ಕನ್ನಡಪ್ರಭ ವಾರ್ತೆ ಶಿವಮೊಗ್ಗ / ಶಿಕಾರಿಪುರ
ನಗರದ ಬಿಬಿ ರಸ್ತೆಯಲ್ಲಿರುವ ಸತ್ಯ ಪ್ರಮೋದ ಕಲ್ಯಾಣ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಬ್ರಾಹ್ಮಣ ಸಮಾಜದ ವಿಶೇಷ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ವಿಶ್ವಗುರು ಭಾರತವನ್ನು ನಿರ್ಮಾಣಮಾಡಲು ಹೆಚ್ಚಿನ ಬೆಂಬಲದ ಅವಶ್ಯಕತೆ ಇದ್ದು, ಮೇ 7 ರಂದು ನಡೆಯುವ ಚುನಾವಣೆಯಲ್ಲಿ ಕಮಲದ ಗುರುತಿಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನನ್ನ ಸಂಸದನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ರೈಲ್ವೇ ಕ್ಷೇತ್ರ, ವಿಮಾನಯಾನ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ದಿ, ಪ್ರವಾಸೋದ್ಯಮಗಳಿಗೆ ಹೆಚ್ಚಿನ ಆದ್ಯತೆ, ಜೋಗ ಮತ್ತು ಕೊಡಚಾದ್ರಿಯಲ್ಲಿ ಕೇಬಲ್ ಕಾರ್ ಅಳವಡಿಕೆ ಹೀಗೆ ನೂರಾರು ಕಾರ್ಯಕ್ರಮಗಳು ಜನ ಸಾಮಾನ್ಯರಿಗಾಗಿ ಮಾಡಿದ್ದೇನೆ. ಇನ್ನೂ ಅನೇಕ ಯೋಜನೆಗಳು ನನ್ನ ಕಣ್ಣುಮುಂದೆ ಇವೆ. ಅವುಗಳ ಅನುಷ್ಠಾನಕ್ಕೆ ಮತ್ತೊಂದು ಅವಧಿಗೆ ಸಂಸದನಾಗುವ ಅಗತ್ಯವಿದೆ. ಆದ್ದರಿಂದ ಕ್ರಮ ಸಂಖ್ಯೆ ೨ರ ಕಮಲದ ಗುರುತಿಗೆ ಮತವನ್ನು ನೀಡುವ ಮೂಲಕ ಭಾರೀ ಬಹುಮತದೊಂದಿಗೆ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಶಾಸಕ ಶ್ರೀ ವಾತ್ಸವ್, ಮಾಜಿ ಶಾಸಕ ಪ್ರಸನ್ನಕುಮಾರ್, ಮುಖಂಡರಾದ ದತ್ತಾತ್ರಿ, ನರೆಂದ್ರ ಬಾಬು, ಸುಂದರರಾಜ್, ರಾಘವೇಂದ್ರ ಉಡುಪ ಮತ್ತಿತರರು ಇದ್ದರು. ಮೋದಿ ಸತ್ತ ಮೇಲೆ ಬೇರೆ ಯಾರಿಲ್ವ?: ಕಾಗೆ ಹೇಳಿಕೆಗೆ ಸಂಸದ ರಾಘವೇಂದ್ರ ಕಿಡಿ
ಶಿವಮೊಗ್ಗ: ರಾಜು ಕಾಗೆ ಅವರು ನರೇಂದ್ರ ಮೋದಿ ಅವರು ಸತ್ತು ಹೋದ ಮೇಲೆ ಯಾರು ಇಲ್ವಾ ಅಂತಾ ಪ್ರಶ್ನೆ ಮಾಡಿದ್ದಾರೆ.ಮೋದಿ ಅವರ ಸಾವನ್ನು ಬಯಸ್ತಿದ್ದಾರೆ, ಇದು ಕಾಗೆ ಅವರ ಮಾತು ಅನ್ನುವುದಕ್ಕಿಂತ ಕಾಂಗ್ರೆಸ್ ಮನಸ್ಥಿತಿ ತೋರಿಸುತ್ತಿದೆ ಎಂದು ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಕಿಡಿಕಾರಿದರು.
