ಪೌರ ನೌಕರರ ಹೋರಾಟಕ್ಕೆ ಬೆಂಬಲವಿದೆ; ಮಾಜಿ ಸಚಿವ ಬಂಡಿ

KannadaprabhaNewsNetwork |  
Published : May 31, 2025, 12:04 AM IST
ಗಜೇಂದ್ರಗಡ ಪುರಸಭೆ ಆವರಣದಲ್ಲಿ ಪೌರ ನೌಕರರು ನಡೆಸುತ್ತಿದ್ದ ಮುಷ್ಕರಕ್ಕೆ ಮಾಜಿ ಸಚಿವ ಕಳಕಪ್ಪ ಬಂಡಿ ಬೆಂಬಲ ಸೂಚಿಸಿದರು. | Kannada Prabha

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಪುರಸಭೆ ಪೌರ ನೌಕರರ ಹೋರಾಟಕ್ಕೆ ಬೆಂಬಲವಿದೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.

ಗಜೇಂದ್ರಗಡ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಪುರಸಭೆ ಪೌರ ನೌಕರರ ಹೋರಾಟಕ್ಕೆ ಬೆಂಬಲವಿದೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.

ಸ್ಥಳೀಯ ಪುರಸಭೆ ಆವರಣದಲ್ಲಿ ಪಟ್ಟಣದ ಪೌರ ನೌಕರರು ನಡೆಸುತ್ತಿದ್ದ ಮುಷ್ಕರಕ್ಕೆ ಶುಕ್ರವಾರ ಬೆಂಬಲ ಸೂಚಿಸಿ ಮಾತನಾಡಿದರು.ಪಟ್ಟಣದ ಜನತೆ ಎದ್ದೇಳುವ ಮುಂಚಿತವಾಗಿ ಪಟ್ಟಣವನ್ನು ಸ್ವಚ್ಛವಾಗಿಡುವುದರ ಜತೆಗೆ ನೀರು ಸೇರಿ ಅನೇಕ ಮೂಲ ಸೌಕರ್ಯಗಳನ್ನು ಒಸಗಿಸುವ ಪೌರ ನೌಕರರ ಕಾರ್ಯ ಅನನ್ಯವಾದದ್ದು. ಸರ್ಕಾರಿ ನೌಕರರಿಗೆ ನೀಡುವ ಸೌಲಭ್ಯಗಳನ್ನು ತಮಗೆ ನೀಡಬೇಕು ಎಂಬ ಬೇಡಿಕೆ ನ್ಯಾಯ ಸಮ್ಮತವಾದದ್ದು ಎಂದರು.ಇದಕ್ಕೂ ಮುನ್ನ ಮುಷ್ಕರ ನಡೆಸುತ್ತಿದ್ದ ಪೌರ ನೌಕರರು, ಸರ್ಕಾರಿ ನೌಕರರಿಗೆ ನೀಡುತ್ತಿರುವ ಸೌಲಭ್ಯಗಳನ್ನು ಪೌರ ನೌಕರರಿಗೆ ಜ್ಯೋತಿ ಸಂಜೀವಿನಿ ಕೆಜಿಐಡಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನೀಡಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜು ಸಹಾಯಕರು, ಚಾಲಕರು, ಲೋಡರ್ಸ್, ಗಾರ್ಡನರ್ ಸ್ಯಾನಿಟರಿ, ಯುಜಿಡಿ ಸಹಾಯಕರು ಸೇರಿದಂತೆ ವಿವಿಧ ವೃಂದದ ಹೊರಗುತ್ತಿಗೆ ನೌಕರರನ್ನು ನೇತ ಪಾವತಿಗೆ ಒಳಪಡಿಸಬೇಕು. ದಿನಗೂಲಿ ಕ್ಷೇಮಾಭಿವೃದ್ಧಿ ಸಮಾನ ಕೆಲಸ ಸಮಾನ ವೇತನ ನೌಕರರನ್ನು ಕಾಯಂಗೊಳಿಸಬೇಕು ಎಂಬ ಬೇಡಿಕೆಗಳಿವೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಅವರೆದುರು ಹೇಳಿಕೊಂಡರು.ಈ ವೇಳೆ ಮಹಾಂತೇಶ ಪೂಜಾರ, ನೌಕರರ ಸಂಘದ ಸಿ.ಡಿ.ದೊಡ್ಡಮನಿ, ಶಿವಪ್ಪ ಮಾದರ, ಎಸ್.ಜಿ. ಕಡೇತೋಟದ, ಮಲ್ಲಿಕಾರ್ಜುನ ಬಿ., ಗುರಪ್ಪ ಪಟ್ಟಣಶೆಟ್ಟಿ, ಶಿವು ಇಲಾಳ, ರಾಜು ನಿಶಾನದಾರ, ಜಿ.ಎನ್. ಕಾಳೆ, ಎನ್.ಎ.ಸಾಂಗ್ಲೀಕಾರ, ಬಾಷೇಸಾಬ ಗಡಾದ, ಉಮಾ ಕುರಹಟ್ಟಿ ಸೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