ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ
ಡಿ. 12 ಮತ್ತು 13ರಂದು ಹನುಮಮಾಲಾ ಕಾರ್ಯಕ್ರಮ ನಿರ್ವಹಣೆಗೆ ರಚಿಸಿರುವ ವಿವಿಧ ಸಮಿತಿಯ ಸದಸ್ಯರು ಪರಸ್ಪರ ಸಹಕಾರದಿಂದ ಕೆಲಸ ನಿರ್ವಹಣೆ ಮಾಡಬೇಕು. ಅಂದಾಗ ಮಾತ್ರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಪ್ರಭಾರಿ ಜಿಲ್ಲಾಧಿಕಾರಿ ರಾಹುಲ್ ರತ್ನಂ ಪಾಂಡೇಯ ಹೇಳಿದರು.
ಸೋಮವಾರ ವಿರುಪಾಪುರ ಗಡ್ಡಿಯಲ್ಲಿರುವ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಹನುಮಮಾಲಾ ಕಾರ್ಯಕ್ರಮದ ಅಂಗವಾಗಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಯಾವುದೇ ಸಮಸ್ಯೆಗಳಾದರೆ ತಕ್ಷಣ ಕಂಟ್ರೋಲ್ ರೂಮಿಗೆ ಕರೆ ಮಾಡಬೇಕು. ಪ್ರಮುಖ ಸ್ಥಳಗಳಲ್ಲಿ ಸಿಸಿಕ್ಯಾಮೆರಾ ಅಳವಡಿಸಬೇಕು. ಟ್ರಾಫಿಕ್ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಆರೋಗ್ಯ ಇಲಾಖೆಯ ವೈದ್ಯರು ಜನರಿಗೆ ಯಾವುದೇ ಸಮಸ್ಯೆಗಳಾದರೆ ತಕ್ಷಣ ಅವರಿಗೆ ಸೇವೆ ನೀಡಲು ಸನ್ನದ್ಧರಿರಬೇಕು. ಜನರಿಗೆ ಯಾವ-ಯಾವ ಸಮಸ್ಯೆಗಳಾಗಬಹುದು ಎಂಬುದನ್ನು ತಮ್ಮಲ್ಲಿ ಮುಂದಾಲೋಚನೆ ಸಹ ಇರಬೇಕು ಎಂದು ಹೇಳಿದರು.
ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಮಾತನಾಡಿ, ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಅವು ಮೂರು ಶಿಫ್ಟ್‌ನಲ್ಲಿ ಕಾರ್ಯನಿರ್ವಹಿಸಲು ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಪೆಂಡಾಲ್ ಕೆಲಸ ನಡೆಯುತ್ತಿದೆ. ಪಾರ್ಕಿಂಗ್ ಸ್ಥಳಗಳಲ್ಲಿ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ವೇದಪಾಠ ಶಾಲೆ ಹತ್ತಿರ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದಲೆ ಇತರೆ ಸ್ಥಳಗಳಿಗೆ ಪ್ರಸಾದ ಕಳಿಸಲಾಗುವುದು ಎಂದು ಹೇಳಿದರು.ಸಭೆಗೂ ಮುನ್ನ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೇಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಹಾಗೂ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸೇರಿದಂತೆ ಇತರೆ ಅಧಿಕಾರಿಗಳು ವೇದಪಾಠ ಶಾಲೆಯ ಆವರಣದಲ್ಲಿರುವ ಪ್ರಸಾದ ಕೋಣೆಗೆ ಭೇಟಿ ನೀಡಿ ಲಡ್ಡು ಪ್ರಸಾದದ ತಯಾರಿ ಪರಿಶೀಲನೆ, ಅಂಜನಾದ್ರಿ ಬೆಟ್ಟ. ಪಾರ್ಕಿಂಗ್ ವ್ಯವಸ್ಥೆ ಸ್ಥಳಗಳು ಮತ್ತು ಪಂಪಾ ಸರೋವರ ಸೇರಿದಂತೆ ಇತರೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪೂರ್ವಸಿದ್ಧತೆ ಪರಿಶೀಲನೆ ನಡೆಸಿದರು.
ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ಡಿ. 12 ಮತ್ತು 13 ರಂದು ನಡೆಯಲಿರುವ ಹನುಮಮಾಲಾ ವಿಸರ್ಜನಾ ಕಾರ್ಯಕ್ರಮಕ್ಕಾಗಿ ಭಕ್ತಾಧಿಗಳ ಅನುಕೂಲಕ್ಕಾಗಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾಧಿಗಳಿಗಾಗಿ ಶೌಚಾಲಯ ವ್ಯವಸ್ಥೆ, ಸ್ನಾನದ ವ್ಯವಸ್ಥೆ, ಪೆಂಡಾಲ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.ಸ್ನಾನದ ಸ್ಥಳ:ಭಕ್ತಾಧಿಗಳು ಸ್ನಾನಕ್ಕಾಗಿ ದೇವಸ್ಥಾನದ ಪಾರ್ಕಿಂಗ್ ಬಳಿ 50 ತಾತ್ಕಾಲಿಕ ಶವರ್, ಆನೆಗೊಂದಿ ಪಾರ್ಕಿಂಗ್-25, ದುರ್ಗಾದೇವಿ ಬೆಟ್ಟದ ಹತ್ತಿರ-20, ಪಂಪಾ ಸರೋವರ-25, ಹನುಮನಹಳ್ಳಿಯ ಹತ್ತಿರ-20 ಸೇರಿ ಒಟ್ಟು 140 ತಾತ್ಕಾಲಿಕ ಶವರ್‌ಗಳ ವ್ಯವಸ್ಥೆ ಮಾಡಲಾಗಿದೆ.
ಶೌಚಾಲಯ ವ್ಯವಸ್ಥೆ:ಈಗಾಗಲೇ ಇರುವ 13 ಶೌಚಾಲಯಗಳ ಜೊತೆಗೆ ಚಿಂತಾಮಣಿ, ದೇವಸ್ಥಾನದ ಪಾರ್ಕಿಂಗ್, ಆನೆಗೊಂದಿ ಪಾರ್ಕಿಂಗ್, ದುರ್ಗಾದೇವಿ ಬೆಟ್ಟದ ಹತ್ತಿರ, ಪಂಪಾ ಸರೋವರ, ಹನುಮನಹಳ್ಳಿಯ ಹತ್ತಿರ, ವೇದಪಾಠ ಶಾಲೆ ಹತ್ತಿರ 60 ತಾತ್ಕಾಲಿಕ ಶೌಚಾಲಯ ಸೇರಿ ಒಟ್ಟು 73 ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ.
ವಿವಿಧೆಡೆ ಕುಡಿಯುವ ನೀರಿನ ವ್ಯವಸ್ಥೆ: