ರಾಘವೇಂದ್ರ ಗೆಲುವು ಕನ್ಫರ್ಮ್ : ಬಿಎಸ್‌ವೈ

KannadaprabhaNewsNetwork | Updated : May 03 2024, 12:47 PM IST

ಸಾರಾಂಶ

ಆನವಟ್ಟಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಮತಯಾಚನೆಯ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

 ಶಿವಮೊಗ್ಗ / ಆನವಟ್ಟಿ :  ನಾನು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ, ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ, ಜಾರಿ ಮಾಡಿದ್ದ, ಭಾಗ್ಯಲಕ್ಷ್ಮೀ ಬಾಂಡ್‍ ಈಗ ಆ ಹೆಣ್ಣು ಮಕ್ಕಳಿಗೆ ಒಂದು ಲಕ್ಷ ಹಣ ಸಿಗುತ್ತಿದೆ. ಇಂತಹ ಭಾಗ್ಯಲಕ್ಷ್ಮೀ ಬಾಂಡ್‍ ಏಕೆ ನಿಲ್ಲಿಸಿದ್ದೀರಿ ಸಿದ್ದರಾಮಯ್ಯನವರೇ ಎಂದು ನಿಮ್ಮನ್ನು ಕೇಳಿದರೇ ನಿಮ್ಮ ಬಳಿ ಉತ್ತರ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಕ್ರೋಶಭರಿತರಾಗಿ ಮಾತನಾಡಿದರು.

ಆನವಟ್ಟಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಮತಯಾಚನೆಯ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.

ಕಿಸಾನ್‍ ಸನ್ಮಾನ್‍ ಸೇರಿದಂತೆ ನಾನು ಜಾರಿಗೆ ತಂದಿರುವ ಬಹುತೇಕ ಯೋಜನೆಗಳನ್ನು ನಿಲ್ಲಿಸಿದ್ದೀರಿ , ಗ್ಯಾರಂಟಿ ಹೆಸರಲ್ಲಿ ಸರ್ಕಾರ ದಿವಾಳಿಯಾಗಿದೆ ಎಂದು ಕುಟುಕಿದರು.

ಕೇಂದ್ರದಿಂದ ರಾಘವೇಂದ್ರ ಜಿಲ್ಲೆಯ ಅಭಿವೃಧಿಗೆ 20 ಸಾವಿರ ಕೋಟಿಗೂ ಹೆಚ್ಚು ಅನುದಾನ 10 ವರ್ಷದಲ್ಲಿ ತಂದಿದ್ದಾರೆ. ಹೆಚ್ಚು ಕೇಂದ್ರದ ಅನುದಾನ ಪಡೆದು ಕ್ಷೇತ್ರದ ಅಭಿವೃಧಿ ಮಾಡಿರುವವರಲ್ಲಿ ದೇಶದಲ್ಲೇ ಎರಡನೇ ಸ್ಥಾನ ಪಡೆದಿರುವುದರಿಂದ ಮತ್ತು ಮೋದಿ ಅವರು ಮತ್ತೋಮ್ಮೆ ಪ್ರಧಾನಿ ಮಾಡುವ ನಿಟ್ಟಿನಲ್ಲಿ ಬಿಜೆಪಿಗೆ ಮತ ಹಾಕಿ ಎಂದ ಅವರು ಮೂರು ಲಕ್ಷ ಮತಗಳ ಅಂತರದಲ್ಲಿ ರಾಘವೇಂದ್ರ ಗೆದ್ದು ಕೇಂದ್ರದ ಮಂತ್ರಿ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ, ವಿಧಾನ ಪರಿಷತ್‍ ಸದಸ್ಯರಾದ ಭಾರತಿ ಶೆಟ್ಟಿ, ಡಿ.ಎಸ್‍ ಅರಣಕುಮಾರ್ ಮುಖಂಡರಾದ ರಘು ಕೌಟಿಲ್ಯ,ಟಿ.ಡಿ ಮೇಘರಾಜ್‍ ಬಿ.ವೈ.ರಾಘವೇಂದ್ರ ಪರ ಮತಯಾಚನೆ ಮಾಡಿದರು.

