ಕನ್ನಡಪ್ರಭ ವಾರ್ತೆ ಮಧುಗಿರಿ
ದೊಡ್ಡೇರಿ ಹೋಬಳಿಯ ತಿಗಳರಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ತುಮುಲ್ ಹಾಲು ಒಕ್ಕೂಟದಿಂದ ಕ್ಷೀರ ಸಂಜೀವಿನಿ ಯೋಜನೆಯಡಿ 6 ಲಕ್ಷ 44 ಸಾವಿರ ಚೆಕ್ ವಿತರಿಸಿ ಮಾತನಾಡಿದರು.
14 ಹೈನುಗಾರರಿಗೆ ತಲಾ 44 ಸಾವಿರ ರುಗಳನ್ನು ಬಡ್ಡಿ ರಹಿತ ಸಾಲವಾಗಿ ನೀಡಲಾಗುತ್ತಿದೆ. ಇದರ ಜೊತೆಗೆ ಡಿಸಿಸಿ ಬ್ಯಾಂಕ್ ವತಿಯಿಂದ ಪ್ರತಿ ಫಲಾನುಭವಿಗೆ 26 ಸಾವಿರ ಸಾಲ ನೀಡುತ್ತಿದ್ದು ಒಟ್ಟು 70 ಸಾವಿರಗಳಲ್ಲಿ ಹಸುಗಳನ್ನು ಖರೀದಿಸಿ ಗುಣ ಮಟ್ಟದ ಹಾಲು ಸರಬರಾಜು ಮಾಡಿ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಿ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುಬೇಕು ಎಂದರು.ತುಮುಲ್ ಹಾಲು ಒಕ್ಕೂಟ ನಿರ್ದೇಶಕ ಬಿ.ನಾಗೇಶ್ ಮಾತನಾಡಿ, ಮಧುಗಿರಿ ತಾಲೂಕು ಗುಣ ಮಟ್ಟದ ಹಾಲು ಶೇಖರಣೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ತಾಲೂಕಿನಲ್ಲಿ 1 ಲಕ್ಷ 20 ಸಾವಿರ ಲೀ.ಹಾಲು ಶೇಖರಣೆಯಾಗುತ್ತಿದೆ. ಈ ಹಿಂದೆ ಗುಣ ಮಟ್ಟದಲ್ಲಿ 10ನೇ ಸ್ಥಾನ ಪಡೆದಿದ್ದು ,ಆದರೆ ಕಳೆದ ತಿಂಗಳಿನಲ್ಲಿ ಮೊದಲ ಸ್ಥಾನಕ್ಕೆ ಬಂದಿದೆ.ಇದಕ್ಕೆ ಕಾರಣ ಶಾಸಕರಾದ ಕೆ.ಎನ್.ರಾಜಣ್ಣ, ಸಹಕಾರ ಸಚಿವರಾಗಿದ್ದ ವೇಳೆ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಲಲು ತಿಳಿಸಿದ್ದರಿಂದ ಇಂದು ಗುಣ ಮಟ್ಟದ ಹಾಲು ಬರುತ್ತಿದೆ. ಇದೇ ರೀತಿ ರಾಸುಗಳು ಮರಣ ಹೊಂದಿದರೆ ಪರಿಹಾರ ನೀಡಲಾಗುತ್ತಿದೆ ಎಂದರು.