ಕನ್ನಡಪ್ರಭ ವಾರ್ತೆ ನಾಗಮಂಗಲ
ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ಚುನಾವಣೆಯು ಜು.21 ನಡೆಯಲಿದೆ. ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಪಾಂಡವಪುರ ತಾಲೂಕಿನ ಅಮೃತಿ ಗ್ರಾಮದ ಡಿ.ಶಂಕರ್ ಅವರನ್ನು ಬೆಂಬಲಿಸುವಂತೆ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಕಲ್ಲಿನಾಥಪುರ ಗ್ರಾಮದ ಪರಮೇಶ್ ಮನವಿ ಮಾಡಿದರು.ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಚುನಾವಣೆ ನಡೆಯುತ್ತಿದೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅಮೃತಿ ಗ್ರಾಮದ ಡಿ.ಶಂಕರ್ ನೇತೃತ್ವದ ತಂಡ ಸ್ಪರ್ಧೆ ಮಾಡಿದೆ ಎಂದರು.
ಲಿಂಗಾಯತ ಸಮಾಜದ ಮುಖಂಡರು ಹಾಗೂ ಮತದಾರರು ಸಮಾಜದ ಕೆಲಸದಲ್ಲಿ ಅನುಭವವಿರುವ, ಯುವ ಉತ್ಸಾಹಿ ಹಾಗೂ ಸದಾ ಸಮಾಜದ ಪರ ಒಳ್ಳೆಯ ಚಿಂತನೆಯುಳ್ಳ ಡಿ.ಶಂಕರ್ ಅವರನ್ನು ತಾಲೂಕು ಹಾಗೂ ಜಿಲ್ಲೆಯ ಮತದಾರರು ಬೆಂಬಲಿಸಿ ಆಶೀರ್ವದಿಸಬೇಕೆಂದು ತಿಳಿಸಿದರು.ಮಂಡ್ಯ ಜಿಲ್ಲೆಯ ನಿರ್ದೇಶಕ ಸ್ಥಾನಕ್ಕೆ ತಾಲೂಕಿನ ಬ್ರಹ್ಮದೇವರಹಳ್ಳಿ ಮಹದೇವ್ ಸ್ಪರ್ಧೆ ಮಾಡಿದ್ದು, ಇವರಿಗೂ ಸಹ ತಾಲೂಕಿನ ಹಾಗೂ ಜಿಲ್ಲೆಯ ಸಮುದಾಯದ ಮತದಾರರು ಬೆಂಬಲಿಸುವ ಮೂಲಕ ಇವರನ್ನು ಜಿಲ್ಲೆಯ ನಿರ್ದೇಶಕ ಸ್ಥಾನಕ್ಕೆ ಚುನಾಯಿತಗೊಳಿಸಬೇಕು ಎಂದು ಮನವಿ ಮಾಡಿದರು.
ಬ್ರಹ್ಮದೇವರಹಳ್ಳಿ ಮಹದೇವ್ ಅವರು ತಾಲೂಕಿನಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಏಕೈಕ ವ್ಯಕ್ತಿ. ಸೃಜನಶೀಲ ಮತ್ತು ಎಲ್ಲಾ ಸಮಾಜದ ಮುಖಂಡರೊಂದಿಗೆ ಉತ್ತಮ ಬಾಂಧವ್ಯವಿಟ್ಟುಕೊಂಡಿರುವ ವ್ಯಕ್ತಿಯಾಗಿದ್ದಾರೆ. ಅಲ್ಲದೇ, ಈಗಾಗಲೇ ಹಲವು ಸಮಾಜ ಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ದರಿಂದ ಇಂತಹ ವ್ಯಕ್ತಿಗೆ ಮತ ನೀಡಿ ಸಮಾಜ ಕಟ್ಟುವ ಕಾಯಕಕ್ಕೆ ಅನುಕೂಲ ಕಲ್ಪಿಸಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ಉಪಾಧ್ಯಕ್ಷೆ ಗೀತಾ ಗುರುಪ್ರಸಾದ್, ವಕೀಲ ಜೈಪ್ರಕಾಶ್, ಅಭ್ಯರ್ಥಿ ಮಹದೇವ್ ಹಾಗೂ ನಿರ್ದೇಶಕ ಮಹೇಂದ್ರ ಇದ್ದರು.