಿಯ ಸಂಸ್ಕೃತಿ ನನಗೆ ಅಪಾರ ಇಷ್ಟವಾಗಿದೆ- -ಶಾನೋನ್ ನಮ್ಮ ವಿವಾಹಕ್ಕೆ ಎಲ್ಲರೂ ಬೆಂಬಲಿಸಿದ್ದಾರೆ. ಆಕೆಯ ಆದ್ಯಾತ್ಮಿಕ ಒಲವು, ಸಂಸ್ಕೃತಿ ಪ್ರೀತಿ ನನಗೆ ಇಷ್ಟವಾಗಿದೆ

- ಸಾಯಿ ಸಂಕೇತ್‌

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರಿಯೇಟಿವ್ ಪುಸ್ತಕ ಧಾರೆ: 19ರಂದು 25 ಕೃತಿ ಲೋಕಾರ್ಪಣೆ
ಉಡುಪಿ ಕಾಂಗ್ರೆಸ್‌ನಿಂದ ಎಸ್‌ಐಆರ್ ಸಹಾಯ ಕೇಂದ್ರ