ಮಕ್ಕಳ ಕಲಿಕೆಗೆ ಬೇಸಿಗೆ ಶಿಬಿರ ಸಹಕಾರಿ:ಶಾಸಕಿ ನಯನಾ ಮೋಟಮ್ಮ

KannadaprabhaNewsNetwork |  
Published : Apr 11, 2026, 01:15 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರು ಮಕ್ಕಳಿಗೆ ಎಲ್ಲಾ ರೀತಿಯ ಗ್ರಾಮೀಣ ಕ್ರೀಡೆಗಳ ಜೊತೆಗೆ ಯೋಗಾಭ್ಯಾಸ, ಹೊರಸಂಚಾರ ಮುಂತಾದವುಗಳ ಬಗ್ಗೆ ಒಟ್ಟಿಗೆ ಕುಳಿತು ಕಲಿಯಲು ಬೇಸಿಗೆ ಶಿಬಿರ ಸಹಕಾರಿ ಎಂದು ಶಾಸಕಿ ನಯನಾ ಮೋಟಮ್ಮ ಅಭಿಪ್ರಾಯಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮಕ್ಕಳಿಗೆ ಎಲ್ಲಾ ರೀತಿಯ ಗ್ರಾಮೀಣ ಕ್ರೀಡೆಗಳ ಜೊತೆಗೆ ಯೋಗಾಭ್ಯಾಸ, ಹೊರಸಂಚಾರ ಮುಂತಾದವುಗಳ ಬಗ್ಗೆ ಒಟ್ಟಿಗೆ ಕುಳಿತು ಕಲಿಯಲು ಬೇಸಿಗೆ ಶಿಬಿರ ಸಹಕಾರಿ ಎಂದು ಶಾಸಕಿ ನಯನಾ ಮೋಟಮ್ಮ ಅಭಿಪ್ರಾಯಿಸಿದರು.

ಮೂಡಿಗೆರೆಯ ಮುಗುಳುವಳ್ಳಿ ಗ್ರಾ ಪಂ ಏರ್ಪಡಿಸಲಾಗಿದ್ದ ಬೇಸಿಗೆ ಬೆಸುಗೆ ಶಿಬಿರ ಉದ್ಘಾಟಿಸಿ ಮಾತನಾಡಿ, ಬೇಸಿಗೆ ಶಿಬಿರದಿಂದ ಕಲೆಗಳ ಅಭಿವೃದ್ಧಿಯಾಗುತ್ತದೆ. ಸಂಪರ್ಕವೂ ಹೆಚ್ಚಾಗುತ್ತದೆ. ಬೇರೆ ಬೇರೆ ಶಾಲೆಗಳಿಂದ ಆಗಮಿಸುವ ವಿದ್ಯಾರ್ಥಿಗಳು ಸ್ನೇಹಿತರಾಗುತ್ತಾರೆ. ಇಂತಹ ಹೃದಯ ಸ್ಪರ್ಶಿ ಕಾರ್ಯಕ್ರಮಗಳಿಗೆ ಪೋಷಕರು ಬೆಂಬಲ ನೀಡಬೇಕೆಂದು ವಿನಂತಿಸಿದರು.

ಚೆಸ್, ಕರಾಟೆ, ಯೋಗ, ಕೇರಂ, ಚಿತ್ರಕಲೆ ಸೇರಿದಂತೆ ಹಲವು ರೀತಿಯ ಗ್ರಾಮೀಣ ಆಟಗಳ ಬಗ್ಗೆ ತಿಳಿಯಲು ಶಿಬಿರ ಪೂರಕ.ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಗುರ್ತಿಸಿ ಹೊರತರಲು ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳು ಬಹುಮಾನ ಪಡೆದಾಗ ಉಳಿದವರಿಗೆ ಸ್ಪೂರ್ತಿಯಾಗುತ್ತದೆ ಎಂದು ಹೇಳಿದರು.

ಬೇಸಿಗೆ ಶಿಬಿರದಲ್ಲಿ ತಮ್ಮ ಮಕ್ಕಳು ಪಾಲ್ಗೊಂಡಾಗ ಪೋಷಕರಿಗೆ ಆತಂಕ ಇರುವುದಿಲ್ಲ. ಚಿಕ್ಕಮಗಳೂರು ಜಿಲ್ಲೆ ಹೊರತು ಪಡಿಸಿ ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಬೇಸಿಗೆ ಬೆಸುಗೆ ಶಿಬಿರ ನಡೆಯುತ್ತಿಲ್ಲ. ಜಿಲ್ಲೆಯ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಇಂತಹ ಶಿಬಿರಗಳನ್ನು ಜಿ.ಪಂನಿಂದ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಎಸ್ ಕೀರ್ತನಾ ಮಾತನಾಡಿ, ಶ್ರೀಮಂತರ ಮಕ್ಕಳು ಬೇಸಿಗೆ ಶಿಬಿರಗಳಲ್ಲಿ ವಿವಿಧ ಚಟುವಟಿಕೆಗಳಾದ ಈಜು, ರಂಗೋಲಿ, ಹಾಡುಗಾರಿಕೆ, ಪೈಂಟಿಂಗ್, ಚಿತ್ರಕಲೆ ಮುಂತಾದವುಗಳನ್ನು ಕಲಿಸಲು 4500- 45 ಸಾವಿರದವರೆಗೆ ಶುಲ್ಕಕ್ಕೆ ಖರ್ಚು ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ ಎಂದರು.

