ಡೇರಿಗೆ ಗುಣಮಟ್ಟದ ಹಾಲು ಸರಬರಾಜು ಮಾಡಿ: ಸಿ.ಶಿವಕುಮಾರ್

KannadaprabhaNewsNetwork |  
Published : Mar 14, 2025, 12:32 AM IST
13ಕೆಎಂಎನ್ ಡಿ16 | Kannada Prabha

ಸಾರಾಂಶ

ಮಂಡ್ಯ ಹಾಲು ಒಕ್ಕೂಟದಿಂದ ದೆಹಲಿಗೆ ನಮ್ಮ ಜಿಲ್ಲೆಯ ಹಾಲನ್ನು ರಪ್ತು ಮಾಡಲಾಗುತ್ತಿದೆ. ಈ ಹಿಂದೆ 4ನೇ ಸ್ಥಾನದಲ್ಲಿ ಪಾಂಡವಪುರ 2ನೇ ಸ್ಥಾನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ 1ನೇ ಸ್ಥಾನಕ್ಕೆ ಕೊಂಡೊಯ್ಯಲಾಗುವುದು. ಹಿರೇಮರಳಿ ಗ್ರಾಮದಲ್ಲಿ ಡೇರಿ ನೂತನ ಕಟ್ಟಡಕ್ಕೆ ಒಕ್ಕೂಟದ ಅನುದಾನದ ಜತೆಗೆ ವೈಯಕ್ತಿಕವಾಗಿ ನಮ್ಮ ಕುಟುಂಬದದಿಂದಲೂ ಆರ್ಥಿಕ ಸಹಾಯ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕ್ಯಾತನಹಳ್ಳಿ ಜಿಪಂ ವ್ಯಾಪ್ತಿಯ ಗ್ರಾಮವೊಂದರ ಡೇರಿಯಲ್ಲಿ ಹಾಲಿಗೆ ಯೂರಿಯಾ ಕಲಬೆರಕೆ ಮಾಡಿದ್ದ ಪ್ರಕರಣ ನಡೆದಿದೆ. ಹೀಗಾಗಿ ಡೇರಿಗೆ ಕಲಬೆರಕೆ ಹಾಲು ನೀಡದೆ ಗುಣಮಟ್ಟದ ಹಾಲು ಸರಬರಾಜು ಮಾಡಬೇಕು ಎಂದು ಮನ್ಮುಲ್ ನೂತನ ನಿರ್ದೇಶಕ ಸಿ.ಶಿವಕುಮಾರ್ ಹೇಳಿದರು.

ತಾಲೂಕಿನ ಹಿರೇಮರಳಿ ಗ್ರಾಮದ ಡೇರಿಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಮಂಡ್ಯ ಹಾಲು ಒಕ್ಕೂಟದಿಂದ ದೆಹಲಿಗೆ ನಮ್ಮ ಜಿಲ್ಲೆಯ ಹಾಲನ್ನು ರಪ್ತು ಮಾಡಲಾಗುತ್ತಿದೆ. ಈ ಹಿಂದೆ 4ನೇ ಸ್ಥಾನದಲ್ಲಿ ಪಾಂಡವಪುರ 2ನೇ ಸ್ಥಾನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ 1ನೇ ಸ್ಥಾನಕ್ಕೆ ಕೊಂಡೊಯ್ಯಲಾಗುವುದು ಎಂದರು.

ಹಿರೇಮರಳಿ ಗ್ರಾಮದಲ್ಲಿ ಡೇರಿ ನೂತನ ಕಟ್ಟಡಕ್ಕೆ ಒಕ್ಕೂಟದ ಅನುದಾನದ ಜತೆಗೆ ವೈಯಕ್ತಿಕವಾಗಿ ನಮ್ಮ ಕುಟುಂಬದದಿಂದಲೂ ಆರ್ಥಿಕ ಸಹಾಯ ಮಾಡಲಾಗುವುದು. ಹಿರೇಮರಳಿ ಗ್ರಾಮ ತಾಲೂಕಿಗೆ ಹಿರಿಯ ಮಗಳಿದ್ದಂತೆ. ಹೀಗಾಗಿ ನಮ್ಮ ಚಿಕ್ಕಪ್ಪರವರಾದ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜಪ್ಪ ಅವರಿಗೆ ಹಿರೇಮರಳಿ ಅಂದ್ರೆ ಬಹಳ ಪ್ರೀತಿ. ಗ್ರಾಮದ ಯಾವುದೇ ಕೆಲಸಗಳಿದ್ದರೂ ಮಾಡಿಕೊಡುತ್ತಾರೆ ಎಂದರು.

