ಈ ಬಾರಿ ಗಾಯತ್ರಿಯವರಿಗೆ ಬೆಂಬಲ ನೀಡಿ: ಮುರುಗೇಶ್ ನಿರಾಣಿ

KannadaprabhaNewsNetwork |  
Published : Mar 19, 2024, 12:50 AM IST
ಹೊನ್ನಾಳಿ ಫೋಟೋ 18ಎಚ್.ಎಲ್.ಐ2. ಗಾಯತ್ರಿ ಸಿದ್ದೇಶ್ವರ್ ಅವರಿಗೆ ಟಿಕೆಟ್ ನೀಡಬಾರದೆಂದು ಒತ್ತಾಯಿಸುತ್ತಿರುವ ವಿರೋಧಿ ಬಣದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ನಿವಾಸಕ್ಕೆ ಮಾಜಿ ಸಚಿವ ಮುರುಗೇಶ್ ನಿರಾಣಿ,ವಿಧಾನಪರಿಷತ್ತು ಸದಸ್ಯ ಎನ್.ರವಿಕುಮಾರ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ಭೇಟಿ ಮಾಡಿರುವುದು. | Kannada Prabha

ಸಾರಾಂಶ

ಮಾಜಿ ಸಚಿವ ಮುರುಗೇಶ್ ನಿರಾಣಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರೊಂದಿಗೆ ಜತೆ ಚರ್ಚೆ ನಡೆಸಿ, ನೀವು ಹಾಗೂ ನಿಮ್ಮ ಎಲ್ಲಾ ತಂಡವು ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಪತ್ನಿ ಗಾಯತ್ರಿಯವರಿಗೆ ಬೆಂಬಲ ನೀಡಿ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ದೇನೆ. ಸಮಸ್ಯೆಗಳು ಏನೇ ಇದ್ದರೂ ಚರ್ಚಿಸಿ ಬಗೆ ಹರಿಸಿಕೊಳ್ಳೋಣ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಸಂಸದ ಜಿ.ಎಂ.ಸಿದ್ದೇಶ್ವರ ಕುಟುಂಬಕ್ಕೆ ಬಿಜೆಪಿಯಿಂದ ಟಿಕೆಟ್ ನೀಡಬಾರದು ಎಂದು ಪಟ್ಟು ಹಿಡಿದಿರುವ ವಿರೋಧಿ ಬಣದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನಿವಾಸಕ್ಕೆ ಸೋಮವಾರ ಮಾಜಿ ಸಚಿವ ಮುರುಗೇಶ್ ನಿರಾಣಿ, ವಿಧಾನ ಪರಿಷತ್‌ ಸದಸ್ಯ ಎನ್.ರವಿಕುಮಾರ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ಭೇಟಿ ನೀಡಿ ಚರ್ಚಿಸಿದರು.

ಈ ವೇಳೆ ಮಾಜಿ ಸಚಿವ ಮುರುಗೇಶ್ ನಿರಾಣಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರೊಂದಿಗೆ ಜತೆ ಚರ್ಚೆ ನಡೆಸಿ, ನೀವು ಹಾಗೂ ನಿಮ್ಮ ಎಲ್ಲಾ ತಂಡವು ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಪತ್ನಿ ಗಾಯತ್ರಿಯವರಿಗೆ ಬೆಂಬಲ ನೀಡಿ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ದೇನೆ. ಸಮಸ್ಯೆಗಳು ಏನೇ ಇದ್ದರೂ ಚರ್ಚಿಸಿ ಬಗೆ ಹರಿಸಿಕೊಳ್ಳೋಣ ದಯಮಾಡಿ ಈ ಬಾರಿ ಅವರಿಗೆ ಬೆಂಬಲ ಕೊಡಿ ಎಂದು ಮನವಿ ಮಾಡಿದ್ದೇನೆ. ಇದು ಒಂದು ಕುಟುಂಬದ ವೈಮನಸ್ಸು, ಬಹಳ ದಿನ ಇರುವುದಿಲ್ಲ ಎಲ್ಲವೂ ಸರಿ ಹೋಗುತ್ತದೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.

ಒಬ್ಬನಿಂದ ಮಾತ್ರ ನಿರ್ಧಾರವಲ್ಲ:

ಮುರುಗೇಶ್ ನಿರಾಣಿ ತೆರಳಿದ ನಂತರ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಮುರುಗೇಶ್ ನಿರಾಣಿ ಬಂದು ಎಲ್ಲರೂ ಬೆಂಬಲ ನೀಡಿ ಎಂದು ಕೋರಿದರು. ಆದರೆ ನಾನು ಯಾವುದೇ ಕಾರಣಕ್ಕೂ ಆಗುವುದಿಲ್ಲ, ಅಭ್ಯರ್ಥಿ ಬದಲಾಗಬೇಕು ಎಂದು ಹೇಳಿದ್ದೇನೆ, ಅದು ಅಲ್ಲದೆ ಈ ವಿಷಯ ನನ್ನ ನಿರ್ಧಾರ ಅಲ್ಲ, ಎಲ್ಲರೂ ನಿರ್ಧಾರ ಮಾಡಿರುವುದರಿಂದ ನಾನು ಒಬ್ಬ ಮಾತ್ರ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ. ದಯಮಾಡಿ ಬೇಜಾರು ಆಗಬೇಡಿ ಎಂದು ಹೇಳಿ ಕಳುಹಿಸಿದ್ದೇನೆ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ರಾಜಶೇಖರ್ ಹುಟ್ಟುಹಬ್ಬ ಆಚರಣೆ

ಈ ವೇಳೆ ನೂತನವಾಗಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಶೇಖರ್ ಹುಟ್ಟುಹಬ್ಬವನ್ನು ಮಾಜಿ ಸಚಿವ ಎಂಪಿ.ರೇಣುಕಾಚಾರ್ಯ ಮನೆಯಲ್ಲಿ ಆಚರಿಸಿ ಸಿಹಿ ತಿನ್ನಿಸಿದರು. ಶಿವುಹುಡೇದ್, ಸುರೇಂದ್ರನಾಯ್ಕ್, ಗಿರೀಶ್, ಮಂಜುನಾಥ್, ಕೆ.ವಿ.ಶ್ರೀಧರ್, ಬ್ರಾಹ್ಮಣ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಶ್ರೀನಿವಾಸ್, ಮಾರುತಿನಾಯ್ಕ್ ಇತರರು ಇದ್ದರು.

