ಮಹಿಳಾ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮ: ಲಕ್ಷ್ಮಿ ವಿಶ್ವನಾಥ್

KannadaprabhaNewsNetwork |  
Published : Apr 05, 2026, 01:15 AM IST
ಕನಕಶ್ರೀ ಮಹಿಳಾ ಸಮಾಜದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ | Kannada Prabha

ಸಾರಾಂಶ

ತರೀಕೆರೆಮಹಿಳೆಯರ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕನಕಶ್ರೀ ಮಹಿಳಾ ಸಮಾಜ ಅಧ್ಯಕ್ಷೆ ಲಕ್ಷ್ಮಿ ವಿಶ್ವನಾಥ್ ಹೇಳಿದ್ದಾರೆ.

- ಕನಕಶ್ರೀ ಮಹಿಳಾ ಸಮಾಜದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಮಹಿಳೆಯರ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕನಕಶ್ರೀ ಮಹಿಳಾ ಸಮಾಜ ಅಧ್ಯಕ್ಷೆ ಲಕ್ಷ್ಮಿ ವಿಶ್ವನಾಥ್ ಹೇಳಿದ್ದಾರೆ.ಕನಕಶ್ರೀ ಮಹಿಳಾ ಸಮಾಜದಿಂದ ಪಟ್ಟಣದ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು. ಸಮಾಜವು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಮಹಿಳಾ ಪರ ಕಾರ್ಯಗಳನ್ನು ಇನ್ನು ಮುಂದೆಯೂ ನಡೆಸುವುದಾಗಿ ತಿಳಿಸಿದರು.

ಪುರಸಭೆ ಮಾಜಿ ಅಧ್ಯಕ್ಷೆ, ವಕೀಲೆ ಪರ್ವಿನ್ ತಾಜ್ ಮಾತನಾಡಿ ಮಹಿಳೆಯರ ಪರವಾಗಿ ಸರ್ಕಾರ ನೀಡಿರುವ ಕಾನೂನು ಸೌಕರ್ಯ ಮತ್ತು ಅವುಗಳನ್ನು ಜವಾಬ್ದಾರಿಯಿಂದ ಬಳಸುವ ಬಗ್ಗೆ ವಿವರಿಸಿ. ಇಂತಹ ಕಾನೂನುಗಳ ಅರಿವು ಸಮಾಜದ ಶೋಷಿತ ಮಹಿಳೆಯರಿಗೆ ಮುಟ್ಟಿಸುವ, ಮನವರಿಕೆ ಮಾಡುವ ಕೆಲಸ ನಿರ್ವಹಿಸಬೇಕೆಂದು ತಿಳಿಸಿದರು.ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜ ಅಧ್ಯಕ್ಷ ಟಿ.ಎಸ್.ರಮೇಶ್ ಮಾತನಾಡಿ ಮಹಿಳಾ ದಿನವನ್ನು ಸಾರ್ಥಕವಾಗಿ ಆಚರಿಸಬೇಕು. ಮಹಿಳಾ ಸಮಾಜದ ಎಲ್ಲಾ ಕಾರ್ಯಗಳಿಗೂ ಸಂಪೂರ್ಣ ಸಹಕಾರ ಕೊಡುವುದಾಗಿ ತಿಳಿಸಿದರು.ಪುರಸಭೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಗೀತಾ ಗಿರಿರಾಜ್ ಮತ್ತು ತರೀಕೆರೆ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಹೇಮಲತಾ ರೇವಣ್ಣ ಅವರನ್ನು ಸನ್ಮಾನಿಸಲಾಯಿತು.ಗೌರವ ಅಧ್ಯಕ್ಷರು ಜಯ್ಯಮ್ಮ ಗಣೇಶ್, ವಾಣಿ ಶ್ರೀನಿವಾಸ್, ಕಾರ್ಯದರ್ಶಿ ರಶ್ಮಿ ರಮೇಶ್, ಗೀತಾ ಹರ್ಷ, ಧನಲಕ್ಷ್ಮಿ ಗುರುಮೂರ್ತಿ, ನಾಗರತ್ನ ಹಾಲಪ್ಪ, ಲತಾ ಹರೀಶ್, ಭಾಗ್ಯ ಚಂದ್ರು, ಹೇಮಾ ಉಮೇಶ್, ಶಶಿಕಲಾ ಲೋಕೇಶ್ ರೇಣುಕ ಬಾಬು, ಚಂದ್ರಕಲಾ ಆನಂದ್, ಸಮಾಜದ ಸದಸ್ಯರು, ಸೋಮಶೇಖರ್, ಹರೀಶ್ ಉಪಸ್ಥಿತರಿದ್ದರು.

-

4ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಕನಕಶ್ರೀ ಮಹಿಳಾ ಸಮಾಜದಿಂದ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪುರಸಭೆ

ಉಪಾಧ್ಯಕ್ಷೆ ಗೀತಾ ಗಿರಿರಾಜ್, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಹೇಮಲತಾ ರೇವಣ್ಣ ಅವರನ್ನು ಸನ್ಮಾನಿಸಲಾಯಿತು. ಕನಕಶ್ರೀ ಮಹಿಳಾ ಸಮಾಜ ಅಧ್ಯಕ್ಷೆ ಲಕ್ಷ್ಮಿ ವಿಶ್ವನಾಥ್, ವಾಣಿ ಶ್ರೀನಿವಾಸ್, ,ಕಾರ್ಯದರ್ಶಿ ರಶ್ಮಿ ರಮೇಶ್, ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜ ಅಧ್ಯಕ್ಷ ಟಿ.ಎಸ್.ರಮೇಶ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಾದಾಪುರ ಜೇನುಕಲ್ಲು ಸಿದ್ದೇಶ್ವರಸ್ವಾಮಿ ಮಹಾರಥೋತ್ಸವ
ಅರಸೀಕೆರೆಯಲ್ಲಿ ಯುವಕನ ಮೇಲೆ ಹಲ್ಲೆ ಆರೋಪ