ಕನ್ನಡಪ್ರಭ ವಾರ್ತೆ ರಾಮನಗರ
ನಂತರ ಮಾತನಾಡಿದ ಅವರು, ನನಗೆ ''''''''ಗರುಡಗ್ಲೈಡ್'''''''' ಉದ್ಘಾಟಿಸುವ ಅವಕಾಶ ಸಿಕ್ಕಿದ್ದು ಸಂತಸ ತಂದಿದೆ. ಎರಡು ಬೃಹತ್ ಇನ್ವರ್ಷನ್ (ತಲೆಕೆಳಗಾಗುವ) ರೋಲರ್ ಕೋಸ್ಟರ್‌ಗಳನ್ನು ಹೊಂದಿರುವ ಭಾರತದ ಮೊದಲ ಅಮ್ಯೂಸ್ ಮೆಂಟ್ ಪಾರ್ಕ್ ಎಂಬ ಹೆಗ್ಗಳಿಕೆಗೆ ವಂಡರ್ ಲಾ ಪಾತ್ರವಾಗಿದೆ ಎಂದು ಹೇಳಿದರು.
ವಂಡರ್ ಲಾ ಹಾಲಿಡೇಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿತ್ತಿಲಪ್ಪಿಲ್ಲಿ ಮಾತನಾಡಿ, ಗಾಳಿಯಲ್ಲಿ ತೂಗಾಡುತ್ತಾ ವೇಗದಲ್ಲಿ ಸಾಗುವ ಈ ರೈಡ್, ಪ್ರವಾಸಿಗರಿಗೆ ರೋಚಕ ಅನುಭವ ನೀಡಲಿದೆ. ಈ ರೈಡ್ ಅಳವಡಿಕೆ ಮತ್ತು ಸಂಯೋಜನೆಯನ್ನು ವಂಡರ್ ಲಾದ ಸ್ವಂತ ಎಂಜಿನಿಯರಿಂಗ್ ತಂಡವು ನಿರ್ವಹಿಸಿದ್ದು. ಅತ್ಯುನ್ನತ ಜಾಗತಿಕ ಸುರಕ್ಷತಾ ಮಾನದಂಡಗಳು ಮತ್ತು ನಿಖರತೆಯಿಂದ ಕಾರ್ಯನಿರ್ವಹಿಸಿವೆ ಎಂದರು.ರೈಡ್ ಮಾಡುವವರು ರೋಲ್ ಓವರ್, ವರ್ಟಿಕಲ್ ಲೂಪ್, ಸೈಡ್ ವೈಂಡರ್ ಮತ್ತು ಡಬಲ್ ಇನ್ ಲೈನ್ ಟ್ವಿಸ್ಟ್ ಗಳನ್ನು ಸತತವಾಗಿ ಅನುಭವಿಸುತ್ತಾರೆ. ಯಾವುದೇ ವಿರಾಮವಿಲ್ಲದೆ ಸಂಪೂರ್ಣ ರೋಮಾಂಚನ ನೀಡುವಂತೆ ವಿನ್ಯಾಸಗೊಳಿಸ ಲಾಗಿದೆ. ಇದಕ್ಕಾಗಿ ₹34 ಕೋಟಿ ಹೂಡಿಕೆ ಮಾಡಲಾಗಿದ್ದು, ಇದು ಭಾರತಕ್ಕೆ ವಿಶ್ವದರ್ಜೆಯ ಸಾಹಸಮಯ ಅನುಭವಗಳನ್ನು ತರುವ ವಂಡರ್ ಲಾದ ಬದ್ಧತೆಗೆ ಸಾಕ್ಷಿಯಾಗಿದೆ. ಗರುಡ ಗ್ಲೈಡ್ ಕೇವಲ ಒಂದು ಹೊಸ ಆಕರ್ಷಣೆ ಮಾತ್ರವಲ್ಲ, ಅದೊಂದು ವಿಶಿಷ್ಟ ಮೈಲಿಗಲ್ಲಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಯೂಟ್ಯೂಬರ್ ''''''''ಡಾ.ಬ್ರೋ'''''''' ಖ್ಯಾತಿಯ ಗಗನ್ ಶ್ರೀನಿವಾಸ್ ಮತ್ತು ಈ ವಂಡರ್ ಲಾ ಹಾಲಿಡೇಸ್ ಲಿಮಿಟೆಡ್‌ನ ಸಿಓಓ ಧೀರನ್ ಚೌಧರಿ ಹಾಗೂ ಬೆಂಗಳೂರು ಪಾರ್ಕ್ ಮುಖ್ಯಸ್ಥರಾದ ಎಚ್.ಎಸ್. ರುದ್ರೇಶ್ ಉಪಸ್ಥಿತರಿದ್ದರು.