ಕನ್ನಡಪ್ರಭ ವಾರ್ತೆ ಅಫಜಲ್ಪುರ
ಕಾಂಗ್ರೆಸ್ ಪಕ್ಷ ಬಡವರ ಪರವಾಗಿ ಇರುವ ಪಕ್ಷವಾಗಿದೆ.ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿಗಳನ್ನು ಕೊಟ್ಟಿದ್ದು ಈ ಗ್ಯಾರಂಟಿ ಯೋಜನೆಗಳು ಎಲ್ಲ ವರ್ಗದ ಜನರಿಗೆ ತಲುಪಿವೆ. ಈ ಮೂಲಕ ಬಡವರ ಸಂಕಷ್ಟಕ್ಕೆ ನಾವು ನೆರವಾಗಿದ್ದೇವೆ. ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬೇಕು. ನೀವೆಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ಅವರಿಗೆ ಮತ ನೀಡಿ ಅವರನ್ನು ಲೋಕಸಭೆಗೆ ಕಳುಹಿಸಬೇಕು ಎಂದು ಶಾಸಕ ಎಂ ವೈ ಪಾಟೀಲ ಹೇಳಿದರು.ಅವರು ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಹಮ್ಮಿಕೊಂಡ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ ನಮ್ಮ ರಾಜ್ಯ ಸರಕಾರದ ಮಹಿಳೆಯರಿಗೆ ಮಾಸಿಕ ಎರಡು ಸಾವಿರ ರೂಪಾಯಿ, ಉಚಿತ ವಿದ್ಯುತ್, ಉಚಿತ ಬಸ್ ಪ್ರಯಾಣ ಮೊದಲಾದ ಪಂಚ ಗ್ಯಾರಂಟಿ ಯೊಜನೆಗಳು ಜನರ ಬದುಕನ್ನು ಹಸನಾಗಿಸಿವೆ.
ಕಳೆದ ಐವತ್ತು ವರ್ಷದಿಂದ ಮಲ್ಲಿಕಾರ್ಜುನ ಖರ್ಗೆ ಅವರು ಈ ಭಾಗದ ಜನರ ಧ್ವನಿಯಾಗಿ ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ಕೆಲಸ ಮಾಡಿದ್ದಾರೆ ಬ್ಯಾರೇಜ್, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ರೇಲ್ವೆ ಕೋಚ್ ಫ್ಯಾಕ್ಟರಿ, ಕೇಂದ್ರಿಯ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ಕೆಲಸಗಳು ಮಾಡಿದ್ದಾರೆ. ಬಿಜೆಪಿಯವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿವೆ ಎಂದು ಹೇಳಿದರು.ಮಾಜಿ ಸಚಿವ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಮಾತನಾಡಿ ಮಲ್ಲಿಕಾರ್ಜುನ ಖರ್ಗೆ ಅವರು 371 ಜೆ ಕಲಬುರಗಿಗೆ ವಿಮಾನ ನಿಲ್ದಾಣ, ಇಎಸ್ಐ ಆಸ್ಪತ್ರೆ, ಜಿಮ್ಸ್ ಆಸ್ಪತ್ರೆ ಇನ್ನೂ ಹಲವಾರು ಕೆಲಸಗಳು ಮಾಡಿದ್ದಾರೆ. ಆದರೆ ಬಿಜೆಪಿಯ ಅಭ್ಯರ್ಥಿ ಉಮೇಶ ಜಾಧವ ಎನು ಮಾಡಿದ್ದಾರೆ? ಊರಿಗೆ ಬರದೇ, ಜನರ ಕಷ್ಟ ಕೇಳದೇ ಈಗ ಬಂದು ಮೋದಿ ನೋಡಿ ಓಟು ಕೇಳುತ್ತಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಿಂದೂ ಮುಸ್ಲಿಂ ಎಂದು ಹೇಳಿ ಧರ್ಮದ ಒಡಕು ಉಂಟು ಮಾಡುತ್ತಿದ್ದಾರೆ.ಸೌಹಾರ್ದತೆ ಹಾಳು ಮಾಡುತ್ತಿದ್ದಾರೆ ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿ ರಸಗೊಬ್ಬರ ಬೆಲೆ 1500 ರುಪಾಯಿ ಮಾಡಿದ್ದಾರೆ. ಮಹಿಳೆಯರಿಗೆ ಹಣ ಕೊಟ್ಟರೆ ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ.ಆದರೆ ನರೇಂದ್ರ ಮೋದಿಯವರು ಶ್ರೀಮಂತರ ಸಾಲ ಮನ್ನಾ ಮಾಡಿದ್ದಾರೆ.ಆದರೆ ರೈತರ ಸಾಲ ಮನ್ನಾ ಮಾಡಲಿಲ್ಲ ಆದ್ದರಿಂದ ತಾವೆಲ್ಲರೂ ಈ ಬಾರಿ ಮೇ 7ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ಅವರಿಗೆ ಮತ ನೀಡಿ ಅವರನ್ನು ಲೋಕಸಭೆಗೆ ಕಳುಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಶರಣಪ್ಪ ಮಟ್ಟೂರ, ಮಕ್ಬೂಲ್ ಪಟೇಲ, ಕೆಪಿಸಿಸಿ ಸದಸ್ಯ ಪಪ್ಪು ಪಟೇಲ, ಮಹಾದೇವಪ್ಪ ಕರೂಟಿ, ಗುರುಬಾಳ ಜಕಾಪೂರ, ವಿವೇಕಾನಂದ ಕೋಗಟನೂರ, ಸಿದ್ದಪ್ಪ ಹತ್ತರಕಿ, ಬಸವರಾಜ ವಾಯಿ, ಮಲ್ಲಿಕಾರ್ಜುನ ಚಣೇಗಾಂವ, ಅಣ್ಣಾರಾವ ಮುಜಗೊಂಡ, ಶಿವಶರಣಪ್ಪ ಅರಳಾ, ಯಶ್ವಂತ ಕರೂಟಿ, ಭೀಮಾಶಂಕರ ಪೂಜಾರಿ, ಮಹಾಂತೇಶ ಕರೂಟಿ, ಬಸವರಾಜ ಕರೂಟಿ, ವೇಣುಮಾಧವ ಅವಧಾನಿ, ಶ್ರೀಕಾಂತ ನಿವರಗಿ, ಜಗದೀಶ ದೇಶಟ್ಟಿ, ಸುಭಾಷ ಪ್ಯಾಟಿ, ಸುಭಾಷ ವಾಲಿ, ಬಸವರಾಜ ಅಳ್ಳಗಿ, ಮಹಾಂತೇಶ ಜಕಾಪೂರ, ಮಹಿಮೂದ ಡಾಂಗೆ, ಯಲ್ಲಪ್ಪ ನಡುವಿನಕೇರಿ ಇತರರಿದ್ದರು.