ಸುಂಟಿಕೊಪ್ಪ ನಾಡು ಸಂಘ ವಾರ್ಷಿಕ ಮಹಾಸಭೆ

KannadaprabhaNewsNetwork |  
Published : Dec 23, 2024, 01:00 AM IST
ಮಹಾಸಭೆ | Kannada Prabha

ಸಾರಾಂಶ

ಸದಸ್ಯರು, ಸಂಘಕ್ಕೆ ಕಟ್ಟಡ ನಿರ್ಮಿಸುವ ದಿಸೆಯಲ್ಲಿ ಸಹಕರಿಸಬೇಕು. ಅದರೊಂದಿಗೆ ಸಂಘ ಏಳಿಗೆಗೊಳ್ಳಲಿದೆ ಎಂದು ಯಂಕನ ಉಲ್ಲಾಸ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸಂಘವು ಹೆಮ್ಮರವಾಗಿ ಬೆಳೆಯಬೇಕಾದರೆ ಸಂಘದ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆಯಬೇಕೆಂದರೆ ಸಂಘಕ್ಕೆ ಕಟ್ಟಡ ಮುಖ್ಯವಾಗಿದೆ. ಆದ್ದರಿಂದ ಸದಸ್ಯರು, ಸಂಘಕ್ಕೆ ಕಟ್ಟಡ ನಿರ್ಮಿಸುವ ದಿಸೆಯಲ್ಲಿ ಸಹಕರಿಸಬೇಕು. ಅದರೊಂದಿಗೆ ಸಂಘ ಏಳಿಗೆಗೊಳ್ಳಲಿದೆ ಎಂದು ಗೌಡ ಸಂಘ ಸುಂಟಿಕೊಪ್ಪ ನಾಡುಸಂಘದ ಅಧ್ಯಕ್ಷ ಯಂಕನ ಉಲ್ಲಾಸ್ ಹೇಳಿದರು.

ಗೌಡ ಸಂಘ ಸುಂಟಿಕೊಪ್ಪ ನಾಡು ಸಂಘದ 9ನೇ ವರ್ಷದ ವಾರ್ಷಿಕ ಮಹಾಸಭೆಯನ್ನು ಭಾನುವಾರ ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಯಂಕನ ಉಲ್ಲಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘದಲ್ಲಿ 800 ಕ್ಕೂ ಮಿಕ್ಕಿ ಮಂದಿ ಸದಸ್ಯತ್ವನ್ನು ಹೊಂದಿಕೊಂಡಿದ್ದಾರೆ. ಸಂಘದ ಪದಾಧಿಕಾರಿಗಳು ಕಳೆದ 8 ವರ್ಷಗಳಿಂದಲೂ ಸಮಾಜ ಕಟ್ಟಡ ನಿರ್ಮಿಸುವ ಇರಾದೆಯನ್ನು ಇರಿಸಿಕೊಂಡಿದ್ದಾರೆ. ಅದನ್ನು ಸಾಕಾರಗೊಳಿಸುವಲ್ಲಿ ಇಮ್ಮಡಿಗೊಳ್ಳುತ್ತಿದ್ದು, ಸಂಘದ ಸದಸ್ಯರು ಮತ್ತುಷ್ಟು ಸಹಕಾರವನ್ನು ನೀಡಿದಲ್ಲಿ ಮುಂದಿನ ದಿನಗಳಲ್ಲಿ ಕಟ್ಟಡಕ್ಕೆ ಭೂ ಖರೀದಿಗೊಳಿಸುವ ಮೂಲಕ ಅಲ್ಲಿಯೇ ಉತ್ತಮ ಕಾರ್ಯಕ್ರಮಗಳನ್ನು ನಿಯೋಜಿಸಲಾಗುವುದು ಎಂದು ಹೇಳಿದರು.

ಸಂಘದ ನೂತನ ಅಧ್ಯಕ್ಷ ಕುಂಜಿಲನ ಎಸ್. ಮಂಜುನಾಥ್ ಮಾತನಾಡಿ, ಸಂಘವು ಯಾವುದೇ ಸಂಘದ ವಿರೋಧಿಯಲ್ಲ. ನಮ್ಮ ಜನಾಂಗದ ಬೆಳವಣಿಗೆಯೊಂದಿಗೆ ಆಚಾರ, ವಿಚಾರ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಸಂಘವನ್ನು ಸ್ಥಾಪಿಸಲಾಗಿದ್ದು, ಜನಾಂಗ ಬಾಂಧವರ ಹಬ್ಬಗಳಾದ ಕೈಲ್‌ ಮುಹೂರ್ತ ಹಾಗೂ ಹುತ್ತರಿ ಹಬ್ಬಗಳನ್ನು ಒಂದು ವೇದಿಕೆಯಡಿಯಲ್ಲಿ ಆಚರಿಸಬೇಕೆಂಬ ಇರಾದೆಯನ್ನು ಹಿಂದಿನಿಂದಲೂ ಆಡಳಿತ ಮಂಡಳಿಯಲ್ಲಿದ್ದು, ಸುಂಟಿಕೊಪ್ಪ ಪಟ್ಟಣ ವ್ಯಾಪ್ತಿಯಲ್ಲಿ ಸಂಘವು ಭೂ ಖರೀದಿಸುವ ನಮ್ಮ ಸಂಘದ ಕಾರ್ಯಕ್ರಮಗಳನ್ನು ರೂಪಿಸಲು ಮುಂದಾಗಲಿದೆ. ಸಂಘವನ್ನು ಮತ್ತಷ್ಟು ಬಲಿಷ್ಠವಾಗಿ ಬೆಳೆಸಲು ಸರ್ವ ಸದಸ್ಯರು, ಸಲಹೆ ಮತ್ತು ಸಹಕಾರಗಳನ್ನು ನೀಡುವ ಮೂಲಕ ಸಂಘವು ಬಲಿಷ್ಠ ಸಂಘವನ್ನಾಗಿ ರೂಪುಗೊಳಿಸೋಣ ಎಂದು ತಿಳಿಸಿದರು.

ಕಾರ್ಯದರ್ಶಿ ಯಂಕನ ಕೌಶಿಕ್ ವರದಿ ವಾಚಿಸಿದರು. ವಾರ್ಷಿಕ ಮಹಾಸಭೆಯ ಮೊದಲಿಗೆ ಸಂಘದ ಅಧ್ಯಕ್ಷರಾದ ಯಂಕನ ಉಲ್ಲಾಸ್ ಉದ್ಘಾಟಿಸಿದರು.

2023-24ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ ಸದಸ್ಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸದಸ್ಯರನ್ನು ಗುರುತಿಸಿ ಅಭಿನಂದಿಸಲಾಯಿತು. ಇದೇ ಸಂಘದ ಆಡಳಿತ ಮಂಡಳಿಗೆ ನೂತನ ನಿರ್ದೇಶಕರನ್ನು ನೇಮಕಗೊಳಿಸಲಾಯಿತು.

ಸಮಾರಂಭ ಮೊದಲಿಗೆ ಯಂಕನ ಪ್ರಿಯಂಕ ಕೌಶಿಕ್ ಪ್ರಾರ್ಥಿಸಿ, ಬಿಳಿಯಾರ ಜವಾಹರ್ (ಮಂಜು) ಸ್ವಾಗತಿಸಿದರು. ಬಿಳಿಯಾರ ಜಯಶೀಲ ನಿರೂಪಿಸಿ, ಕಡ್ಲೇರ ರತಿ ರಘು ವಂದಿಸಿದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