ಸಾಂಸ್ಕೃತಿಕ ನಾಯಕ ಬಸವಣ್ಣನಿಗೆ ನಮನ

KannadaprabhaNewsNetwork |  
Published : Apr 21, 2026, 02:00 AM IST
ಹುಬ್ಬಳ್ಳಿಯ ಇಂದಿರಾ ಗಾಜಿನಮನೆಯಲ್ಲಿರುವ ಬಸವೇಶ್ವರ ಪುತ್ಥಳಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾಲಾರ್ಪಣೆ ಮಾಡಿದರು. ಈ ವೇಳೆ ಶಾಸಕ ಮಹೇಶ ಟೆಂಗಿನಕಾಯಿ ಇದ್ದರು. | Kannada Prabha

ಸಾರಾಂಶ

ಜಾತಿ-ಜಾತಿಗಳಲ್ಲಿ ಜಗಳ, ಹೊಡೆದಾಟ, ಕ್ಷೋಭೆ ನಿವಾರಣೆಗೆ 12ನೇ ಶತಮಾನದಲ್ಲಿಯೇ ಬಸವಣ್ಣವರು ಸಾಮಾಜಿಕ ಕ್ರಾಂತಿಗೆ ದೊಡ್ಡ ಅಡಿಗಲ್ಲು ಹಾಕಿದ್ದರು. ಇದೆಲ್ಲವನ್ನೂ ಮಾಡಿದಾಗ್ಯೂ ಕೂಡ ಅವರ ಮಾಡಿದ ಹೋರಾಟ, ಕ್ರಾಂತಿ ಈ ವರೆಗೂ ಸಂಪೂರ್ಣವಾಗಿಲ್ಲ.

ಹುಬ್ಬಳ್ಳಿ:

ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ಸೋಮವಾರ ನಗರಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಇಂದಿರಾ ಗಾಜಿನಮನೆ, ಸರ್ವೋದಯ ವೃತ್ತ ಸೇರಿದಂತೆ ವಿವಿಧೆಡೆ ಬಸವೇಶ್ವರರ ಪುತ್ಥಳಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು, ವಿವಿಧ ಸಂಘಟನೆ, ಸಮಾಜದ ಮುಖಂಡರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಇಂದಿರಾ ಗಾಜಿನಮನೆಯಲ್ಲಿರುವ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಾತಿ-ಜಾತಿಗಳಲ್ಲಿ ಜಗಳ, ಹೊಡೆದಾಟ, ಕ್ಷೋಭೆ ನಿವಾರಣೆಗೆ 12ನೇ ಶತಮಾನದಲ್ಲಿಯೇ ಬಸವಣ್ಣವರು ಸಾಮಾಜಿಕ ಕ್ರಾಂತಿಗೆ ದೊಡ್ಡ ಅಡಿಗಲ್ಲು ಹಾಕಿದ್ದರು. ಇದೆಲ್ಲವನ್ನೂ ಮಾಡಿದಾಗ್ಯೂ ಕೂಡ ಅವರ ಮಾಡಿದ ಹೋರಾಟ, ಕ್ರಾಂತಿ ಈ ವರೆಗೂ ಸಂಪೂರ್ಣವಾಗಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲಿಯೇ ಜಾತಿ ವಿರುದ್ಧ ಹೋರಾಡುವ ಮೂಲಕ ಸಮಾನತೆ ತರಲು ಶ್ರಮಿಸಿದವರು. ತಮ್ಮ ಕಾಯಕ ನಿಷ್ಠೆಯಿಂದಲೇ ಜಗತ್ತಿಗೆ ಮಾದರಿಯಾದವರು. ಜಾತಿ-ಮತ, ಪಂಥ ಧರ್ಮ ಎನ್ನದೇ ಸಮಾನತೆಯ ಸಂದೇಶ ಸಾರಿದವರು. ಅವರ ಆದರ್ಶ ಎಲ್ಲರಿಗೂ ಅನುಕರಣೀಯ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಬಸವೇಶ್ವರರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವೆ ಸಂಕಲ್ಪ ಮಾಡಬೇಕಿದೆ ಎಂದು ಹೇಳಿದರು.

