ಪಠ್ಯೇತರ ಚಟುವಟಿಕೆ ಕಲಿಯಲು ಬೇಸಿಗೆ ಶಿಬಿರ ಸಹಕಾರಿ: ದಿನೇಶ್

KannadaprabhaNewsNetwork |  
Published : Apr 07, 2025, 12:32 AM IST
5ಕೆಎಂಎನ್ ಡಿ17 | Kannada Prabha

ಸಾರಾಂಶ

ಗ್ರಾಮೀಣ ಮಕ್ಕಳಲ್ಲಿ ಹಲವು ಪ್ರತಿಭೆ ಅಡಕವಾಗಿದೆ. ಅವರಿಗೆ ಸೂಕ್ತ ತರಬೇತಿ ಇಲ್ಲದೇ ಎಲೆಮರೆಕಾಯಿಯಂತಾಗಿದ್ದಾರೆ. ಪಟ್ಟಣದಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದಿಂದ ವ್ಯಕ್ತಿತ್ವ ವಿಕಾಸನಗೊಳ್ಳುವ ಜೊತೆಗೆ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆಯಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮೊಬೈಲ್ ಹಾಗೂ ಟಿವಿ ಮಾಧ್ಯಮದಿಂದ ದೂರವಿರಿಸಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಕಲಿಯಲು ಮಕ್ಕಳಿಗೆ ಬೇಸಿಗೆ ಶಿಬಿರ ಸಹಕಾರಿಯಾಗಿದೆ ಎಂದು ಶಿಕ್ಷಕ ದಿನೇಶ್ ತಿಳಿಸಿದರು.

ಪಟ್ಟಣದ ಜೆನ್ ಸ್ಪೋಟ್ಸ್, ಮಾರ್ಷಲ್ ಅಕಾಡೆಮಿಯಲ್ಲಿ ನಡೆಯುತ್ತಿರುವ 9ನೇ ವರ್ಷದ ಶಿವು ಕರಾಟೆ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಮಕ್ಕಳಲ್ಲಿ ಹಲವು ಪ್ರತಿಭೆ ಅಡಕವಾಗಿದೆ. ಅವರಿಗೆ ಸೂಕ್ತ ತರಬೇತಿ ಇಲ್ಲದೇ ಎಲೆಮರೆಕಾಯಿಯಂತಾಗಿದ್ದಾರೆ. ಪಟ್ಟಣದಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದಿಂದ ವ್ಯಕ್ತಿತ್ವ ವಿಕಾಸನಗೊಳ್ಳುವ ಜೊತೆಗೆ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆಯಾಗಿದೆ ಎಂದರು.

ನಾಯಕತ್ವ ಗುಣ, ಹಾಸ್ಯ, ಗಾಯನ ಸೇರಿದಂತೆ ಹಲವು ವಿಷಯಗಳ ಬಗ್ಗೆತರಬೇತಿ ನೀಡುತ್ತಿರುವುದರಿಂದ ಮಕ್ಕಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಶಿಬಿರ ವ್ಯವಸ್ಥಾಪಕ ಶಿವು ಮಾತನಾಡಿ, ಮಕ್ಕಳಿಗೆ ವಿವಿಧ ಕಲೆಗಳನ್ನು ಪರಿಚಯಿಸುವ ಹಿನ್ನೆಲೆಯಲ್ಲಿ 4ರಿಂದ 20 ವರ್ಷದೊಳಗಿನವರಿಗೆ ಕರಾಟೆ, ಮಾತನಾಡುವ ಗೊಂಬೆ, ಈಜು, ಮಾಸ್ಕ್ ತಯಾರಿಕೆ, ನೃತ್ಯ, ಗಾಯನ, ಚಿತ್ರಕಲೆ, ಕಲೆ ಮತ್ತು ಕರಕುಶಲ, ನಾಟಕ, ಭರತನಾಟ್ಯ, ಅತ್ಮರಕ್ಷಣೆ, ಬಿಲ್ಲುಗಾರಿಕೆ, ತಮಾಷೆಯ ಆಟಗಳು ಹಾಗೂ ಹೊಸದಾಗಿ ಗೀಟರ್, ಕೀ ಬೋರ್ಡ್ ಕಲಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಮೊ-9901272626, ಮೊ-9481406060 ಸಂಪರ್ಕಿಸಬಹುದಾಗಿದೆ ಎಂದರು.

