ಆರ್ಥಿಕ ಮುಗ್ಗಟ್ಟು ನಿವಾರಣೆಗೆ ಗುಣಮಟ್ಟದ ಹಾಲು ಸರಬರಾಜು ಮಾಡಿ: ಕೃಷ್ಣೆಗೌಡ

KannadaprabhaNewsNetwork |  
Published : Sep 25, 2025, 01:00 AM IST
24ಕೆಎಂಎನ್ ಡಿ19 | Kannada Prabha

ಸಾರಾಂಶ

ಈ ಗ್ರಾಮದಲ್ಲಿ ಹೆಚ್ಚು ಹಾಲು ಸರಬರಾಜು ಮಾಡುತ್ತಿದ್ದು, ಹಾಲು ಕರೆಯುವ ಯಂತ್ರ ಬೇಕಾಗಿದೆ ಎಂದು ಬೇಡಿಕೆ ಸಲ್ಲಿಸಿದ್ದಾರೆ. ನಾನು ಮನ್ಮಲ್ ಸಭೆಯಲ್ಲಿ ಹಾಲು ಕರೆಯುವ ಯಂತ್ರ 250 ಬೇಕು ಎಂದ ಕೇಳಿದ್ದೆ. ಅವರು ಈಗ 104 ನೀಡಿದ್ದಾರೆ. ಮೊದಲು ಯಾರು ಅರ್ಜಿ ಸಲ್ಲಿಸಿದ್ದಾರೆ ಅವರಿಗೆ ನೀಡುತ್ತೇವೆ ನಂತರ ಹಂತ ಹಂತವಾಗಿ ಎಲ್ಲರಿಗೂ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಹಲಗೂರು

ಹೈನುಗಾರಿಕೆಯಲ್ಲಿ ಹೆಚ್ಚು ಲಾಭಾಂಶ ಪಡೆಯಲು ಉತ್ಪಾದಕರು ಹಸುಗಳಿಗೆ ಪೌಷ್ಟಿಕ ಆಹಾರ ನೀಡಿ ಗುಣಮಟ್ಟದ ಹಾಲನ್ನು ಡೇರಿಗೆ ಸರಬರಾಜು ಮಾಡುವುದರಿಂದ ನಿಮ್ಮ ಆರ್ಥಿಕ ಮುಗ್ಗಟ್ಟು ನಿವಾರಣೆಗೆ ಸಹಕಾರಿಯಾಗಲಿದೆ ಎಂದು ಮನ್ಮಲ್ ನಿರ್ದೇಶಕ ಕೃಷ್ಣೇಗೌಡ ತಿಳಿಸಿದರು.

ನಿಟ್ಟೂರು ಕೋಡಿಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಹೈನುಗಾರಿಯಲ್ಲಿ ಹೆಚ್ಚು ಲಾಭ ಬಂದರೆ ಮಾತ್ರ ನೀವುಗಳು ಬೆಳೆಯಲು ಸಾಧ್ಯ. ಆದ್ದರಿಂದ ಗುಣಮಟ್ಟದ ಹಾಲನ್ನು ಡೇರಿಗೆ ಸರಬರಾಜ ಮಾಡುವಂತೆ ಸಲಹೆ ನೀಡಿದರು.

ಈ ಗ್ರಾಮದಲ್ಲಿ ಹೆಚ್ಚು ಹಾಲು ಸರಬರಾಜು ಮಾಡುತ್ತಿದ್ದು, ಹಾಲು ಕರೆಯುವ ಯಂತ್ರ ಬೇಕಾಗಿದೆ ಎಂದು ಬೇಡಿಕೆ ಸಲ್ಲಿಸಿದ್ದಾರೆ. ನಾನು ಮನ್ಮಲ್ ಸಭೆಯಲ್ಲಿ ಹಾಲು ಕರೆಯುವ ಯಂತ್ರ 250 ಬೇಕು ಎಂದ ಕೇಳಿದ್ದೆ. ಅವರು ಈಗ 104 ನೀಡಿದ್ದಾರೆ. ಮೊದಲು ಯಾರು ಅರ್ಜಿ ಸಲ್ಲಿಸಿದ್ದಾರೆ ಅವರಿಗೆ ನೀಡುತ್ತೇವೆ ನಂತರ ಹಂತ ಹಂತವಾಗಿ ಎಲ್ಲರಿಗೂ ನೀಡಲಾಗುವುದು ಎಂದರು.

ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ ಅವರ ಸಹಕಾರದಿಂದ ನಾನು ಮನ್ಮಲ್ ನಿರ್ದೇಶಕನಾಗಿದ್ದೇನೆ. ನಾನು ನಿರ್ದೇಶಕನಾದ ಮೇಲೆ ನಮ್ಮ ಮನ್ಮಲ್ 6ನೇ ಸ್ಥಾನದಲ್ಲಿತ್ತು ಈಗ ಜಿಲ್ಲೆಯಲ್ಲಿ 2ನೇ ಸ್ಥಾನಕ್ಕೆ ಬಂದಿದೆ ಎಂದರು.

