ಕನ್ನಡಪ್ರಭ ವಾರ್ತೆ ಟೇಕಲ್ಹಾಲು ಉತ್ಪಾದಕರ ಸಹಕಾರ ಸಂಘಗಳು ಅಭಿವೃದ್ಧಿಯಾಗಬೇಕಾದರೆ ಗ್ರಾಮಗಳಲ್ಲಿ ಹಾಲು ಉತ್ಪಾದಕರು, ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡಬೇಕು ಮತ್ತು ಸಂಘ ಮಾಡುವುದು ಮುಖ್ಯವಲ್ಲ, ಅದನ್ನು ಅಭಿವೃದ್ಧಿಪಡಿಸಿ ಉಳಿಸಿಕೊಳ್ಳುವ ಛಲವಿರಬೇಕು ಆಗ ಮಾತ್ರ ಸಂಘವು ಬೆಳವಣಿಗೆ ಆಗಲು ಸಾಧ್ಯ ಎಂದು ಕೋಚಿಮುಲ್ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.ಟೇಕಲ್‌ನ ನೂಟುವೆ ಗ್ರಾಪಂ ವ್ಯಾಪ್ತಿಯಲ್ಲಿ ಪೆಮ್ಮದೊಡ್ಡಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.ಹಾಲು ಪೂರೈಕೆ ಹೆಚ್ಚಾಗಬೇಕು
ಮಾಲೂರು ತಾಲೂಕಿನಲ್ಲಿ ಪೆಮ್ಮದೊಡ್ಡಿ ೧೭೮ನೇ ಹಾಲು ಉತ್ಪಾದಕರ ಸಹಕಾರ ಸಂಘವಾಗಿದ್ದು ಇದು ಚಿಕ್ಕ ಹಳ್ಳಿಯಾಗಿದ್ದರೂ ಈ ಸಂಘಕ್ಕೆ ಗ್ರಾಮದಲ್ಲಿ ೨೦ ಮಂದಿ ಹಾಲು ಉತ್ಪಾದಕರು ದಿನವೊಂದಕ್ಕೆ ೫೦ ಲೀಟರ್ ಹಾಲು ಪೂರೈಸುತ್ತಿದ್ದಾರೆ. ಮುಂದಿನ ವರ್ಷದ ವಾರ್ಷಿಕ ಸಭೆಯಲ್ಲಿ ಸಂಘಕ್ಕೆ ಹೆಚ್ಚು ಹಾಲಿನ ಶೇಖರಣೆ ಹೆಚ್ಚಿಸಬೇಕು, ಗ್ರಾಮದ ಪ್ರತಿ ಮನೆಮನೆಯಲ್ಲೂ ರಾಸುಗಳನ್ನು ಕಟ್ಟಿ ಸಂಘಕ್ಕೆ ಹಾಲು ನೀಡುವಂತೆ ಆಗಬೇಕು ಎಂದರು. ರಾಸುಗಳಿಗೆ ಪ್ರತಿಯೊಬ್ಬರೂ ಒಕ್ಕೂಟದಿಂದ ವಿಮೆ ಮಾಡಿಸಿ ಇದೀಗ ಹಾಲು ಉತ್ಪಾದಕರಿಗೆ ಕಾರ್ಯದರ್ಶಿ, ಹಾಲಿನ ಪರೀಕ್ಷಕರಿಗೂ, ವಿಮೆಯಿದ್ದು ಇದರ ಉಪಯೋಗ ಪಡೆದುಕೊಳ್ಳಬೇಕು. ಸಂಘದಲ್ಲಿ ಕಾರ್ಯದರ್ಶಿ ಪಾತ್ರವು ತುಂಬಾ ಜವಾಬ್ದಾರಿಯುತವಾದುದ್ದು ಸಂಘದ ಅಭಿವೃದ್ಧಿಗೆ ಅವರೇ ನೇರ ಕಾರಣರಾಗಿರುತ್ತಾರೆ, ಪ್ರತಿವಾರ ಸಂಘದಲ್ಲಿ ಸಭೆ ಸೇರಿ ಹಾಲು ಉತ್ಪಾದಕರ ಸಮಸ್ಯೆಗಳನ್ನು ತಿಳಿದುಕೊಳ್ಳಬೇಕು ಹಾಗೂ ಒಕ್ಕೂಟದಿಂದ ಸಿಗುವ ಎಲ್ಲ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಿಸುವಂತೆ ಆಗಬೇಕು ಎಂದರು.ಬಸಾಪುರ ಡೇರಿ ಮಾದರಿ
ಟೇಕಲ್‌ನ ಕೆಜಿಹಳ್ಳಿ ಗ್ರಾಪಂ ವ್ಯಾಪ್ತಿಯ ಬಸಾಪುರ ಹಾಲು ಉತ್ಪಾದಕರ ಸಹಕಾರ ಸಂಘವು ತಮ್ಮ ಸಂಘವನ್ನು ಜಿಲ್ಲೆಯಲ್ಲಿ ಮಾದರಿಯಾಗಿ ಮಾಡಿದ್ದು, ಪೆಮ್ಮದೊಡ್ಡಿ ಸಂಘವು ಅದರಂತೆ ಆಗಲು ಮುನ್ನಡೆಯಬೇಕು ಎಂದು ಹೇಳಿದರು.ಸಂಘದ ಅಧ್ಯಕ್ಷ ಮಂಜುನಾಥ್, ಸಂಘದ ಕಾರ್ಯದರ್ಶಿ ರಮೇಶ್, ಕೋಲಾರ ಜಿಲ್ಲಾ ಕಾಂಗ್ರೆಸ್‌ನ ಕಾರ್ಯದರ್ಶಿ ನಿಧರಮಂಗಲ ವೆಂಕಟಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ನರಸಿಂಹ, ಮಾಸ್ತಿ ಪೊಲೀಸ್ ಠಾಣೆ ಪಿ.ಐ.ಸುನಿಲ್ ಕುಮಾರ್, ಶಿಬಿರ ವ್ಯವಸ್ಥಾಪಕ ಲೋಹಿತ್, ರಾಜಕುಮಾರ್, ಮುರುಳಿ, ನಾಗರಾಜ್, ವೆಂಕಟರಾಜ್ ಇದ್ದರು.