ಸಿದ್ದೇಶ್ವರ ವಿರೋಧಿ ಗುಂಪಿನ ಒಗ್ಗಟ್ಟು ಒಡೆಯಲು ಅಪಪ್ರಚಾರ: ಮಾಡಾಳು ಮಲ್ಲಿಕಾರ್ಜುನ್

ಕನ್ನಡಪ್ರಭ ವಾರ್ತೆ ಚನ್ನಗಿರಿಶಿವಮೊಗ್ಗ ನಗರದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಕ್ಷೇತ್ರದ ಜನರ ಆಹ್ವಾನಿಸುವ ಉದ್ದೇಶದಿಂದ ಶನಿವಾರ ಚನ್ನಗಿರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದೆ. ಆದರೆ ಕೆಲ ರಾಜಕೀಯ ವಿರೋಧಿಗಳು ಫೋಟೋ ಹಾಕಿ ಮುನಿಸು ಬಿಟ್ಟು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೆಂಬಲಿಸಿದ ಮಾಡಾಳು ಮಲ್ಲಿಕಾರ್ಜುನ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದು ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.ಸೋಮವಾರ ಸಂಜೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದರ ಬಗ್ಗೆ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿನ ಬಿಜೆಪಿ ನಾಯಕರು ಅಸಮಾಧಾನಿತರಾಗಿದ್ದು ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ, ಕರುಣಾಕರ ರೆಡ್ಡಿ, ಲೋಕಿಕೆರೆ ನಾಗರಾಜ್, ಬಿ.ಜಿ.ಅಜಯ್ ಕುಮಾರ್, ಶಿವಯೋಗಿ ಸ್ವಾಮಿ, ಗುರುಸಿದ್ದನಗೌಡ, ಡಾ.ರವಿಕುಮಾರ್, ಬಸವರಾಜನಾಯ್ಕ್ ಸೇರಿ ಇನ್ನು ಅನೇಕ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರು ಒಟ್ಟಾಗಿ ಈಗಿರುವ ಲೋಕಸಭಾ ಸದಸ್ಯರು ಮತ್ತು ಅವರ ಕುಟುಂಬ ಹೊರತುಪಡಿಸಿ ಬೇರೆಯವರಿಗೆ ಟಿಕೆಟ್ ನೀಡಿ ಎಂದು ರಾಜ್ಯ-ರಾಷ್ಟ್ರ ಮಟ್ಟದ ಬಿಜೆಪಿ ನಾಯಕರ ಗಮನಕ್ಕೆ ತಂದಿದ್ದು ಈ ಮಾತಿಗೆ ನಾವುಗಳೆಲ್ಲರೂ ಇಂದಿಗೂ ಬದ್ಧರಾಗಿದ್ದೇವೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪುರಸಭಾ ಸದಸ್ಯ ಪಟ್ಲಿ ನಾಗರಾಜ್, ಚಿಕ್ಕೂಲಿಕೆರೆ ಸಂಗಮೇಶ್, ಮಾಚನಾಯ್ಕನಹಳ್ಳಿ ಜಯಣ್ಣ ಹಾಜರಿದ್ದರು.ಗುಂಪಿನ ತೀರ್ಮಾನಕ್ಕೆ ಬದ್ಧ ನಮ್ಮ ಗುಂಪು ಕೆಡಿಸುವ ಉದ್ದೇಶದಿಂದ ಕೆಲ ರಾಜಕೀಯ ವಿರೋಧಿಗಳು ಈ ರೀತಿ ಅಪ ಪ್ರಚಾರ ನಡೆಸುತ್ತಿದ್ದು ನಮ್ಮ ಗುಂಪಿನ ಒಗ್ಗಟ್ಟಿನ ತೀರ್ಮಾನಕ್ಕೆ ನಾನು ಬದ್ಧನಾಗಿದ್ದು ಜಿಲ್ಲೆಯ ಬಿಜೆಪಿ ಭೀಷ್ಮರಾಗಿರುವ ಎಸ್.ಎ.ರವೀಂದ್ರನಾಥ್ ಬಿಜೆಪಿಯ ನಾಯಕರ ಬಳಿ ನಮ್ಮ ಬೇಡಿಕೆಗಳ ಇಟ್ಟಿದ್ದು ನಮ್ಮಲ್ಲಿರುವ ಗೊಂದಲಗಳ ಬಗೆಹರಿಸಿದ ನಂತರ ಗುಂಪಿನ ತೀರ್ಮಾನಕ್ಕೆ ನಾನು ಬದ್ದನಾಗಿದ್ದು ಕ್ಷೇತ್ರದ ಜನರು ಸುಳ್ಳು ಸುದ್ದಿಗಳಿಗೆ ಮತ್ತು ಅಪಪ್ರಚಾರಗಳಿಗೆ ಕಿವಿಗೊಡಬಾರದು. ಮಾಡಾಳು ಮಲ್ಲಿಕಾರ್ಜುನ್, ಬಿಜೆಪಿ ಮುಖಂಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!