ಮಾಗಡಿ: ನಮ್ಮ ತಾಲೂಕಿನವರೇ ಆಗಿರುವ ಅ.ದೇವೇಗೌಡರಿಗೆ ಈ ಬಾರಿಯ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ 1ನೇ ಪ್ರಾಶಸ್ತ್ಯದ ಮತವನ್ನು ನೀಡಿ ಬೆಂಬಲಿಸಿ ಎಂದು ಬಿಜೆಪಿ ಯುವ ಮುಖಂಡ ಕೆ.ಆರ್.ಪ್ರಸಾದ್‌ಗೌಡ ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದಿಂದ ಸ್ವರ್ಧಿಸಿರುವ ರಾಮೋಜಿಗೌಡರು ಬೆಂಗಳೂರಿನಲ್ಲಿ ನೆಲೆಸಿದ್ದು, ಅವರನ್ನು ಗೆಲ್ಲಿಸಿದರೆ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಅವರ ಮನೆಗೆ ಹೋಗಿ ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬೇಕು. ಅದರೆ ಅ.ದೇವೇಗೌಡರು ಸ್ಥಳೀಯರಾಗಿದ್ದು, ಅವರಿಗೆ ತಾಲೂಕಿನ ಮತದಾರರ ಪರಿಚಯ ಸಾಕಷ್ಟಿದೆ. ಪೋನ್ ಮೂಲಕ ಅವರನ್ನು ಸಂಪರ್ಕಿಸಿದರೆ ನಮ್ಮ ಕೆಲಸವನ್ನು ಮಾಡಿ ಕೊಡುತ್ತಾರೆ. ಎಂಎಲ್ಸಿ ಆಗಿ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ಅ.ದೇವೇಗೌಡರು ನೀಡಿದ್ದಾರೆ. ಸ್ಥಳೀಯರಾಗಿರುವ ಅವರ ಪರ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಪದವೀಧರ ಮತದಾರರ ಮನೆಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಗ್ರಾಮೀಣ ಭಾಗದ ಯುವ ಪದವೀಧರರ ಸಮಸ್ಯೆಗಳಿಗೆ ಸ್ವಂದಿಸುತ್ತಿದ್ದಾರೆ. ನಿರುದ್ಯೋಗಿ ಯುವಕರಿಗೆ ಕೆಎಎಸ್, ಕೆಇಎಸ್, ಇತ್ಯಾದಿ ಸ್ವರ್ಧಾತ್ಮಕ ಪರೀಕ್ಷಗಳಲ್ಲಿ ಭಾಗವಹಿಸಲು ಅಗತ್ಯ ತರಬೇತಿ ಮಾರ್ಗದರ್ಶನವನ್ನು ಉಚಿತವಾಗಿ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದ್ದು, ಪದವೀಧರರ ಪರವಾಗಿ ಪ್ರಾಮಾಣಿಕಗಿ ಕೆಲಸ ನಿರ್ವಹಿಸುತ್ತಿರುವ ಅ.ದೇವೇಗೌಡರಿಗೆ ತಾಲೂಕಿನ ಪದವೀಧರರು ತಮ್ಮ ಅಮೂಲ್ಯ ಮತವನ್ನು ನೀಡಬೇಕೆಂದು ಪ್ರಸಾದ್‌ಗೌಡರು ವಿನಂತಿಸಿದರು.ಈ ವೇಳೆ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಶಿಧರ್, ತಾಲೂಕು ಉಪಾಧ್ಯಕ್ಷ ಚನ್ನಬಸವಯ್ಯ, ರಂಗನಾಥ್, ಚಿಕ್ಕೇಗೌಡ, ರಾಮಚಂದ್ರ, ವಿಜಯಸಿಂಹ ಇತರರು ಭಾಗವಹಿಸಿದ್ದರು.
30ಮಾಗಡಿ1 :ಮಾಗಡಿ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಯುವ ಮುಖಂಡ ಕೆ.ಆರ್.ಪ್ರಸಾದ್ಗೌಡ ಸುದ್ದಿಗಾರರೊಂದಿಗೆ ಮಾತನಾಡಿದರು.