ಹಿರೇಮರಳಿ ಗ್ರಾಮದ ಡೇರಿಗೆ 30 ಮ್ಯಾಟ್ ಗಳು ಬಂದಿದೆ. ಇನ್ನೂ 50 ಮ್ಯಾಟ್ ಗಳ ಅಗತ್ಯವಿದೆ. ಯುಗಾದಿ ಹಬ್ಬದೊಳಗಾಗಿ ಹಾಲು ಉತ್ಪಾದಕರಿಗೆ ಮ್ಯಾಟ್ ಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ಮಾತನಾಡಿ, ಸಿ.ಶಿವಕುಮಾರ್ ಅವರು ಹಿರೇಮರಳಿ ಗ್ರಾಮದಲ್ಲಿ ಡೇರಿ ಕಟ್ಟಡಕ್ಕೆ ಶೀಘ್ರದಲ್ಲೇ ಭೂಮಿ ಪೂಜೆ ನೆರವೇರಿಸಬೇಕು. ಜತೆಗೆ ವಿ.ಸಿ.ನಾಲೆ ಬಳಿ ತಡೆಗೋಡೆ ಹಾಗೂ ಆಟೋ ನಿಲ್ದಾಣಕ್ಕೆ ಗ್ರಾಮಸ್ಥರು ಮುಂದಾಗಿದ್ದು, ಮಾಜಿ ಶಾಸಕರಾದ ಸಿ.ಎಸ್.ಪುಟ್ಟರಾಜು ಅವರಿಂದ ಸಹಾಯ ಮಾಡಿಸಬೇಕು ಎಂದರು.

ಈ ವೇಳೆ ಮನ್ಮುಲ್ ನೂತನ ನಿರ್ದೇಶಕ ಸಿ.ಶಿವಕುಮಾರ್ ಅವರನ್ನು ಗ್ರಾಮದ ಡೇರಿ ವತಿಯಿಂದ ಅಭಿನಂದಿಸಲಾಯಿತು. ಡೇರಿ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷೆ ಸವಿತಾ, ನಿರ್ದೇಶಕರಾದ ಮಲ್ಲಿಕ್, ಸುನೀಲ್, ಶ್ವೇತಾ, ಎಚ್.ಕೆ.ಪುಷ್ಪಾ ಸೋಮಶೇಖರ್ ಹಾಗೂ ಕಾರ್ಯದರ್ಶಿ ಜಗದೀಶ್, ಮುಖಂಡರಾದ ಚನ್ನೇಗೌಡ, ಎಚ್.ಬಿ.ಚಂದ್ರಶೇಖರ್, ಎಚ್.ಇ.ರವಿಕುಮಾರ್, ಸತೀಶ್, ಬಕೋಡಿ, ಗ್ರಾಮದ ಯಜಮಾನರು ಹಾಜರಿದ್ದರು.

ಇದೇ ವೇಳೆ ವಿ.ಸಿ ನಾಲೆ ಬಳಿ ನಿರ್ಮಾಣವಾಗುತ್ತಿರುವ ಆಟೋ ನಿಲ್ದಾಣ ಹಾಗೂ ತಡೆಗೋಡೆ ಕಾಮಗಾರಿಯನ್ನು ಗಣ್ಯರು ವೀಕ್ಷಿಸಿದರು. ಈ ವೇಳೆ ವಿನಾಯಕ ಆಟೋ ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷ ವಿಷ್ಣು ವಿಠಲ್, ಪದಾಧಿಕಾರಿಗಳಾದ ಶಶಾಂಕ್, ಸುನಿಲ್, ಗುರು, ಗಿರೀಶ್, ಕಾರ್ತಿಕ್, ಆಟೋ ಕುಳ್ಳ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''