ರಾಯರೆಡ್ಡಿ ಮೇಲೆ ಸುಮೋಟೋ ಕೇಸ್ ಹಾಕಬೇಕು: ಕೆ.ಎಸ್‌.ಈಶ್ವರಪ್ಪ

KannadaprabhaNewsNetwork |  
Published : Sep 01, 2026, 02:00 AM IST
ಕೆ.ಎಸ್‌.ಈಶ್ವರಪ್ಪ | Kannada Prabha

ಸಾರಾಂಶ

ಈ ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಅವರು ಹಜ್ ಯಾತ್ರೆಗೆ ಹೋಗೋ ಆಸೆಯಿತ್ತು. ಆದ್ರೇ ಅವಕಾಶವಿಲ್ಲ ಅಂತಾರೆ. ಯಾಕೇ ಮುಂಜಿ ಮಾಡಿಕೊಂಡಿಲ್ಲ ಅಂದರೇ ಅಲ್ಲಿ ಸೇರಿಸಲ್ವಾ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದರು.

ಶಿವಮೊಗ್ಗ: ಈ ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಅವರು ಹಜ್ ಯಾತ್ರೆಗೆ ಹೋಗೋ ಆಸೆಯಿತ್ತು. ಆದ್ರೇ ಅವಕಾಶವಿಲ್ಲ ಅಂತಾರೆ. ಯಾಕೇ ಮುಂಜಿ ಮಾಡಿಕೊಂಡಿಲ್ಲ ಅಂದರೇ ಅಲ್ಲಿ ಸೇರಿಸಲ್ವಾ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಧರ್ಮಕ್ಕಿಂತ ಇಸ್ಲಾಂ ಧರ್ಮ ಶ್ರೇಷ್ಠ ಎಂದು ಸಚಿವ ಬಸವರಾಜ್ ರಾಯರೆಡ್ಡಿ ಹೇಳ್ತಾರೆ. ಅವರು ಹೊಟ್ಟೆಗೆ ಏನು ತಿನ್ನುತ್ತಾನೋ ಗೊತ್ತಿಲ್ಲ, ಅದನ್ನು ಹೇಳಬೇಕಿತ್ತು.. ಹೊಟ್ಟೆಗೆ ಎನು ತಿಂತಾರೇ ಹೇಳಿದ್ದರೆ ಅದಕ್ಕೆ ಹೀಗೆ ಮಾತಾಡ್ತಿನಿ ಅಂತಾ ಹೇಳಬಹುದಿತ್ತು. ಅವರು ಮಠಕ್ಕೆ ಹೋಗಲಿ ಅಂತಾ ಯಾವನ್ ಕೇಳಿದ್ದು, ನಿಮ್ಮ ಮನೆಯಲ್ಲಿ ಆ ಬುದ್ಧಿ ಕಲಿಸದಿದ್ರೆ ನಾವೇನು ಮಾಡೋಣ ಎಂದು ಹರಿಹಾಯ್ದರು.

ಬಸವರಾಜ್ ರಾಯರೆಡ್ಡಿ ನಿನ್ನೆ ಹೀಗೆ ಹೇಳಿ ಇವತ್ತು ದೇವಸ್ಥಾನಕ್ಕೆ ಹೋಗಿದ್ದಾರಂತೆ. ರಾತ್ರಿ ಕನಸಲ್ಲಿ ಆಂಜನೇಯ ಬಂದು ಜಾಡಿಸಿ ಒದೀತೀನಿ ಮಗನೇ ಅಂತಾ ಹೇಳಿರಬೇಕು, ಅದಕ್ಕೆ ದೇವಾಲಯಕ್ಕೆ ಹೋಗಿದ್ದಾರೆ ಅನ್ಸುತ್ತೇ ಎಂದು ಛೇಡಿಸಿದ ಅವರು, ಇನ್ನೊಂದು ಧರ್ಮದವರಿಗೆ ನೋವಾಗುವ ಹೇಳಿಕೆಯನ್ನು ಯಾವ ಮಂತ್ರಿಯೂ ನೀಡಬಾರದು. ಇಸ್ಲಾಂ ಧರ್ಮದ ಬಗ್ಗೆ ತಪ್ಪು ಕಲ್ಪನೆಯಿದೆ. ಅಧ್ಯಯನವಾಗವೇಕು ಅಂತಾರೇ. ಹಿಂದೂ ಧರ್ಮದ ಬಗ್ಗೆ ಇವರಿಗೇನು ಗೊತ್ತು. ಸಾವಿರಾರು ವರ್ಷಗಳ ಸನಾತನ ಧರ್ಮದ ಬಗ್ಗೆ ಟೀಕೆ ಮಾಡೋ ಅಧಿಕಾರ ಕೊಟ್ಟೋರು ಯಾರು‌? ಈ ಕೂಡಲೇ ರಾಯರೆಡ್ಡಿ ಮೇಲೆ ಸುಮೋಟೋ ಕೇಸ್ ಹಾಕಬೇಕು ಎಂದು ನಾನು ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಒತ್ತಾಯ ಮಾಡುತ್ತೇನೆ ಎಂದರು.