ಈ ವೇಳೆ ಮುಖಂಡರಾದ ಭರತೇಶ್, ಪೊಲೀಸ್ ಮೋಹನ್‌ಕುಮಾರ್, ನೃತ್ಯ ಶಿಕ್ಷಕಿ ಶ್ರೀ ಲಕ್ಷ್ಮಿ ಇದ್ದರು.

ಮಕ್ಕಳನ್ನು ಬೇಸಿಗೆ ಶಿಬಿರಗಳಿಗೆ ದಾಖಲಿಸಿ

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಬೇಸಿಗೆ ಶಿಬಿರಗಳಿಂದ ಮಕ್ಕಳ ಜ್ಞಾನ ಮತ್ತು ವ್ಯಕ್ತಿತ್ವ ವಿಕಾಸವಾಗುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಬೇಸಿಗೆ ಶಿಬಿರಗಳಿಗೆ ದಾಖಲಿಸಿ ಸಮಗ್ರ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಮಗಿರಿ ಶ್ರೀ ಕ್ಷೇತ್ರದ ಆದಿಚುಂಚನಗಿರಿ ಶಾಖಾ ಮಠದ ಪ್ರಧಾನ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಹೇಳಿದರು.

ಪಟ್ಟಣದ ಬಿ.ಜಿ.ಎಸ್ ಪಬ್ಲಿಕ್ ಶಾಲೆ ವತಿಯಿಂದ ಆಯೋಜಿಸಿದ್ದ ಒಂದು ತಿಂಗಳ ಶಿಬಿರವನ್ನು ಮಕ್ಕಳೊಂದಿಗೆ ಉದ್ಘಾಟಿಸಿ ಮಾತನಾಡಿ, ನಾಲ್ಕು ಗೋಡೆಗಳ ನಡುವೆ ಬಂದಿಗಳಾಗಿ ಸದಾ ಕಾಲವೂ ಪುಸ್ತಕ, ಓದು ಎಂಬ ಒತ್ತಡದಿಂದ ಮುಕ್ತರಾಗಿ ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಆಟವಾಡಿಕೊಂಡು ಸಂತೋಷದಿಂದ ಕಲಿಕೆಗೆ ಮುಂದಾಗಲು ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ ಎಂದರು.

ಮಕ್ಕಳು ತಮ್ಮಲ್ಲಿ ಸುಪ್ತ ಪ್ರತಿಭೆ ಹೊರಚೆಲ್ಲಲು ಶಿಬಿರವು ಸಹಕಾರಿಯಾಗಿರುವ ಕಾರಣ ಮಕ್ಕಳು ತಮ್ಮ ಪ್ರತಿಭೆಯನ್ನು ಹೊರ ತರಲು ಪ್ರಯತ್ನಿಸಬೇಕು. ಶಿಬಿರದಲ್ಲಿ ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳು ನೀಡುವ ವಿಚಾರ ಹಾಗೂ ಮಾರ್ಗದರ್ಶನವು ಮಕ್ಕಳ ವ್ಯಕ್ತಿತ್ವವು ಸಮಗ್ರವಾಗಿ ವಿಕಸನಗೊಳ್ಳುವಂತೆ ಮಾಡುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಶ್ರಾಂತ ಉಪನ್ಯಾಸಕ ಎಂ.ಕೆ.ಹರಿಚರಣತಿಲಕ್, ಪುರಸಭೆ ಮಾಜಿ ಸದಸ್ಯ ಕೆ.ಆರ್.ನೀಲಕಂಠ ಮಾತನಾಡಿದರು. ಪ್ರಾಂಶುಪಾಲ ಪ್ರಸಾದೇಗೌಡ, ಮುಖ್ಯ ಶಿಕ್ಷಕ ರಾಮಚಂದ್ರ ಸೇರಿದಂತೆ ಸಂಸ್ಥೆ ಭೋಧಕ ವೃಂದ ಮತ್ತು ಪೋಷಕರು ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