ಮಾಯಸಂದ್ರ ಪಿಎಸಿಎಸ್ ಅಧ್ಯಕ್ಷರಾಗಿ ಸುನಿಲ್ ಅವಿರೋಧ ಆಯ್ಕೆ

KannadaprabhaNewsNetwork |  
Published : Oct 31, 2026, 01:45 AM IST
29 ಟಿವಿಕೆ 1 – ತುರುವೇಕೆರೆ ತಾಲೂಕು ಮಾಯಸಂದ್ರದ ಪಿಎಸಿಎಸ್ ನೂತನ ಅಧ್ಯಕ್ಷರಾಗಿ ಜೆ.ಎಸ್.ಸುನಿಲ್, ಉಪಾಧ್ಯಕ್ಷರಾಗಿ ಬಿ.ಆರ್.ನಂದಿನಿ ಅವಿರೋಧವಾಗಿ ಆಯ್ಕೆಯಾದರು. | Kannada Prabha

ಸಾರಾಂಶ

ತಾಲೂಕಿನ ಮಾಯಸಂದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆ.ಎಸ್.ಸುನಿಲ್, ಉಪಾಧ್ಯಕ್ಷರಾಗಿ ಬಿ. ಆರ್. ನಂದಿನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಮಾಯಸಂದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆ.ಎಸ್.ಸುನಿಲ್, ಉಪಾಧ್ಯಕ್ಷರಾಗಿ ಬಿ. ಆರ್. ನಂದಿನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಅಧ್ಯಕ್ಷರಾಗಿದ್ದ ಕೆ.ಎಂ.ಗಿಡ್ಡಯ್ಯ, ಉಪಾಧ್ಯಕ್ಷರಾಗಿದ್ದ ಎಸ್.ಕೆ. ಪದ್ಮಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದರಿಂದ ಎರಡೂ ಸ್ಥಾನಗಳು ತೆರವಾಗಿದ್ದವು. ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜೆ.ಎಸ್.ಸುನಿಲ್, ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಆರ್.ನಂದಿನಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಮಮತಾ ಅವಿರೋಧ ಆಯ್ಕೆ ಘೋಷಿಸಿದರು.ನೂತನ ಅಧ್ಯಕ್ಷ ಜೆ.ಎಸ್. ಸುನಿಲ್ ಮಾತನಾಡಿ, ನಮ್ಮ ಸಂಘದಲ್ಲಿ 5052 ಮಂದಿ ಷೇರುದಾರರು ಇದ್ದಾರೆ. ಇವರಿಂದ ಸುಮಾರು 1.08 ಕೋಟಿ ರು.ಗೂ ಅಧಿಕ ಹಣ ಸಂಗ್ರಹವಾಗಿದೆ. ಉಳಿತಾಯ ಖಾತೆಯಲ್ಲಿ 3760 ಮಂದಿ ಇದ್ದು ಇವರು 1.04 ಕೋಟಿ ರು. ಹಣ ಉಳಿತಾಯ ಮಾಡಿದ್ದಾರೆ. ಪಿಗ್ಮಿಯಲ್ಲಿ ಸುಮಾರು 79 ಲಕ್ಷ ರು.ದಷ್ಟು ಹಣ ಸಂಗ್ರಹವಾಗಿದೆ. 144 ಮಂದಿಗೆ ಚಿನ್ನದ ಸಾಲವಾಗಿ ಸುಮಾರು 35 ಲಕ್ಷ ರು. ನೀಡಲಾಗಿದೆ. ಪಿಗ್ಮಿ ಸಾಲವಾಗಿ 281 ಮಂದಿಗೆ 91 ಲಕ್ಷ ರು. ಸಾಲ ನೀಡಲಾಗಿದೆ. ಕೆಸಿಸಿ ಸಾಲವಾಗಿ ಸುಮಾರು 988 ಮಂದಿಗೆ ಸುಮಾರು 2.94 ಕೋಟಿ ರು. ನೀಡಲಾಗಿದೆ. 149 ಮಂದಿ 1.40 ಕೋಟಿ ರು. ಠೇವಣಿ ಇರಿಸಿದ್ದಾರೆ. ಒಟ್ಟಾರೆ ತಮ್ಮ ಸಂಘದ ಉತ್ತಮ ಸ್ಥಿತಿಯಲ್ಲಿದ್ದು ಸುಮಾರು 10 ಲಕ್ಷ ರು. ಲಾಭದಲ್ಲಿದೆ ಎಂದು ಅವರು ತಿಳಿಸಿದರು.ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸಂಘದ ನಿರ್ದೇಶಕರಾದ ಕೆ.ರಘು, ಎಂ.ಆರ್. ರಂಗನಾಥ್, ಡಿ.ಎಸ್. ಅಶೋಕ್ ಕುಮಾರ್, ಕೆ.ಆರ್.ಬಾಲರಾಜು, ಎಂ.ಎಲ್.ಲೋಕೇಶ್, ಎಂ.ಎಸ್.ಶಿವರಾಜು, ಎಸ್.ಕೆ.ಪದ್ಮಾ, ಕೆ.ಎಂ.ಗಿಡ್ಡಯ್ಯ, ಎಚ್.ವಿ.ಯೋಗೀಶ್, ಜೆ.ಆರ್.ವೆಂಕಟೇಶ್, ಕೆ.ಎಚ್.ಹರೀಶ್, ಸಿಡಿಓ ಆದಿನಾಥ ಕರ್ಣಾವಾಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್. ಆರ್.ಜಯರಾಮ್, ಗ್ರಾಮದ ಮುಖಂಡರಾದ ಜವರೇಗೌಡ, ಶಿವರಾಮಯ್ಯ, ಮಂಜಣ್ಣ, ಎಂ.ಎನ್.ಚಂದ್ರೇಗೌಡ, ಎಂ.ಕೆಂಪಯ್ಯ, ಕಾಳಂಜೀಹಳ್ಳಿ ಸೋಮಣ್ಣ, ಭೈತರಹೊಸಳ್ಳಿ ನಿತೀಶ್, ಅಮ್ಮಲದೇವನಹಳ್ಳಿ ತಿಮ್ಮೇಗೌಡ ಸೇರಿದಂತೆ ಹಲವಾರು ಗಣ್ಯರು ಅಭಿನಂದಿಸಿದರು.

-29 ಟಿವಿಕೆ1

-------------------ತುರುವೇಕೆರೆ ತಾಲೂಕು ಮಾಯಸಂದ್ರದ ಪಿಎಸಿಎಸ್ ನೂತನ ಅಧ್ಯಕ್ಷರಾಗಿ ಜೆ.ಎಸ್.ಸುನಿಲ್, ಉಪಾಧ್ಯಕ್ಷರಾಗಿ ಬಿ.ಆರ್. ನಂದಿನಿ ಅವಿರೋಧವಾಗಿ ಆಯ್ಕೆಯಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಡೆಯಾಜ್ಞೆ ಇದ್ದರೂ ಪೊಲೀಸರಿಂದ ಚಾರ್ಜ್‌ಶೀಟ್‌: ಹೈಕೋರ್ಟ್‌ ಗರಂ
ಪ್ರೀತಿಗೆ ಪೋಷಕರು ವಿರೋಧ: ಪ್ರೇಮಿಗಳಿಂದ ಆತ್ಮಹತ್ಯೆ ಯತ್ನ