ಶಿಕಾರಿಪುರ: ಕಾಂಗ್ರೆಸ್ ಗ್ಯಾರೆಂಟಿ ತಾತ್ಕಾಲಿಕವಾಗಿದ್ದು, ಮೋದಿ ಗ್ಯಾರಂಟಿ ಶಾಶ್ವತವಾಗಿದೆ ಮತದಾರರಿಗೆ ಈ ಬಗ್ಗೆ ಅರಿವಿದ್ದು ಪುನಃ ಮೋದಿ ದೇಶದ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ಪ್ರಧಾನಿಯಾಗಿ ಕೈಗೊಂಡ ಕ್ರಾಂತಿಕಾರಕ ನಿರ್ದಾರಗಳಿಂದ ಜಗತ್ತು ಮೋದಿ ಪುನಃ ಪ್ರದಾನಿಯಾಗಬೇಕು ಎಂದು ಬಯಸಿದೆ ಅವರು ನೀಡಿದ ಗ್ಯಾರೆಂಟಿಗಳು ಶಾಶ್ವತವಾಗಿದ್ದು ಕಾಂಗ್ರೆಸ್ ಗ್ಯಾರೆಂಟಿ ಕೇವಲ ತಾತ್ಕಾಲಿಕ ದೇಶದ ಪ್ರಜ್ಞಾವಂತ ಎಲ್ಲ ಮತದಾರರಿಗೆ ಈ ಬಗ್ಗೆ ಸ್ಪಷ್ಟ ಅರಿವಿದ್ದು ಪುನಃ ಮೋದಿ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾದ್ಯವಿಲ್ಲ ಚುನಾವಣೆ ಸಂದರ್ಬದಲ್ಲಿ ಅಪಪ್ರಚಾರ ವಿರೋಧಿಗಳ ಕಟ್ಟಕಡೆಯ ಅಸ್ತ್ರವಾಗಿದ್ದು ಈ ದಿಸೆಯಲ್ಲಿ ಕಾಂಗ್ರೆಸ್ ನವರ ಅಪಪ್ರಚಾರಕ್ಕೆ ತಲೆಕೆಡಿಸಿಕೊಳ್ಳದಂತೆ ಸಲಹೆ ನೀಡಿದರು.ಈ ಸಂದರ್ಬದಲ್ಲಿ ವಿಪ ಸದಸ್ಯೆ,ನಟಿ ತಾರಾ ಅನುರಾಧ ಮುಖಂಡ ಮಹೇಶ್ ಹುಲ್ಮಾರ್ ಮಾತನಾಡಿದರು.ವಿಪ ಮಾಜಿ ಸದಸ್ಯ ರುದ್ರೇಗೌಡ,ತೇಜಸ್ವಿನಿ ರಾಘವೇಂದ್ರ,ಜಿ.ಪಂ ಮಾಜಿ ಸದಸ್ಯೆ ಆರುಂಧತಿ ರಾಜೇಶ್ ಮುಖಂಡ ಪರಮೇಶ್ವರಪ್ಪ ಹಿತ್ತಲ,ಚುರ್ಚುಗುಂಡಿ ಶಶಿಧರ,ರುದ್ರಮುನಿ,ವೀರೇಂದ್ರ ಪಾಟೀಲ್,ನಾಗರಾಜ ಕೊರಲಹಳ್ಳಿ, ತಾ.ಜೆಡಿಎಸ್ ಅಧ್ಯಕ್ಷ ಬೆಂಕಿ ಯೋಗೀಶ್ ಮತ್ತಿತರರು ಹಾಜರಿದ್ದರು.