ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಂತರಿಕ ಗುಣಮಟ್ಟ ಹಾಗೂ ಭರವಸೆ ಕೋಶ, ಬಾಲರೋಗ ಹಾಗೂ ಸ್ವಸ್ಥವೃತ್ತ ವಿಭಾಗಗಳ ಸಹಯೋಗದಿಂದ ‘ಬೇಸಿಗೆ ಶಿಬಿರ - ಗ್ರೀಷ್ಮೋಲ್ಲಾಸ - 2024 ’ ವನ್ನು ಮೇ 13ರಿಂದ 18 ರ ವರೆಗೆ ಆಯೋಜಿಸಲಾಗಿತ್ತು.ಶಿಬಿರವನ್ನು ಉದ್ಘಾಟಿಸಿದ ಎಸ್.ಡಿ.ಎಮ್. ಸಂಶೋಧನಾ ಕೇಂದ್ರದ ಹಿರಿಯ ಸಂಶೋಧನಾ ಅಧಿಕಾರಿ ನವೀನ್‌ಚಂದ್ರ ಎನ್.ಎಚ್. ಅವರು, ಬೇಸಿಗೆ ರಜೆ ಅಜ್ಜಿಮನೆ ನಂಟು ಹಾಗೂ ಇಂದಿನ ಕಾಲದ ಬೇಸಿಗೆ ಶಿಬಿರಕ್ಕೂ ಇರುವ ಸಾಮ್ಯತೆ ಹಾಗೂ ಉಪಯೋಗದ ಕುರಿತು ವಿವರಿಸಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್. ಅವರು ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ಮುಖ್ಯ ಸಂಘಟನಾ ಕಾರ್ಯದರ್ಶಿ ಬಾಲರೋಗ ವಿಭಾಗದ ಮುಖ್ಯಸ್ಥ ಡಾ. ಪೃಥ್ವಿರಾಜ್ ಪುರಾಣಿಕ್ ಸ್ವಾಗತಿಸಿ, ಸ್ವಸ್ಥವೃತ್ತ ವಿಭಾಗದ ಮುಖ್ಯಸ್ಥ ಡಾ. ವಿಜಯ್ ಬಿ. ನೆಗಳೂರು ವಂದಿಸಿದರು. ಪ್ರಥಮ ವರ್ಷದ ಸ್ನಾತಕ ವಿದ್ಯಾರ್ಥಿನಿ ಡಾ. ಮನಸ್ವಿತಾ ಜೈನ್ ಕಾರ್ಯಕ್ರಮ ನಿರೂಪಿಸಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಸಂಹಿತಾ ಸಿದ್ಧಾಂತ ವಿಭಾಗದ ಸಹಪ್ರಾಧ್ಯಾಪಕ ಡಾ. ಅರ್ಹಂತ್ ಕುಮಾರ್, ಶಲ್ಯತಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸುಭಾಸ್ ಭಕ್ತ, ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ. ಶ್ರೀಕಾಂತ್ ಪಿ., ಶರೀರ ರಚನಾ ವಿಭಾಗದ ಸಹಪ್ರಾಧ್ಯಾಪಕ ಡಾ. ನಿತಿನ್ ಕುಮಾರ್, ಕಾಯಚಿಕಿತ್ಸಾ ಮತ್ತು ಮಾನಸರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಧನೇಶ್ವರಿ ಎಚ್.ಎ., ಬಾಲರೋಗ ವಿಭಾಗದ ಸಹಪ್ರಾಧ್ಯಾಪಕಿ ಡಾ. ಸಹನಾ ಶಂಕರಿ, ಶಾಲಕ್ಯತಂತ್ರ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಗಾಯತ್ರಿ ಜಿ. ಹೆಗ್ಡೆ ಶಿಬಿರವನ್ನು ನಡೆಸಿಕೊಟ್ಟರು.