ಸರ್ಕಾರ ಗ್ರಾಮೀಣ ಭಾಗದ ಎಲ್ಲಾ ಮಕ್ಕಳು, ಯುವಕ-ಯುವತಿಯರಿಗೆ ಪ್ರತೀ ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯ ಗಳಲ್ಲಿ ಪುಸ್ತಕಗಳನ್ನು ಅಳವಡಿಸಲಾಗಿದ್ದು, ಅವುಗಳ ಸದ್ಭಳಕೆ ಮಾಡಲು ಪೋಷಕರು ತಮ್ಮ ಮಕ್ಕಳಿಗೆ ಪ್ರೋತ್ಸಾಹಿಸ ಬೇಕು. ಜೊತೆಗೆ ಬೇಸಿಗೆ ಶಿಬಿರಗಳಲ್ಲಿ ವಿಷಯ ತಜ್ಞರಿಂದ ಉಪಯುಕ್ತ ಮಾಹಿತಿ ಕೊಡಿಸಲಾಗುತ್ತಿದ್ದು, ಗ್ರಾಮೀಣ ಸೊಗಡಿನ ಹತ್ತು ಹಲವು ಕ್ರೀಡೆಗಳು ಪರಿಚಯವಾಗಬೇಕೆಂಬುದು ಉದ್ದೇಶವಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಪಟ್ಟಣಗಳಿಗೆ ಸೀಮಿತವಾಗಿದ್ದ ಉತ್ತಮ ಬೇಸಿಗೆ ಶಿಬಿರಗಳು ಇಂದು ಗ್ರಾಮೀಣ ಭಾಗಕ್ಕೆ ವಿಸ್ತರಣೆಯಾಗಿರುವುದು ಶ್ಲಾಘನೀಯ ಎಂದರು.

ಬೇಸಿಗೆ ರಜೆ ಸಂದರ್ಭದಲ್ಲಿ ತಮ್ಮ ಮಕ್ಕಳು ಕೆರೆ, ಹಳ್ಳ, ಕಟ್ಟೆಗಳ ಕಡೆ ಈಜಲು ಹೋಗಿ ಪ್ರಾಣ ಹಾನಿಯಾಗಿರುವ ಬಗ್ಗೆ ಪೋಷಕರು ಆತಂಕಗೊಳ್ಳುತ್ತಾರೆ. ಇದನ್ನು ತಡೆಯುವ ಸಲುವಾಗಿ ಬೇಸಿಗೆ ಶಿಬಿರ ಆಯೋಜಿಸಿದ್ದು, ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಕಲೆಗಳನ್ನು ಪರಿಚಯಿಸಲಾಗುತ್ತಿದ್ದು, ಈ ಶಿಬಿರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಹಿಂದೆ ಹಳ್ಳಿಗಳಲ್ಲಿ ಹಾಡು, ಹಸೆ, ಜನಪದಗೀತೆ, ಹಸೆ ಬರೆಯುವುದು ಮುಂತಾದವುಗಳನ್ನು ಮದುವೆ ಸಂದರ್ಭಗಳಲ್ಲಿ ಬಳಕೆ ಮಾಡುತ್ತಿರುವುದನ್ನು ಕಂಡಿದ್ದೆವು. ಆದರೆ, ಇಂದು ಆಧುನಿಕ ಯುಗದಲ್ಲಿ ಇವುಗಳು ಮರೆಯಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

ಈ ವೇಳೆ ಇಓ ವಿಜಯಕುಮಾರ್, ಗ್ಯಾರಂಟಿ ಪ್ರಾಧಿಕಾರ ಸಮಿತಿಯ ಸದಸ್ಯರಾದ ಬಸವರಾಜು, ಶೃತಿ, ಗ್ರಾಮಸ್ಥರಾದ ಪರಮೇಶ್, ಚಂದ್ರು, ರಘು ಇದ್ದರು‌.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಸರೀಘಟ್ಟ ಚೌಡೇಶ್ವರಿ ದೇವಿ ಜಾತ್ರಾಮಹೋತ್ಸವ
ಗ್ರಾಮೀಣ ಜನರಿಗೆ ಗ್ರಾಮ-ನೆಟ್ ಭಾರತ ಯೋಜನೆ ವರದಾನ