ಡೇರಿ ಕಾರ್ಯದರ್ಶಿ ಪ್ರಕಾಶ್ ಮಾತನಾಡಿ, ಡೇರಿಗೆ ಈ ವರ್ಷ 8,86,554 ರು.ಗಳ ನಿವ್ವಳ ಲಾಭ ಬಂದಿದೆ ಎಂದರು. ಇದೇ ವೇಳೆ ಮನ್ಮುಲ್ ನಿರ್ದೇಶಕರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಕೆ.ಸಿ.ಗೌಡ, ರಾಜೇಗೌಡ, ಮಂಚೇಗೌಡ, ಕೃಷ್ಣ, ಲಿಂಗೇಗೌಡ ,ನಂಜುಂಡೇಗೌಡ, ಚಂದ್ರಶೇಖರ, ಕೃಷ್ಣೆಗೌಡ, ರುಕ್ಮಂಗದಾ ಚಾರಿ, ಗೊಲ್ಲರಹಳ್ಳಿ ಕಾರ್ಯದರ್ಶಿ ಶಿವಲಿಂಗೇಗೌಡ ಡಿ.ಕೆ.ಹಳ್ಳಿ ಕಾರ್ಯದರ್ಶಿ ಬಾಬು ಸೇರಿದಂತೆ ಇತರರು ಇದ್ದರು.

ಸೆ.28ರಂದು ರಾಜ್ಯ ಮಟ್ಟದ ವೈಚಾರಿಕ-ನಾಸ್ತಿಕ ವಿಚಾರಗಳ ಮಂಥನ: ಶ್ರೀನಿವಾಸ ನಟೇಕರ್

ಮಂಡ್ಯ:

ಭಾರತೀಯ ವಿಚಾರವಾದಿಗಳ ಒಕ್ಕೂಟ, ನೇಗಿಲಯೋಗಿ ಟ್ರಸ್ಟ್, ಏಯ್ಡ್ ವಿತೌಟ್ ರಿಲಿಜನ್ ಟ್ರಸ್ಟ್, ಅಖಿಲ ಕರ್ನಾಟಕ ವಿಚಾರವಾದಿ ಟ್ರಸ್ಟ್ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಸೆ.28ರ ಬೆಳಗ್ಗೆ ಎರಡನೇ ರಾಜ್ಯ ಮಟ್ಟದ ವೈಚಾರಿಕ-ನಾಸ್ತಿಕ ವಿಚಾರಗಳ ಮಂಥನ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಶ್ರೀನಿವಾಸ ನಟೇಕರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೇಕೆ ನಾಸ್ತಿಕ ಭಗತ್‌ಸಿಂಗ್ ಜನ್ಮದಿನದ ಅಂಗವಾಗಿ ನಡೆಯುವ ಕಾರ್ಯಕ್ರಮನ್ನು ಮೂಢನಂಬಿಕೆ, ವಾಸ್ತವ ಮತ್ತು ಭ್ರಮೆ ಕೃತಿ ಲೋಕಾರ್ಪಣೆ ಮಾಡುವ ಮೂಲಕ ಕನ್ನಡ ಅಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಉದ್ಘಾಟಿಸುವರು. ಒಕ್ಕೂಟದ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್ ಅಧ್ಯಕ್ಷತೆ ವಹಿಸುವರು. ರೈತ ಮುಖಂಡ ಟಿ.ಎಲ್.ಕೃಷ್ಣೇಗೌಡ, ಪತ್ರಕರ್ತ ಬಿ.ಆರ್.ರಂಗಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡುವರು ಎಂದರು.

ಮೊದಲ ಗೋಷ್ಠಿಯಲ್ಲಿ ಮನೋವೈದ್ಯ ಡಾ.ಶಶಿಧರ ಬಿಳಗಿ (ವೈದ್ಯಕೀಯ ಕ್ಷೇತ್ರದಲ್ಲಿ ವೈಚಾರಿಕೆತೆ), 2ನೇ ಗೋಷ್ಠಿಯಲ್ಲಿ ವಕೀಲರಾದ ಎಸ್.ಎ.ಸುಚಿತ್ರಾ (ಮಹಿಳೆಯರಲ್ಲಿ ನಾಸ್ತಿಕತೆಯ ಮಹತ್ವ), ಮೂರನೇ ಗೋಷ್ಠಿಯಲ್ಲಿ ತಮಿಳುನಾಡು ದ್ರಾವಿಡ ಕಳಗಂ ಪ್ರನ್ಸ್ ವಿನ್ನರಸ್ ಪೆರಿಯಾರ್ ಅವರು ಪೆರಿಯಾರ್ ಅವರ ನಾಸ್ತಿಕ ಚಿಂತನೆ ವಿಷಯ ಕುರಿತು ಮಾತನಾಡುವರು ಎಂದರು.

ವೈಚಾರಿಕ ಚಳವಳಿಯ ಭವಿಷ್ಯ ಮತ್ತು ಸಂಘಟನೆ ಕುರಿತು ಪ್ರೊ.ನರೇಂದ್ರ ನಾಯಕ್ ಸಂವಾದ ನಡೆಸಿಕೊಡುವರು. ಪ್ರಾಂಶುಪಾಲರಾದ ಡಿ.ವಿ.ಸುವರ್ಣಾ ಅಧ್ಯಕ್ಷತೆ ವಹಿಸುವರು. ಲೇಖಕ ವೆಂಕಟಯ್ಯ ಅಪ್ಪಗೆರೆ, ಪ್ರೊ.ಪಂಡಿತಾರಾಧ್ಯ, ಡಾ.ಪ್ರವೀಣ್ ರಾಮಚಂದ್ರ ಆಗಮಿಸುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಎಂ.ಜಿ.ವಿನಯ್‌ಕುಮಾರ್, ಎಸ್.ಆರ್.ಸ್ವಾಮಿ ಇದ್ದರು.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