ಸುಂಟಿಕೊಪ್ಪ: ಸಂತ ಅಂತೋಣಿ ದೇವಳದಲ್ಲಿ ಅಮಲೋದ್ಭವ ಮಾತೆಯ ಹಬ್ಬ

KannadaprabhaNewsNetwork |  
Published : Dec 10, 2024, 12:32 AM IST
ಚಿತ್ರ 1. ಭತ್ತದ ತೆನೆಗಳನ್ನು ದೇವಾಲಯದ ಧರ್ಮ ಗುರುಗಳಾದ ವಂ. ಫಾಧರ್ ವಿಜಯಕಮಾರ್ ಆರ್ಶಿವಚಿಸುತ್ತಿರುವುದು. | Kannada Prabha

ಸಾರಾಂಶ

ಯೇಸು ಕ್ರಿಸ್ತರ ತಾಯಿ ಮಾತೆ ಮರಿಯಮ್ಮನವರ ಜನ್ಮದಿನದ ಸ್ಮರಣೆಯ ಅಂಗವಾಗಿ ಸಂತ ಅಂತೋಣಿ ದೇವಾಲಯದಲ್ಲಿ ಅಮಲೋದ್ಭವ ಮಾತೆಯ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಯೇಸು ಕ್ರಿಸ್ತರ ತಾಯಿ ಮಾತೆ ಮರಿಯಮ್ಮನವರ ಜನ್ಮದಿನದ ಸ್ಮರಣೆಯ ಅಂಗವಾಗಿ ಸಂತ ಅಂತೋಣಿ ದೇವಾಲಯದಲ್ಲಿ ಅಮಲೋದ್ಭವ ಮಾತೆಯ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಈ ಸಂದರ್ಭ ಕ್ರೈಸ್ತ ಸಮುದಾಯದವರು ಭತ್ತದ ತೆನೆಯನ್ನು ಕೊಯ್ದು ದೇವಾಲಯಕ್ಕೆ ತರುವ ಮೂಲಕ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುವುದು ವಾಡಿಕೆ.ಮಂಜಿಕೆರೆಯ ಗದ್ದೆಯೊಂದರಿಂದ ಸಂತ ಅಂತೋಣಿ ದೇವಾಲಯದ ಧರ್ಮಗುರು ವಿಜಯ ಕುಮಾರ್ ಅವರೊಂದಿಗೆ ಸಂತ ಕ್ಲಾರ ಕನ್ಯಾಸ್ತ್ರೀಯರ ಮಠದ ಕನ್ಯಾಸ್ತ್ರೀಯರು ಹಾಗೂ ಕ್ರೈಸ್ತ ಬಾಂಧವರು ಪ್ರಾರ್ಥನೆ ಸಲ್ಲಿಸಿ ಭತ್ತದ ಪೈರನ್ನು ಕೊಯ್ದು ಮೆರವಣಿಗೆಯ ಮೂಲಕ ತರಲಾಯಿತು.ಧರ್ಮಗರುಗಳಾದ ವಿಜಯ ಕುಮಾರ್ ಹಾಗೂ ಮಡಿಕೇರಿ ವಲಯ ಶ್ರೇಷ್ಠ ಗುರು ಹಾಗೂ ಮಡಿಕೇರಿ ಸಂತ ಮೈಕಲರ ದೇವಾಲಯದ ಧರ್ಮಗುರು ದೀಪಕ್, ದಿವ್ಯ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆಯನ್ನು ನೇರವೇರಿಸಿದರು.ಅನಂತರ ಆಶೀರ್ವಚಿಸಿದ ಭತ್ತದ ತೆನೆಗಳನ್ನು ಕ್ರೈಸ್ತ ಬಾಂಧವರಿಗೆ ಧರ್ಮಗುರುಗಳು ವಿತರಿಸಿದರು. ಭಕ್ತರಿಗೆ ರಾತ್ರಿ ಭೋಜನವನ್ನು ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!