ತಾಲೂಕಿನ ಗುಡದಳ್ಳಿ ಗ್ರಾಮದಲ್ಲಿ ಸಂವಿಧಾನ ಪೀಠಿಕೆ ಓದುವುದರೊಂದಿಗೆ ಮಾಂಗಲ್ಯಧಾರಣೆ ಮಾಡುವ ಮೂಲಕ ವಿಶಿಷ್ಟವಾಗಿ ಸಾಮೂಹಿಕ ವಿವಾಹ ನಡೆಸಲಾಯಿತು.
- ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಗುಡದಳ್ಳಿ ಗ್ರಾಮ । ಸಾಮೂಹಿಕ ವಿವಾಹಕನ್ನಡಪ್ರಭ ವಾರ್ತೆ ಕೊಪ್ಪಳ
ತಾಲೂಕಿನ ಗುಡದಳ್ಳಿ ಗ್ರಾಮದಲ್ಲಿ ಸಂವಿಧಾನ ಪೀಠಿಕೆ ಓದುವುದರೊಂದಿಗೆ ಮಾಂಗಲ್ಯಧಾರಣೆ ಮಾಡುವ ಮೂಲಕ ವಿಶಿಷ್ಟವಾಗಿ ಸಾಮೂಹಿಕ ವಿವಾಹ ನಡೆಸಲಾಯಿತು.
ಡಾ. ಬಾಬಾಸಾಹೇಬ್ ಅಂಬೇಡ್ಕರ್ 134ನೇ ಜಯಂತಿ ಅಂಗವಾಗಿ ಸರಳವಾಗಿ ಸುಮಾರು 41 ಜೋಡಿಗಳ ಸಾಮೂಹಿಕ ವಿವಾಹ ಯಶಸ್ವಿಯಾಗಿ ನೆರವೇರಿತು.
ಸಾನಿಧ್ಯ ವಹಿಸಿದ್ದ ಹೆಬ್ಬಾಳದ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಹಂಪಿಯ ಮಾತಂಗ ಪರ್ವತದ ಪೂರ್ಣನಂದ ಭಾರತಿ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಕೊಪ್ಪಳ ಗ್ರಾಮೀಣ ವೃತ್ತದ ನಿಕಟಪೂರ್ವ ಸಿಪಿಐ ವಿಶ್ವನಾಥ ಹಿರೇಗೌಡ್ರರ ಮಾತನಾಡಿ, ಇಂತಹ ಸಾಮೂಹಿಕ ಮದುವೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಜೆಡಿಎಸ್ ಕೋರ್ ಕಮಿಟಿ ರಾಜ್ಯ ಸದಸ್ಯ ಸಿ.ವಿ. ಚಂದ್ರಶೇಖರ್, ಸಮಾಜದ ಯುವ ಮುಖಂಡ ಗೂಳಪ್ಪ ಹಲಗೇರಿ ಮಾತನಾಡಿದರು.
ಉದ್ಯಮಿ ವೆಂಕಟೇಶ್ ಬಾರಕೇರ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ನೆರವು ನೀಡಿದ್ದನ್ನು ಸ್ಮರಿಸಲಾಯಿತು.
ಸಂವಿಧಾನ ಪೀಠಿಕೆಯನ್ನು ವಕೀಲ ಡಿ.ಎಂ. ಪೂಜಾರ ಬೋಧಿಸಿದರು. ಜಿ.ಎಂ. ಗೊರವರ ಪ್ರಾಸ್ತಾವಿಕವಾಗಿ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.