)
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ಕೇಂದ್ರ ಬಜೆಟ್ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ಪಾದನೆ ಹೆಚ್ಚಳ, ಜನರ ಆಶೋತ್ತರಗಳ ಈಡೇರಿಕೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಈ ಮೂರು ಅಂಶ ಆಧಾರವಾಗಿಟ್ಟು, ಬಜೆಟ್ ಮೂಡಿಬಂದಿದೆ. ಎಲ್ಲಾ ಕ್ಷೇತ್ರಕ್ಕೂ ಬಜೆಟ್‌ನಲ್ಲಿ ಆದ್ಯತೆ ನೀಡಿದ್ದಾರೆ. ಕೈಗಾರಿಕೆ, ಪ್ರವಾಸೋದ್ಯಮ, ಐಟಿಬಿಟಿ, ಕೃಷಿ ಎಲ್ಲದಕ್ಕೂ ಆದ್ಯತೆ ಸಿಕ್ಕಿದೆ ಎಂದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 9ನೇ ಬಜೆಟ್ ಮಂಡಿಸಿದ್ದಾರೆ. ಕರ್ತವ್ಯ ಭವನದಲ್ಲಿ ಈ ಬಜೆಟ್ ತಯಾರಾಗಿದ್ದು. ನಿರ್ಮಲಾ ಸೀತಾರಾಮನ್ ನಮ್ಮವರು. ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿದ್ದಾರೆ. ಅವರು 9ನೇ ಬಾರಿ ದಾಖಲೆಯ ಬಜೆಟ್ ಮಂಡಿಸಿದ್ದಾರೆ. ಕ್ರೀಡಾ ಕ್ಷೇತ್ರ, ನಾರಿ ಶಕ್ತಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಯಾವುದೇ ಹೊಸ ತೆರಿಗೆಯನ್ನ ಹೇರಿಲ್ಲ. ಸರ್ವಸ್ಪರ್ಷಿ, ಸರ್ವವ್ಯಾಪಿ ಬಜೆಟ್ ಇದು. ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ. ಆರ್ಥಿಕ ಸದೃಢತೆ, ವಿಶ್ವಗುರುವಾಗಲು ಪೂರಕ ಬಜೆಟ್ ಮಂಡಿಸಿದ್ದಾರೆ ಎಂದು ತಿಳಿಸಿದರು.ರೈತರು, ಮಹಿಳೆಯರು, ಬಡವರು ಎಲ್ಲರೂ ಸ್ವಾಗತ ಮಾಡುತ್ತಾರೆ. ನಾವು ಎಲ್ಲರೂ ಕೂಡ ಸ್ವಾಗತ ಮಾಡ್ತೇವೆ
ಕೇಂದ್ರದಿಂದ ಅನ್ಯಾಯ ಆಗಿದೆಯೋ..? ಇಲ್ವೊ ನಾಳೆ ಮಾತಾಡುತ್ತೇನೆ. ಟೀಕೆ ಮಾಡೋದೇ ಕಾಂಗ್ರೆಸ್ ಕೆಲಸ. ಜಾಗತಿಕ ಸಂಕಷ್ಟದ ಕಾಲಘಟ್ಟದಲ್ಲಿ ನಾವೀದ್ದೇವೆ. ಅದರೂ, ದೇಶ ಅಭಿವೃದ್ಧಿ ಪಥದಲ್ಲೂ ಸಾಗಲು ಕೆಲಸವಾಗುತ್ತದೆ. ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಿದ್ದಾರೆ ಎಂದರು.ವಿರೋಧ ಪಕ್ಷ ಕಾಂಗ್ರೆಸ್ ಟೀಕೆ ಮಾಡೋದು ಸಹಜ. ಭಾರತ ನಾಲ್ಕನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಮುನ್ನಡೆಯುತ್ತಿದೆ. ಮೋದಿ ನೇತೃತ್ವದ ಸರ್ಕಾರ ಟ್ಯಾಕ್ಸ್ ಸ್ಲಾಬ್ ಗಳನ್ನು ಕಡಿಮೆ ಮಾಡಿ, ಸುಧಾರಣೆ ಮಾಡಿದೆ. ಸರ್ಕಾರ ಎಲ್ಲಾ ಉದ್ಯಮಿಗಳ ಸಲಹೆ ಗಮನಿಸುತ್ತಾರೆ ಎಂದರು.
