ಕನ್ನಡಪ್ರಭ ವಾರ್ತೆ ಮೈಸೂರು
ಅದಮ್ಯ ರಂಗಶಾಲೆಯ ವತಿಯಿಂದ ವಿ.ಕೆ.ಪಬ್ಲಿಕ್ ಸ್ಕೂಲ್ ಸಹಯೋಗದಲ್ಲಿ ನಗರದ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಬಾಲಂಗೋಚಿ’ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಭಾಷಣ ಮಾಡಿದ ಅವರು, ಇಂತಹ ಶಿಬಿರಗಳಲ್ಲಿ ಮಕ್ಕಳ ಆಟ, ಕಲಿಕೆ ಮತ್ತು ಸಂಸ್ಕಾರಗಳನ್ನು ಒಟ್ಟುಗೂಡಿಸುವ ಚಟುವಟಿಕೆಗಳು ನಡೆಯುವುದು ಇದಕ್ಕೆ ಕಾರಣ ಎಂದರು.
ಮಕ್ಕಳಲ್ಲಿ ಆತ್ಮವಿಶ್ವಾಸ,. ತಂಡದಲ್ಲಿ ಕೆಲಸ ಮಾಡುವ ಗುಣ ಬೆಳೆಸುವುದು, ಸಾಂಸ್ಕೃತಿಕ ಮತ್ತು ನೈತಿಕ ಮೌಲ್ಯಗಳನ್ನು ಪರಿಚಯಿಸುವುದು ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ ಆಗುತ್ತದೆ ಎಂದು ಅವರು ಹೇಳಿದರು.ಚಿತ್ರಕಲೆ, ಕರಕುಶಲ ಕಲೆ,ಯೋಗ ಮತ್ತು ವ್ಯಾಯಾಮ,ನಾಟಕಾಭ್ಯಾಸ, ಕಥೆ ಹೇಳುವಿಕೆ ಮತ್ತು ಪಠಣ, ಸಂಗೀತ, ನೃತ್ಯ ಆಟಗಳು ನಡೆಯುತ್ತವೆ. ಶಿಬಿರದ ಕೊನೆಯಲ್ಲಿ ಮಕ್ಕಳಿಂದ ನಾಟಕ ಪ್ರದರ್ಶನ ನಡೆಸುವುದು ಬಹಳ ಪರಿಣಾಮಕಾರಿ.
ವಿಜಯನಗರದ 3ನೇ ಹಂತದ ವಿ.ಕೆ. ಪಬ್ಲಿಕ್ ಶಾಲೆ ಕಾರ್ಯದರ್ಶಿ ರವಿಕುಮಾರ್ ಬೆಕ್ಯಾ ಅಧ್ಯಕ್ಷತೆ ವಹಿಸಿದ್ದರು. ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಟಿ. ಸತೀಶ್ ಜವರೇಗೌಡ ಆಶಯ ಭಾಷಣ ಮಾಡಿದರು.
ಇದಲ್ಲದೇ ದ್ವಿತೀಯ ಪಿಯುಸಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿರುವ ಬಸವೇಶ್ವರನಗರ ಎಎಂಬಿ ಸಂಯುಕ್ತ ಪಿಯು ಕಾಲೇಜಿನ ಎಂ. ಸಂಗೀತ, ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಎನ್‌ಎಸ್‌ಎಸ್ ಸಂಘಟನಾ ಕಾರ್ಯದರ್ಶಿ ಸಿ.ಆರ್. ಮಾನಸ, ಸ್ವಯಂ ಸೇವಕಿ ಬಿ. ನಿತ್ಯಶ್ರೀ ಅವರಿಗೆ ಅದಮ್ಯ ಯುವಚೇತನ ಪ್ರಶಸ್ತಿ ಪ್ರದಾನ ಮಾಡಿದರು.
ನಂತರ ಬಾಲಂಗೋಚಿ ಚಿಣ್ಣರ ಬೇಸಿಗೆ ಶಿಬಿರದ ಮಕ್ಕಳು ಮಳೆ ಹುಚ್ಚ, ಗುಬ್ಬಿ ಮತ್ತು ಗೋಪಿ ಎರಡು ಮಕ್ಕಳ ನಾಟಕ ಪ್ರದರ್ಶನ ನಡೆಯಿತು.