ಹುಬ್ಬಳ್ಳಿ:
ರೈಲು ಸಂಖ್ಯೆ 07325 ಏ. 23ರಂದು ಬೆಳಗ್ಗೆ 11.45ಕ್ಕೆ ಹುಬ್ಬಳ್ಳಿಯಿಂದ ಹೊರಟು ಭಾನುವಾರ ಮಧ್ಯಾಹ್ನ 2.30ಕ್ಕೆ ನ್ಯೂ ಟಿನ್ಸುಕಿಯಾ ತಲುಪಲಿದೆ. ಮರು ಪಯಣದಲ್ಲಿ ರೈಲು ಸಂಖ್ಯೆ 07326 ಏ. 27ರಂದು ರಾತ್ರಿ 10ಕ್ಕೆ ನ್ಯೂ ಟಿನ್ಸುಕಿಯಾದಿಂದ ಹೊರಟು ಗುರುವಾರ ರಾತ್ರಿ 11ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ.
ಈ ವಿಶೇಷ ರೈಲು ಎರಡೂ ಮಾರ್ಗಗಳಲ್ಲಿ ಎಸ್ಎಂಎಂ ಹಾವೇರಿ, ಹರಿಹರ, ದಾವಣಗೆರೆ, ಅರಸೀಕೆರೆ, ತುಮಕೂರು, ಎಸ್ಎಂವಿಟಿ ಬೆಂಗಳೂರು, ಬಂಗಾರಪೇಟೆ, ಕುಪ್ಪಂ, ಜೋಲಾರಪೇಟೆ, ಕಟ್ಪಾಡಿ, ರೇಣಿಗುಂಟ, ಗುಡೂರು, ಒಂಗೋಲ್, ವಿಜಯವಾಡ, ರಾಜಮಂಡ್ರಿ, ಕೊತ್ತವಲಸ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಾಲಸಾ, ಬ್ರಹ್ಮಪುರ, ಖುರ್ದಾ ರೋಡ್, ಭುವನೇಶ್ವರ್, ಕಟಕ್, ಭದ್ರಕ್, ಖರಗ್ಪುರ್, ಆಂಡುಲ್, ದನಕುಣಿ, ಬರ್ದ್ಧಮಾನ್, ಬೋಲ್ಪುರ್ (ಶಾಂತಿನಿಕೇತನ), ರಾಂಪುರ್ ಹಟ್, ನ್ಯೂ ಫರಕ್ಕಾ, ಮಾಲ್ಡಾ ಟೌನ್, ಬರ್ಸೋಯಿ, ಕಿಶನ್ಗಂಜ್, ನ್ಯೂ ಜಲ್ಪೈಗುರಿ, ನ್ಯೂ ಕೂಚ್ ಬೆಹಾರ್, ನ್ಯೂ ಅಲಿಪುರ್ ದ್ವಾರ, ಕೊಕ್ರಜಾರ್, ನ್ಯೂ ಬೊಂಗೈಗಾಂವ್, ಬರ್ಪೆಟಾ ರೋಡ್, ರಂಗಿಯಾ, ನ್ಯೂ ಮಿಸ್ಮಾರಿ, ರಂಗಾಪರ ನಾರ್ತ್, ವಿಶ್ವನಾಥ್ ಚರಾಲಿ, ಹರ್ಮುಟಿ, ನಾರ್ತ್ ಲಖಿಂಪುರ, ಧೇಮಾಜಿ ಮತ್ತು ದರ್ಭಾಂಗಾ ನಿಲ್ದಾಣಗಳಲ್ಲಿ ನಿಲ್ಲಲಿದೆ. ಈ ವಿಶೇಷ ರೈಲು 20 ಬೋಗಿ ಒಳಗೊಂಡಿದ್ದು, ಇದರಲ್ಲಿ 1 ಎಸಿ 2-ಟೈರ್, 6 ಎಸಿ 3-ಟೈರ್, 7 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್, 1 ಲಗೇಜ್ ಮತ್ತು ಜನರೇಟರ್-ಕಮ್-ಬ್ರೇಕ್ ವ್ಯಾನ್ ಮತ್ತು 1 ಎಸ್ಎಲ್ಆರ್/ಡಿ ಬೋಗಿಗಳು ಸೇರಿವೆ ಎಂದು ಪ್ರಕಟಣೆ ತಿಳಿಸಿದೆ.