ಎಸ್‌ಐಟಿ ಎಂದರೆ ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್: ಕಾನ್ಫಿಡೆಂಟ್ ಉದ್ಯಮಿ ಸಿ.ಜೆ. ರಾಯ್ ಅವರು ತೆರಿಗೆ ಅಧಿಕಾರಿಗಳು ದಾಳಿ ಮಾಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬಹಳ ದುಖಃದ ಸಂಗತಿ. ರಾಯ್ ಅವರ ಕುಟುಂಬಕ್ಕೆ ಧೈರ್ಯ ತಗೆದುಕೊಳ್ಳುವ ಶಕ್ತಿ ಭಗವಂತ ನೀಡಿಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಕೆಲ ಮಂತ್ರಿಗಳ ಹೇಳಿಕೆ ಗಮನಿಸಿದ್ದೇನೆ. ಅವರ ಹೇಳಿಕೆ ಕೇಳುತ್ತಿದ್ದರೆ ಎಲ್ಲೋ ಒಂದು ಕಡೆ ಗುಮಾನಿ ಬರುತ್ತಿದೆ.
ಸಿಜೆ ರಾಯ್ ಅವರ ಅಂತ್ಯಕ್ರಿಯೆಯನ್ನ ಆ ಕುಟುಂಬ ಇನ್ನೂ ನೆರವೇರಿಸಿಲ್ಲ. ಇದರ ನಡುವೆಯೇ ರಾಜ್ಯ ಸರ್ಕಾರ ಆತುರಾತುರವಾಗಿ ಎಸ್ಐಟಿ ರಚನೆ ಮಾಡಿದೆ. ರಾಜ್ಯ ಸರ್ಕಾರ ತರಾತುರಿಯಲ್ಲಿ ಎಸ್.ಐ.ಟಿ. ರಚನೆ ಮಾಡಿರುವುದೇ ಗುಮಾನಿಗೆ ಕಾರಣವಾಗಿದೆ.ಡಿ.ಕೆ. ಶಿವಕುಮಾರ್ ಮುಖದಲ್ಲಿ ಬಹಳ ಗೊಂದಲ-ನೋವು ಸಹ ನಾನು ಗಮನಿಸಿದೆ. ಎಸ್.ಐ.ಟಿ. ಅಂದರೆ ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್ ಅಲ್ಲ. ಇದು ಸಿದ್ಧರಾಮಯ್ಯ ಇನ್ವೆಸ್ಟಿಗೇಷನ್ ಟೀಮ್. ಸಿದ್ದರಾಮಯ್ಯರ ವಾಚ್ ಪ್ರಕರಣ ಬಂದಾಗ ಎಸ್ಐಟಿ ರಚನೆ ಆಗುತ್ತೆ. ತಮ್ಮವರನ್ನ ಕಾಪಾಡಿಕೊಳ್ಳಬೇಕು ಅಂದಾಗ ಎಸ್ಐಟಿ ರಚನೆ ಮಾಡುತ್ತಾರೆ. ಇಲ್ಲ ವಿರೋಧ ಪಕ್ಷದವರನ್ನ ಬಗ್ಗು ಬಡಿಯಬೇಕು ಅಂದಾಗ ಎಸ್ಐಟಿ ರಚನೆ ಮಾಡುತ್ತಾರೆ. ಇಂತಹ ಅನೇಕ ಉದಾಹರಣೆಗಳನ್ನ ನಾವು ನೋಡುತ್ತಿದ್ದೇವೆ ಎಂದು ಹರಿಹಾಯ್ದರು.
ಈ ಹಿಂದೆ ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಪ್ರಕರಣದಲ್ಲಿ ಅನೇಕ ಜನ ಸಾವನ್ನಪ್ಪಿದ್ದರು. ಈ ಸಮಯದಲ್ಲಿ ಸಹ ಏಕಾಏಕಿ ಎಸ್ಐಟಿ ರಚನೆ ಮಾಡಿದ್ದರು. ವಾಲ್ಮೀಕಿ ನಿಗಮದಲ್ಲಿ ಹಗರಣ ಆದಾಗ ರಾತ್ರೋರಾತ್ರಿ ಎಸ್ಐಟಿ ರಚನೆ ಮಾಡಿದ್ದರು. ಯಾಕೆ ಅಂದ್ರೆ ಇವರಿಗೆ ಭಯ ಕಾಡ್ತಾ ಇತ್ತು . ಹಾಗಾಗಿ ಸಿಬಿಐ ಬಂದು ಬಿಡುತ್ತೆ ಅಂತ ರಾತ್ರೋ ರಾತ್ರಿ ಎಸ್ಐಟಿ ರಚನೆ ಮಾಡಿದ್ದರು. ಈ ಸಂದರ್ಭದಲ್ಲಿ ನಮ್ಮ ಶಿವಮೊಗ್ಗದ ಚಂದ್ರಶೇಖರ್ ಆತ್ಮಹತ್ಯೆ ಮಾಡ್ಕೊಂಡ್ರು. ರಾಜ್ಯ ಸರ್ಕಾರ ಆತುರಾತುರವಾಗಿ ಎಸ್ಐಟಿ ರಚನೆ ಮಾಡಲು ಕಾರಣ ಏನು ಹಾಗಾಗಿ ಗುಮಾನಿ ಕಾಡ್ತಾ ಇದೆ ಎಂದು ಆಪಾದಿಸಿದರು.