ಸಭೆಯಲ್ಲಿ ಆನವಟ್ಟಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕೊಟ್ರಯ್ಯ ಸ್ವಾಮಿ ನೇರಲಗಿ, ಮುಖಂಡರಾದ ಪ್ರಕಾಶ್ ತಲಕಾಲಕೊಪ್ಪ,ಎಂ.ಡಿ ಉಮೇಶ್, ರಾಜು ತಲ್ಲೂರು, ಪ್ರಕಾಶ್ ಅಗಸನಹಳ್ಳಿ, ಶಿವನಗೌಡ, ಕೆರಿಯಪ್ಪ, ವಿಶ್ವನಾಥ, ಬಿ.ಎಚ್‍ ಕೃಷ್ಣಮೂರ್ತಿ, ರಾಜು ಬಡಗಿ, ಗೀತಾ ಮಲ್ಲಿಕಾರ್ಜುನ್‍, ಮಲ್ಲಿಕಾರ್ಜುನ್‍ ವೃತ್ತಿಕೊಪ್ಪ ಇದ್ದರು.

ವಿಪಕ್ಷಗಳು ಸ್ಪರ್ಧೆಗೆ ಯೋಚಿಸುವ ಅಂತರದಲ್ಲಿ ರಾಘವೇಂದ್ರ ಗೆಲುವು: ಮಾಜಿ ಸಿಎಂ ಯಡಿಯೂರಪ್ಪ ಭವಿಷ್ಯ

ಶಿವಮೊಗ್ಗ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೆ ಮುಂದೆ ನೋಡಬೇಕು. ಅಷ್ಟು ಅಂತರದಲ್ಲಿ ಬಿ.ವೈ.ರಾಘವೇಂದ್ರ ಅವರು ಗೆಲ್ಲಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಜಗತ್ತು ಮೋದಿ ಅವರನ್ನು ನೋಡುತ್ತಿದೆ. ಕುಮಾರಸ್ವಾಮಿ ಅವರ ಸಹಕಾರ, ನರೇಂದ್ರ ಮೋದಿಯವರ ಅಲೆಯಿಂದಾಗಿ ರಾಘವೇಂದ್ರ ಹೆಚ್ಚಿನ ಅಂತರದಲ್ಲಿ ಗೆಲ್ಲಲಿದ್ದಾರೆ ಎಂದರು.

ಕಾಂಗ್ರೆಸ್ ಮುಳುಗುತ್ತಿರುವ ಹಡಗು. ನರೇಂದ್ರ ಮೋದಿಯವರ ಮುಂದೆ ಸರಿ ಸಮನಾಗಿ ನಿಲ್ಲುವ ವ್ಯಕ್ತಿ ಯಾರೂ ಇಲ್ಲ. ಚುನಾವಣಾ ಆದ ನಂತರ ಬೇಜವಾಬ್ದಾರಿ ಹೇಳಿಕೆ ನಿಲ್ಲುತ್ತೆ. ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದ್ದಾರೆ. ರಾಜ್ಯವನ್ನು ಮಾದರಿ ರಾಜ್ಯ ಮಾಡಲು ರಾಘವೇಂದ್ರಗೆ ದೆಹಲಿಗೆ ಕಳಿಸುತ್ತಿದ್ದೇವೆ ಎಂದರು.

ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ 28 ಗೆಲ್ಲುತ್ತೇವೆ. ಜೆಡಿಎಸ್ ಪಕ್ಷದ ಜೊತೆಗಿನ ಹೊಂದಾಣಿಕೆ ಪ್ರಧಾನಿ ಮೋದಿ ಅವರ ಪ್ರಭಾವ ಬಿಜೆಪಿ ಗೆಲುವಿಗೆ ಅನುಕೂಲವಾಗುತ್ತದೆ. ನಾಳೆಯಿಂದ ಮತ್ತೆ ನನ್ನ ಪ್ರವಾಸ ಆರಂಭವಾಗಲಿದೆ. ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣವಿದೆ. ಅಮಿತ್ ಶಾ, ನಡ್ಡಾ ಪ್ರಚಾರಕ್ಕೆ ಬರುತ್ತಿದ್ದಾರೆ. ಇವೆಲ್ಲದರ ಪರಿಣಾಮ 28ಕ್ಕೆ 28 ಕ್ಷೇತ್ರಗಳಲ್ಲಿ ಗೆಲ್ಲುವ ನಮ್ಮ ಸಂಕಲ್ಪದಲ್ಲಿ ಯಶಸ್ವಿ ಆಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share this article