ಫೋಟೋ - 10ಎಂವೈಎಸ್ 47ಕನ್ನಡಪ್ರಭ ವಾರ್ತೆ ಬಿಳಿಗೆರೆಹುಣಸೂರು ತಾಲೂಕಿನ ಬಿಳಿಗೆರೆ ಗ್ರಾಮದ ಅನ್ವೇಷಣಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ಪರೀಕ್ಷಾ ಫಲಿತಾಂಶದಲ್ಲಿ ವಿದ್ಯಾರ್ಥಿಗಳು ಉತ್ತಮ ಸ್ಥಾನ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಪ್ರಾಂಶುಪಾಲ ಎಚ್.ಎನ್. ಗಿರೀಶ್ ಹರ್ಷ ವ್ಯಕ್ತಪಡಿಸಿದ್ದಾರೆ.ಗ್ರಾಮೀಣ ಭಾಗದ ನಮ್ಮ ಸಂಸ್ಥೆಗೆ ಸುತ್ತಮುತ್ತಲ ಹಳ್ಳಿಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದು, ವಿದ್ಯಾರ್ಥಿಗಳ ಸಾಧನೆ ಖುಷಿ ನೀಡಿದೆ. ನಮ್ಮ ಕಾಲೇಜಿನಿಂದ ಒಟ್ಟು 120 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 119 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ, ಸರಾಸರಿ ಶೇ. 99.16 ಫಲಿತಾಂಶ ನೀಡುವ ಮೂಲಕ ಅನ್ವೇಷಣಾ ಸಂಸ್ಥೆಯು ಗುಣಾತ್ಮಕ ಫಲಿತಾಂಶ ನೀಡುವಲ್ಲಿ ಉನ್ನತ ಸ್ಥಾನ ಗಳಿಸಿದೆ.ವಿಜ್ಞಾನ ವಿಭಾಗದಿಂದ ಡಿ. ತನುಶ್ರೀ ವಿದ್ಯಾರ್ಥಿನಿ 580 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಕಾಲೇಜಿಗೆ ಟಾಪರ್ ಆಗಿದ್ದಾಳೆ. ಹರ್ಷಿತ್ ಘೋರ್ಪಡೆ 579 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ದ್ವಿತೀಯ ಸ್ಥಾನ ಪಡೆದಿದ್ದಾನೆ. ಎಂ. ಜೀವನ್ 571, ಎಚ್.ಜೆ. ತೇಜಸ್ 570, ಎ.ಎನ್. ಧೀಮಂತ್ 569, ಎಲ್.ಎಂ. ಅಮೂಲ್ಯ 568, ಚೆಲುವರಾಜ್ ನಾಯಕ್ 568, ನೂರ್ ಸುಫಿಯಾ ಮೊಹಮ್ಮದಿ 568, ಜಿ. ವಿಭಾ 567, ಎಂ.ಎಸ್. ಸಮೃದ್ಧ್ 564, ಡಿ. ನಂದಿತಾ 562, ಎಚ್.ವಿ. ಅಜಯ್ 560 ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಎಂ.ಆರ್. ಸಂತೋಷ್ 577 ಅಂಕ ಪಡೆದುಕೊಳ್ಳುವ ಮೂಲಕ ಕಾಲೇಜಿಗೆ ಟಾಪರ್ ಎನಿಸಿದ್ದಾನೆ. ಭೂಮಿಕಾ 558 ಹಾಗೂ ಫಾಜಿಯಾ ತರನುಂ 558 ಅಂಕ ಪಡೆದುಕೊಳ್ಳುವ ಮೂಲಕ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅನ್ವೇಷಣಾ ಸಂಸ್ಥೆಯಿಂದ ಒಟ್ಟು 120 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 41 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 72 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದು, ಗಣಿತ ವಿಷಯದಲ್ಲಿ ನಾಲ್ಕು ವಿದ್ಯಾರ್ಥಿಗಳು, ಕನ್ನಡದಲ್ಲಿ ಇಬ್ಬರು ವಿದ್ಯಾರ್ಥಿಗಳು, ಜೀವಶಾಸ್ತ್ರದಲ್ಲಿ ಒಬ್ಬ ವಿದಾರ್ಥಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ.ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಸಂತೋಷ ವ್ಯಕ್ತಪಡಿಸಿರುವ ಸಂಸ್ಥೆ ಮುಖ್ಯಸ್ಥ ಎಚ್.ಕೆ. ಚಂದ್ರಮೋಹನ್ ಅವರು ಮುಂದಿನ ಸಿಇಟಿ, ನೀಟ್, ಜೆಇಇ ಸ್ಪರ್ಧಾತ್ಮಕ ಪರೀಕೆಗಳಲ್ಲಿ ನಮ್ಮ ವಿದ್ಯಾರ್ಥಿಗಳಿಂದ ಉತ್ತಮ ಫಲಿತಾಂಶ ದೊರೆಯುವ ನಿರೀಕ್ಷೆಯಿದೆ ಎಂದಿದ್ದಾರೆ. ಸಂಸ್ಥೆ ಕಾರ್ಯದರ್ಶಿ ಎಚ್.ಸಿ. ಪ್ರಶಾಂತ್ ಅವರು ಫಲಿತಾಂಶಕ್ಕೆ ಹರ್ಷ ವ್ಯಕ್ತಪಡಿಸಿ, ಶುಭಕೋರಿದ್ದಾರೆ.