ಸುಂಟಿಕೊಪ್ಪ ಪಟ್ಟಣದಲ್ಲಿ ಸ್ಥಾಪಿತಗೊಂಡಿರುವ ಮಲ ತ್ಯಾಜ್ಯ ನಿರ್ವಹಣ ಘಟಕಕ್ಕೆ 2 ತಾಲೂಕು ಹೊರತುಪಡಿಸಿ ಜಿಲ್ಲೆಯ ವಿವಿಧ ಊರುಗಳಿಂದ ಹಾಗೂ ಹೊರ ಜಿಲ್ಲೆಗಳಿಂದ ದಿನವೊಂದಕ್ಕೆ ಹತ್ತಾರು ಮಲ ತ್ಯಾಜ್ಯ ವಾಹನಗಳಲ್ಲಿ ತಂದು ವಿಲೇವಾರಿ ಮಾಡುತ್ತಿದ್ದು, ಲೆಕ್ಕ ಪತ್ರದಲ್ಲಿ ಅವ್ಯವಹಾರ ನಡೆದಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ಹಾಗೂ ವೇವ್ ಸಂಸ್ಥೆಯ ಪದಾಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಸುಂಟಿಕೊಪ್ಪ : ಸುಂಟಿಕೊಪ್ಪ ಪಟ್ಟಣದಲ್ಲಿ ಸ್ಥಾಪಿತಗೊಂಡಿರುವ ಮಲ ತ್ಯಾಜ್ಯ ನಿರ್ವಹಣ ಘಟಕಕ್ಕೆ 2 ತಾಲೂಕು ಹೊರತುಪಡಿಸಿ ಜಿಲ್ಲೆಯ ವಿವಿಧ ಊರುಗಳಿಂದ ಹಾಗೂ ಹೊರ ಜಿಲ್ಲೆಗಳಿಂದ ದಿನವೊಂದಕ್ಕೆ ಹತ್ತಾರು ಮಲ ತ್ಯಾಜ್ಯ ವಾಹನಗಳಲ್ಲಿ ತಂದು ವಿಲೇವಾರಿ ಮಾಡುತ್ತಿದ್ದು, ಲೆಕ್ಕ ಪತ್ರದಲ್ಲಿ ಅವ್ಯವಹಾರ ನಡೆದಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ಹಾಗೂ ವೇವ್ ಸಂಸ್ಥೆಯ ಪದಾಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ಸೇರಿದ ಕಸ ವಿಲೇವಾರಿ ಘಟಕದಲ್ಲಿ ಅಂದಾಜು ಸುಮಾರು ರು. 75 ಲಕ್ಷ ವೆಚ್ಚದಲ್ಲಿ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕುಗಳಿಗೆ ಸೇರಿದ ಗ್ರಾಮಗಳಿಗೆ ಸಂಬಂಧಿಸಿದ ಮಲ ತ್ಯಾಜ್ಯ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿಗೊಳಿಸುವ ಘಟಕ ಸ್ಥಾಪಿಸಲಾಗಿದೆ. ಆದರೆ ಒಂದು ತಿಂಗಳಿನಿಂದ ಹಗಲು ರಾತ್ರಿಯೆನ್ನದೆ 5-6 ಮಲ ತ್ಯಾಜ್ಯವನ್ನು ಸಂಗ್ರಹಿಸುವ ವಾಹನಗಳಲ್ಲಿ ತುಂಬಿಕೊಂಡು ಮಲ ತ್ಯಾಜ್ಯ ಘಟಕದಲ್ಲಿ ಸುರಿಯಲಾಗುತ್ತಿದೆ . ಈ ಘಟಕವು ಅಕ್ರಮ ಮತ್ತು ಅವೈಜ್ಞಾನಿಕ ಕೇಂದ್ರವಾಗಿದೆ ಸರಿಯಾದ ನಿರ್ವಹಣೆ ಸುತ್ತ ಮುತ್ತಲಿನ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುತ್ತಿದೆ. ಪರಿಸರಕ್ಕೂ ಹಾನಿಯುಂಟಾಗುತ್ತಿದೆ ಎಂದು ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಕಸ ವಿಲೇವಾರಿ ಜಾಗದಲ್ಲಿ ಬೀದಿ ನಾಯಿಗಳ ಹಾವಳಿ ಎಲ್ಲೇ ಮೀರಿದ್ದು ಇದರಿಂದ ಇಲ್ಲಿನ ನಿವಾಸಿಗಳು ವಿಶೇಷಚೇತನ ಶಾಲಾ ಮಕ್ಕಳ ಆರೋಗ್ಯಕ್ಕೂ ಕಂಟಕ ಪ್ರಾಯವಾಗಲಿದೆ ಎಂದು ಮಾಜಿ ಸದಸ್ಯರು ದೂರಿದರು. ಪಂಚಾಯಿತಿ ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿದ್ದ ಮಲ ತ್ಯಾಜ್ಯ ಘಟಕದ ನಿರ್ವಹಣೆಗೆ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿಗೆ ಸೀಮಿತಕ್ಕೆ ಹಿಂದಿನ ಆಡಳಿತ ಮಂಡಳಿ ನಿರ್ಣಾಯಿಸಲಾಗಿದ್ದರು, ಇದೀಗ ತಾಲೂಕಿನ ಕಾರ್ಯನಿವಹಣಾಧಿಕಾರಿಗಳು ಏಕಪಕ್ಷೀಯ ನಿರ್ಧಾರದಿಂದ ಮಲ ತ್ಯಾಜ್ಯ ಘಟಕವು ನಿರ್ವಹಣೆ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಇದರ ಗುತ್ತಿಗೆ ಅವ್ಯವಹಾರ ನಡೆದಿರುವ ಬಗ್ಗೆ ಶಂಕೆಯನ್ನು ಮಾಜಿ ಸದಸ್ಯರು ವ್ಯಕ್ತಪಡಿಸಿದರು.
ಇದಕ್ಕೆ ಪ್ರತ್ರಿಕ್ರಿಯಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಮಾತನಾಡಿ, ಒಂದು ತಿಂಗಳಲ್ಲಿ ಸರಿ ಸುಮಾರು 75 ಕ್ಕೂ ಮಿಕ್ಕಿ ಲಾರಿಗಳಲ್ಲಿ ಮಲ ವಿಲೇವಾರಿಗೊಳಿಸಲಾಗಿದ್ದು, ತಾಲೂಕು ನಿರ್ವಹಣಾಧಿಕಾರಿಗಳ ನಿಗದಿಗೊಳಿಸಿರುವ ಬಾಪ್ತು ಗುತ್ತಿಗೆದಾರ ಜಮಾಗೊಳಿಸಿದ್ದಾನೆ ಎಂದು ಸಮಜಾಯಿಷಿ ನೀಡಿದರು.
ಇದಕ್ಕೆ ಅತೃಪ್ತರಾದ ಮಾಜಿ ಸದಸ್ಯರು ಪ್ರಸಾದ್ ಕುಟ್ಟಪ್ಪ, ಆಲಿಕುಟ್ಟಿ, ರಫೀಕ್ಖಾನ್, ಶಬೀರ್, ಹಾಗೂ ವೇವ್ ಸಂಘಟನೆಯ ಸಂಚಾಲಕ ಲತೀಫ್, ಪರಾಝ್ ಉಸ್ಮಾನ್, ರಶೀದ್, ಇಬ್ರಾಹಿಂ ಮತ್ತಿತರರು ಒಂದು ವಾರದೊಳಗೆ ಈ ಘಟಕದ ಸರಿಯಾದ ನಿರ್ವಹಣೆಗೆ ಕ್ರಮ ಕೈಗೊಳ್ಳದಿದ್ದಲ್ಲಿ ಮತ್ತು ದಿನವೊಂದಕ್ಕೆ ಹತ್ತಾರು ಬಾರೀ ವಾಹನಗಳು ಸಂಚರಿಸುವ ಸಂಖ್ಯೆಯ ಬಗ್ಗೆ ಸಂಶಯವಿದ್ದು, ಸರಿಯಾದ ಲೆಕ್ಕವನ್ನು ವಂಚಿಸುತ್ತಿರುವ ಸಂಶಯ ವ್ಯಕ್ತಪಡಿಸಿ, ಸಮಸ್ಯೆಗಳನ್ನು ಪರಿಹರಿಸದಿದ್ದಲ್ಲಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.