ಬೇಸಿಗೆ ಶಿಬಿರಗಳು ಮಕ್ಕಳ ಜೀವನ ಬದಲಿಸುತ್ತದೆ: ಚಿದಾನಂದ ಎಸ್ .ನಾಯಕ್

KannadaprabhaNewsNetwork |  
Published : May 07, 2024, 01:03 AM IST
6ಕೆಎಂಎನ್ ಡಿ29 | Kannada Prabha

ಸಾರಾಂಶ

ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳ ಉಳಿವಿಗೆ ಸವಾಲಾಗಿವೆ. ಈಗ ಸರ್ಕಾರವನ್ನು ನಂಬದೇ ಸಾರ್ವಜನಿಕ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕಿದೆ. ಅಂಕಗಳಿಕೆ ಧಾವಂತದಲ್ಲಿ ಸಿಲುಕಿರುವ ಮಕ್ಕಳು ಸೃಜನಶೀಲ ಮತ್ತು ಸಂವೇದನ ಶೀಲತೆ ಕಳೆದುಕೊಳ್ಳುತ್ತಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ. ಇದು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಬೇಸಿಗೆ ಶಿಬಿರಗಳು ಮಕ್ಕಳ ಜೀವನ ಬದಲಿಸುತ್ತವೆ ಎಂದು ಚಲನಚಿತ್ರ ನಿರ್ದೇಶಕ ಚಿದಾನಂದ ಎಸ್.ನಾಯಕ್ ತಿಳಿಸಿದರು.

ತಾಲೂಕಿನ ಮಹದೇವಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಳಗಿನೊಳಗು ಬಳಗ ಮತ್ತು ಸಂಚಲನ ಮೈಸೂರು ಸಹಯೋಗದಲ್ಲಿ ಆಯೋಜಿಸಿದ್ದ ಕುಣಿಯೋಣು ಬಾರಾ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಗ್ರಾಮಾಂತರ ಪ್ರದೇಶದಲ್ಲಿ ಶಿಬಿರ ಆಯೋಜನೆ ಮಕ್ಕಳ ಸಮಗ್ರ ಬೆಳವಣಿಗೆಗೆ ಉತ್ತಮ ವೇದಿಕೆಯಾಗಿವೆ. ಮಕ್ಕಳು ಕೇವಲ 20 ದಿನಗಳಲ್ಲಿ ಜಾನಪದ ಗೀತೆ, ಗಾಯನ ಕಲಿತಿದ್ದಾರೆ. ನಾಟಕ ಕಲಿತು ಅಭಿನಯಿಸಿದ್ದಾರೆ. ವೇದಿಕೆ ಮೇಲೆ ನಿಂತು ಮಾತಾಡುವ, ಸೃಜನಶೀಲವಾಗಿ ಆಲೋಚಿಸುವುದನ್ನು ಮಕ್ಕಳು ಕಲಿಯುತ್ತಾರೆ ಎಂದರು.

ಮೈಸೂರಿನ ಎಪಿಎಂಸಿ ಮಾಜಿ ಉಪಾಧ್ಯಕ್ಷ ಅಹಿಂದ ಜವರಪ್ಪ ಮಾತನಾಡಿ, ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳ ಉಳಿವಿಗೆ ಸವಾಲಾಗಿವೆ. ಈಗ ಸರ್ಕಾರವನ್ನು ನಂಬದೇ ಸಾರ್ವಜನಿಕ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ಸಲಹೆ ನೀಡಿದರು.

ಶಿಬಿರದ ನಿರ್ದೇಶಕ ದೀಪಕ್ ಮೈಸೂರು ಮಾತನಾಡಿ, ಅಂಕಗಳಿಕೆ ಧಾವಂತದಲ್ಲಿ ಸಿಲುಕಿರುವ ಮಕ್ಕಳು ಸೃಜನಶೀಲ ಮತ್ತು ಸಂವೇದನ ಶೀಲತೆ ಕಳೆದುಕೊಳ್ಳುತ್ತಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ. ಇದು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.

ಇದೇ ವೇಳೆ ಕವಿ ಕುವೆಂಪು ವಿರಚಿತ ಬೊಮನಹಳ್ಳಿ ಕಿಂದರಿ ಜೋಗಿ ನಾಟಕವನ್ನು ಮಕ್ಕಳು ಪ್ರದರ್ಶಿಸಿದರು. ಕಂಸಾಳೆ, ಮಾರಿ ಕುಣಿತ ಹಾಗೂ ಜಾನಪದ ಗೀತೆಗಳನ್ನು ಹಾಡಿದರು.

ಕಾರ್ಯಕ್ರಮದಲ್ಲಿ ಮಹದೇವಪುರ ಗ್ರಾಪಂ ಉಪಾಧ್ಯಕ್ಷೆ ನಿಂಗಮ ಮಹದೇವು, ಎಂಡಿಸಿಸಿ ಮಾಜಿ ನಿರ್ದೇಶಕ ಬಸವರಾಜು, ತಾಪಂ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಮಾಜಿ ಸದಸ್ಯ ಕಾಳೇಗೌಡ, ಅಪೆಕ್ಸ್ ಬ್ಯಾಂಕ್ ಮಾಜಿ ನಿರ್ದೇಶಕ ಶಿವಯ್ಯ ಅರಕೆರೆ, ವೈದ್ಯ ಡಾ.ರವೀಂದ್ರ, ಮುಖಂಡರಾದ ಮಹದೇವಸ್ವಾಮಿ, ಎಂ.ಈ. ಜಗದೀಶ್, ದಾಸೇಗೌಡ, ಗವಿಸಿದ್ದು, ಮುರುಘೇಂದ್ರ ಸ್ವಾಮಿ, ಶಿಬಿರದ ಸಂಚಾಲಕರಾದ ವಿನೋದ್, ವಿ.ಅನಿಲ್‌ಕುಮಾರ್, ವಿ. ಮಧುಕುಮಾರ್ ಇದ್ದರು.

PREV

Recommended Stories

ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ
12.69 ಲಕ್ಷ ಶಂಕಾಸ್ಪದ ಬಿಪಿಎಲ್‌ ಚೀಟಿ ರಾಜ್ಯದಲ್ಲಿ ಪತ್ತೆ: ಮುನಿಯಪ್ಪ