ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಗ್ರಾಪಂ ಮಾಜಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಇಡೀ ವಿಶ್ವವೇ ಮೆಚ್ಚಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ದೇಶದ ಹಿರಿಯ ಕಾಂಗ್ರೆಸ್ ನಾಯಕ ಭಯೋತ್ಪಾದಕ ಎಂದು ಬಿಂಬಿಸಿರುವುದು ದೇಶದ ಜನತೆಯೇ ತಲೆತಗ್ಗಿಸುವಂತಾಗಿದೆ. ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಿಗೆ ವಿರುದ್ಧವಾಗಿ ಮತ ಚಲಾಯಿಸಿರುವುದು ಮಹಿಳೆಯರಿಗೆ ಮಾಡಿದ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದೊಂದು ದಿನ ಮಹಿಳಾ ಮೀಸಲಾತಿಗೆ ಪ್ರಬಲವಾದ ಫಲಿತಾಂಶ ಹೊರಬರಲಿದೆ ಹಾಗೂ ನರೇಂದ್ರ ಮೋದಿ ಹಾಗೂ ದೇಶದ ಜನರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕ್ಷಮೆ ಯಾಚಿಸಬೇಕು ಎಂದು ಸುನಿಲ್ ಕುಮಾರ್ ಹೇಳಿದರು.ಮೊದಲಿಗೆ ಬಿಜೆಪಿ ಮುಖಂಡರ ಪರವಾಗಿ ಘೋಷಣೆ ಕೂಗಿದರಲ್ಲದೆ ಕಾಂಗ್ರೆಸ್ ಪಕ್ಷ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ನಗರಾಧ್ಯಕ್ಷ ಎಂ.ಟಿ. ಧನುಕಾವೇರಪ್ಪ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬಿ.ಕೆ. ಪ್ರಶಾಂತ್, ಯುವ ಮೋರ್ಚಾ ಆಧ್ಯಕ್ಷ ವಿಘ್ನೇಶ್, ಕಾರ್‍ಯದರ್ಶಿ ನಿಖಿಲ್, ಮುಖಂಡರಾದ ವಾಸುದೇವ, ಪುನೀತ್, ಓಡಿಯಪ್ಪನ ಸುದೀಶ್, ಬೂತ್ ಆದ್ಯಕ್ಷ ಪಾಂಡ್ಯನ್, ಆಕಾಶ್, ಲೀಲಾ ಮೇದಪ್ಪ, ತ್ರಿಶಾಲ್, ಕಾರ್‍ಯಕರ್ತರು ಇದ್ದರು.