ಕುಂಪಲದ ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್, ರೋಟರಿ ಕ್ಲಬ್ ಮಂಗಳೂರು, ರೋಟರಿ ಸಮುದಾಯ ದಳ ಕುಂಪಲ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಪಲ ಇದರ ಸಹಭಾಗಿತ್ವದಲ್ಲಿ ಚಿತ್ತಾರ ಪ್ರತಿಷ್ಠಾನ ಪಿಲಾರು ಸಹಯೋಗದೊಂದಿಗೆ ಆರು ದಿನಗಳ ಕಾಲ ನಡೆದ “ಚಿಗುರು 2026” ಬೇಸಿಗೆ ಶಿಬಿರ
ಉಳ್ಳಾಲ: ಹೆಚ್ಚಿನ ಪೋಷಕರು ಮತ್ತು ಶಿಕ್ಷಕರು ಪುಸ್ತಕಗಳಲ್ಲಿ ಇರೋ ವಿಚಾರಗಳನ್ನಷ್ಟೆ ಮಕ್ಕಳ ಮನಸ್ಸಿನೊಳಗೆ ತುಂಬಿಸುವುದರಲ್ಲಿ ನಿರತರಾಗಿರುತ್ತಾರೆ. ಬಿಡುವಿಲ್ಲದ ಕಲಿಕೆಯಲ್ಲಿ ಮಕ್ಕಳ ಮನಸ್ಸಿನೊಳಗಿರುವ ವಿಶೇಷ ಪ್ರತಿಭೆಗಳನ್ನ ಹೊರ ತರುವ ಕೆಲಸ ನಡೆಯುತ್ತಿರುವುದು ತೀರಾ ಕಡಿಮೆ. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನ ಅನಾವರಣಗೊಳಿಸಲು ಬೇಸಿಗೆ ಶಿಬಿರಗಳು ಪರಿಣಾಮಕಾರಿಯಾಗಿವೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಳ್ಳಾಲ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯಕ್ ಅಭಿಪ್ರಾಯಪಟ್ಟರು.ಕುಂಪಲದ ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್, ರೋಟರಿ ಕ್ಲಬ್ ಮಂಗಳೂರು, ರೋಟರಿ ಸಮುದಾಯ ದಳ ಕುಂಪಲ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಪಲ ಇದರ ಸಹಭಾಗಿತ್ವದಲ್ಲಿ ಚಿತ್ತಾರ ಪ್ರತಿಷ್ಠಾನ ಪಿಲಾರು ಸಹಯೋಗದೊಂದಿಗೆ ಆರು ದಿನಗಳ ಕಾಲ ನಡೆದ “ಚಿಗುರು 2026” ಬೇಸಿಗೆ ಶಿಬಿರದ ಪ್ರಯುಕ್ತ ಭಾನುವಾರ ಕುಂಪಲದ ಕೇಸರಿ ಮಿತ್ರವೃಂದ ಸಭಾಭವನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಸಂವಿಂಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಅಂಬೇಡ್ಕರ್ ಸಂಸ್ಮರಣೆ ನಡೆಯಿತು. ಕುಂಪಲ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಚಂದ್ರಕಲಾ ಅವರು ಅಂಬೇಡ್ಕರ್ ಅವರ ಜೀವನ ಚರಿತ್ರೆಯ ಬಗ್ಗೆ ಶಿಬಿರಾರ್ಥಿ ಮಕ್ಕಳಿಗೆ ಉಪನ್ಯಾಸ ನೀಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉಳ್ಳಾಲ ತಾಲೂಕು ಪರ್ಯಾವರಣ ಗತಿವಿದಿಯ ತಾಲೂಕು ಸಂಯೋಜಕರಾದ ಮನೋಹರ ಗಟ್ಟಿ ಕುಂಪಲ ಅವರು ಉಳ್ಳಾಲದ ವೀರ ರಾಣಿ ಅಬ್ಬಕ್ಕಳ ಜೀವನ ಚರಿತ್ರೆಯ ಬಗ್ಗೆ ಶಿಬಿರಾರ್ಥಿ ಮಕ್ಕಳಿಗೆ ಉಪನ್ಯಾಸ ನೀಡಿದರು.ಶಿಬಿರ ನಡೆಸಿಕೊಟ್ಟ ಚಿತ್ತಾರ ಪ್ರತಿಷ್ಟಾನದ ಸಂಚಾಲಕರಾದ ನವೀನ್ ಪಿಲಾರು ಅವರನ್ನು ಸನ್ಮಾನಿಸಲಾಯಿತು.ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ಮಕ್ಕಳು ಮತ್ತು ಶಿಬಿರಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಯಿತು.ಕೇಸರಿ ಮಿತ್ರ ವೃಂದ ಟ್ರಸ್ಟ್ ನ ಅಧ್ಯಕ್ಷ ಸುಧಾಕರ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಯೋಧರಾದ ನಾಗರಾಜ್ ಗಟ್ಟಿ, ಕೇಸರಿ ಮಿತ್ರ ವೃಂದ ಟ್ರಸ್ಟ್ನ ಮಾತೃ ಮಂಡಳಿ ಅಧ್ಯಕ್ಷ ದಿವ್ಯಾ ರಾಕೇಶ್, ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ಗ್ರಾಮಾಂತರ ಜಿಲ್ಲೆಯ ಸಾಮರಸ್ಯ ಗತಿವಿದಿಯ ಜಿಲ್ಲಾ ಸಹ ಸಂಯೋಜಕ್ ಭರತ್ ಮಂಜನಾಡಿ ಮತ್ತಿತರರಿದ್ದರು.ಸಮೃದ್ಧಿ ಶೆಟ್ಟಿ ಸ್ವಾಗತಿಸಿದರು. ಕೇಸರಿ ಮಿತ್ರ ವೃಂದ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ನಾರಾಯಣ ಕುಂಪಲ ನಿರೂಪಿಸಿದರು. ದಿಶಾ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.