ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ 60ನೇ ವರ್ಷದ ಸ್ವರ್ಣ ಗೌರಿ ಪ್ರತಿಷ್ಠಾಪನಾ ಕಾರ್ಯಕ್ರಮ ಶುಕ್ರವಾರ ಇಲ್ಲಿನ ಶ್ರೀರಾಮಮಂದಿರದಲ್ಲಿ ವಿವಿಧ ಪೂಜೆ ಹಾಗೂ ಧಾರ್ಮಿಕ ಕೈಂಕರ್ಯಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.ಶ್ರೀ ಗೌರಿ ಶ್ರೀ ಗಣೇಶೋತ್ಸವವದ ಅಂಗವಾಗಿ ಶ್ರೀಗೌರಿ ಗಣೇಶೋತ್ಸವ ಆಚರಣಾ ಸಮಿತಿಯ ಪದಾಧಿಕಾರಿಗಳು ದೇವಾಲಯವನ್ನು ವಿದ್ಯುತ್ ದೀಪ, ಕೆಸರಿ ತಳಿರುತೋರಣ ಹಾಗೂ ಬಣ್ಣ ಬಣ್ಣದ ಹೂಗಳಿಂದ ಸಿಂಗರಿಸಿದ್ದರು.
ಬೆಳಗ್ಗೆ 8.30ಕ್ಕೆ ಪಟ್ಟೆಮನೆ ಗೌರಮ್ಮನ ಬಾವಿಯಿಂದ ಗಂಗಾಜಲ ತರುವುದರೊಂದಿಗೆ ಧಾರ್ಮಿಕ ಪೂಜಾ ಕಾರ್ಯ ನೆರವೇರಿಸಲಾಯಿತು. ನಂತರ ಪುಷ್ಪಗಳಿಂದ ಅಲಂಕೃತವಾದ ಭವ್ಯ ಮಂಟಪದಲ್ಲಿ ಗೌರಮ್ಮನನ್ನು ಕುಳ್ಳಿರಿಸಿ ಭಕ್ತಾದಿಗಳು ಭಜನೆ ಮಾಡುತ್ತ ಪಟ್ಟಣದ ಮುಖ್ಯ ಬೀದಿಯಲ್ಲಿ ವಾಹನದ ಮೂಲಕ ಮೆರವಣಿಗೆಯಲ್ಲಿ ತಂದು ಶ್ರೀರಾಮ ಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ಪ್ರತಿಷ್ಠಾಪಿಸಲಾಯಿತು.ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಪೂಜಾ ವಿಧಿವಿಧಾನಗಳನ್ನು ಹಿರಿಯ ಅರ್ಚಕ ದರ್ಶನ್ ಭಟ್, ಮನೋಜ್ ಭಟ್ ನೆರವೇರಿಸಿದರು. ಸೆ.7ರಂದು ಶನಿವಾರ ಬೆಳಗ್ಗೆ 8.30ಕ್ಕೆ ಗಣಹೋಮದೊಂದಿಗೆ ಆರಂಭಗೊಂಡು 11 ಗಂಟೆಗೆ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.
ಶ್ರೀ ಗೌರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಎಸ್. ವಿಘ್ನೇಶ್, ಉಪಾಧ್ಯಕ್ಷರಾದ ಬಿ.ಕೆ. ಪ್ರಶಾಂತ್, ಎಂ. ಗಣೇಶ್, ಸುನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಎಚ್. ನಿಖಿಲ್, ಖಜಾಂಜಿ ಬಿ.ಡಿ. ಪದ್ಮನಾಭ, ಕಾರ್ಯದರ್ಶಿಗಳಾದ ಎಂ. ಪಾಂಡ್ಯನ್, ಹೃತೀಕ್, ನವೀನ್, ಸಹಕಾರ್ಯದರ್ಶಿ ಮಣಿ, ಪಿ.ಕೆ. ಸೂರ್ಯ, ಆರ್. ಪ್ರಶಾಂತ್, ಸಂಘಟನಾ ಕಾರ್ಯದರ್ಶಿ ಎಸ್. ರಾಜೇಶ್, ಬಿ.ಡಿ. ಅಶ್ವತ್, ಎಚ್.ಸಿ. ಯೋಗೇಶ್, ಮಧು, ಚೇತನ್, ಶಿವು, ಪುನೀತ್, ಗುಣಶೇಖರ್, ತ್ರಿಜಲ್ ಮಹೇಶ, ಸಮಿತಿ ಸದಸ್ಯರಾದ ಎಂ. ಮಹೇಂದ್ರ, ಎಸ್. ಶ್ರೀನಿವಾಸ್, ಎಚ್.ಎ. ಶಶಿ, ಆರ್. ವಿಶ್ವ, ಆರ್. ಪ್ರಜ್ವಲ್, ಎಚ್.ಎನ್. ಗಣೇಶ್, ವಿ. ಧರಣೇಶ್, ಜೀವ, ಸಿ. ರಾಜೇಶ್, ಎಚ್.ಎ. ಚಂದ್ರ, ಎಚ್.ಎ. ದಿವಾಕರ, ಎಚ್.ಸಿ. ದಿನೇಶ್, ಎಸ್. ಗಣೇಶ್, ಆರ್. ಧರ್ಮೇಂದ್ರ, ಸಿದ್ದು, ಕೆ. ಕಾರ್ತಿಕ್, ಪವನ್ ಮತ್ತಿತರರಿದ್ದರು.