ಧರ್ಮಾಂಧರು, ಹಿಂದೂ ಧರ್ಮ ವಿರೋಧಿಗಳು, ನಾವು ಮುಸ್ಲಿಂ ಧರ್ಮಕ್ಕೆ ಸೇರಿದ್ದೇವೆ ಅನ್ನೊ ಭಾವನೆಯಲಿರುವ ಅನೇಕರು ಡಿ.ಕೆ.ಶಿವಕುಮಾರ್‌ ಕ್ಯಾಬಿನೆಟ್‌ ಸೇರಿಕೊಂಡಿದ್ದಾರೆ. ಇವೆಲ್ಲರೆಲ್ಲ ನಾವು ಪ್ರಬುದ್ಧರು, ವಿದ್ವಾಂಸರು ಅನ್ನೋ ಭ್ರಮೆಯಲ್ಲಿದ್ದಾರೆ. ಅಂತವರು ಸಮಾಜದಲ್ಲಿ ಧರ್ಮಗಳ ನಡುವೆ ಸಂಘರ್ಷ ತರೋ ಹೇಳಿಕೆ ಕೊಡ್ತಿದ್ದಾರೆ. ನೇರವಾಗಿ ಹಿಂದೂ ಧರ್ಮದ ಅನುಯಾಯಿಗಳಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಈ ಹಿಂದೆ ಮಹಾಪುರುಷ ಸಿದ್ದರಾಮಯ್ಯರ ಮಗ ಯತೀಂದ್ರ ಹಿಂದೂ ರಾಷ್ಟ್ರವಾಗಲು ಬಿಡಲ್ಲ ಎಂದಿದ್ದರು. ಮತ್ತೇನು ಮುಸ್ಲಿಂ ರಾಷ್ಟ್ರ ಮಾಡ್ತೀರಾ? ಈಗ ರಾಯರೆಡ್ಡಿ ಎಲ್ಲಾ ಧರ್ಮಕ್ಕಿಂತ ಮುಸ್ಲಿಂ ಧರ್ಮ ಶ್ರೇಷ್ಠ ಎಂದು ಹೇಳಿಕೆ ನೀಡಿದ್ದಾರೆ.

ರಾಯರೆಡ್ಡಿಯವರೇ ಮುಂಜಿ ಮಾಡಿಸಿಕೊಂಡು ಬಿಡಿ ಎಂದ ಅವರು, ಧರ್ಮ ಟೀಕೆ ಮಾಡಿದರೆ ಹಿಂದೂ ಯುವಕರು ಏನು ಬೇಕಾದರೂ ಕ್ರಮ ತೆಗೆದಕೊಳ್ಳಬಹುದು ಎಂದು ಎಚ್ಚರಿಕೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

KPSC ನೇಮಕಾತಿ ಅಕ್ರಮ: ಬೀದರ್‌ನಲ್ಲೇ ಬೇರು
ಅಫಜಲಪುರ ಆಸ್ಪತ್ರೆಗೆ ಕೆಕೆಆರ್‌ಟಿಸಿ ಅಧ್ಯಕ್ಷ ಭೇಟಿ