ಇದೇ ವೇಳೆ ಸರ್ವೋದಯ ವೃತ್ತ ಸೇರಿದಂತೆ ವಿವಿಧೆಡೆ ಇರುವ ಬಸವೇಶ್ವರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಲಾಯಿತು. ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಶ್ರೀ, ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಉಪಮೇಯರ್‌ ಸಂತೋಷ ಚವ್ಹಾಣ, ಪಾಲಿಕೆ ಸದಸ್ಯರಾದ ಮೋಹನ ಹಿರೇಮನಿ, ಶಿವು ಮೆಣಸಿನಕಾಯಿ, ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ತಹಸೀಲ್ದಾರ್‌ ಮಹೇಶ ಗಸ್ತೆ, ಮಹಾನಗರ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ, ಕೆಪಿಸಿಸಿ ಕಾರ್ಯದರ್ಶಿ ಸದಾನಂದ ಡಂಗನವರ, ಮಹೇಶ ದಾಬಡೆ, ಪ್ರೇಮನಾಥ ಚಿಕ್ಕತುಂಬಳ, ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ ರಾಜ್ಯಾಧ್ಯಕ್ಷ ಶೇಖರಯ್ಯ ಮಠಪತಿ, ಲಿಂಗರಾಜ ಪಾಟೀಲ, ದಲಿತ ಸಂಘಟನೆಗಳ ಮುಖಂಡ ಗುರುನಾಥ ಉಳ್ಳಿಕಾಶಿ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ವಾಯವ್ಯ ಸಾರಿಗೆ ಸಂಸ್ಥೆ:

ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಿಯಾಂಗಾ ಪೂಜೆ ಸಲ್ಲಿಸಿದರು. ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಶ್ರೀನಿವಾಸಮೂರ್ತಿ ಸಿ, ಸಾರಿಗೆ ಸಂಸ್ಥೆ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಪಿ.ಆರ್. ಕಿರಣಗಿ, ಇಮಾಮ್ ಕಾಸೀಮ್ ಕಂದಗಲ್ ಸೇರಿದಂತೆ ಇತರರು ಇದ್ದರು.

ಅಮರಗೋಳ ಎಪಿಎಂಸಿ:

ಅಮಗೋಳ ಎಪಿಎಂಸಿಯಲ್ಲಿ ಆಹಾರಧಾನ್ಯ ವರ್ತಕರ ಸಂಘದ ಅಧ್ಯಕ್ಷ ಚನ್ನ ಹೊಸಮನಿ ನೇತೃತ್ವದಲ್ಲಿ ಬಸವ ಜಯಂತಿ ಆಚರಿಸಲಾಯಿತು. ಈ ವೇಳೆ ವ್ಯಾಪಾರಸ್ಥರಾದ ಪ್ರಕಾಶ ಸಾಂಬ್ರಾಣಿ, ಬಸವರಾಜ ಲಕ್ಷ್ಮೇಶ್ವರ, ಸಿದ್ದು ಮಮಾದಾಪುರ, ಚೇತನ ಹೊರಕೇರಿ, ಮಲ್ಲಿಕಾರ್ಜುನ ಬೂರಟ್ಟಿ. ಮೃತ್ಯುಂಜಯ ಹಿರೇಮಠ, ವ್ಯಾಪಾರಸ್ಥರು ಪಾಲ್ಗೊಂಡಿದ್ದರು.

ಒಳಪಂಗಡಗಳ ಒಕ್ಕೂಟ:

ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟ ಕರ್ನಾಟಕ ರಾಜ್ಯ ಘಟಕದ ಆಶ್ರಯದಲ್ಲಿ ಇಂದಿರಾ ಗಾಜಿನ ಮನೆಯಲ್ಲಿರುವ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಈ ವೇಳೆ ಪದಾಧಿಕಾರಿಗಳಾದ ಸುರೇಶ ಸವಣೂರ, ರಾಜಶೇಖರ ಮೆಣಸಿನಕಾಯಿ, ಬಂಗಾರೇಶ ಹಿರೇಮಠ, ಎಂ.ಪಿ. ಶಿವಕುಮಾರ, ಶಂಕರಣ್ಣ ನೇಗಿನಹಾಳ‌, ರವಿ ಹೊಸೂರ, ಪಿ.ಸಿ. ಕಮ್ಮಾರ, ವಿಜಯಕುಮಾರ್ ಕುಂದನಹಳ್ಳಿ ಆಗಮಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈದ್ಯನ ಹತ್ಯೆ ಮಾಡಿದ ಆರೋಪಿ ಬಂಧನ: ಎಸ್ಪಿ ದೀಪನ್
ಜನತೆ ನೆನಪಿಸಿಕೊಳ್ಳುವ ಕೆಲಸ ಮಾಡಬೇಕು: ಸಚಿವ ವೈದ್ಯ